ಕೇರಳ ನ್ಯಾಯಾಲಯವು ಕೇಂದ್ರ ಮತ್ತು ರಾಜ್ಯ ಸರಕಾರದಿಂದ ಉತ್ತರ ಕೇಳಿದೆ !
ತಿರುವನಂತಪುರಂ (ಕೇರಳ) – ಕೇರಳ ಉಚ್ಚನ್ಯಾಯಾಲಯವು ರಾಜ್ಯ ಮತ್ತು ಕೇಂದ್ರ ಸರಕಾರವು ಮುನಂಬಮ್ ನ 600 ಕುಟುಂಬಗಳ ಭೂಮಿಗೆ ಸಂಬಂಧಿಸಿದ ಪ್ರಮಾಣಪತ್ರಗಳನ್ನು ಸಲ್ಲಿಸುವಂತೆ ರಾಜ್ಯ ಮತ್ತು ಕೇಂದ್ರ ಸರಕಾರಗಳಿಗೆ ಆದೇಶಿಸಿದೆ. ಈ ಭೂಮಿಯ ಮೇಲೆ ವಕ್ಫ್ ಬೋರ್ಡ್ ದಾವೆ ಮಾಡಿದೆ ಎಂದು ಹೇಳಿದೆ. ಮುನಂಬಮ್ ನಿವಾಸಿ ಜೋಸೆಫ ಬೆನಿ ಮತ್ತು ಇತರ 7 ಜನರ ಈ ಸಂದರ್ಬದಲ್ಲಿನ ಅರ್ಜಿ ಸಲ್ಲಿಸಿದ್ದಾರೆ. ಜೋಸೆಫ ಮತ್ತು ಇತರ ನಿವಾಸಿಗಳು ಕೋಳಿಕೋಡಿನಲ್ಲಿರುವ ಫಾರೂಕ್ ಕಾಲೇಜಿನ ಆಡಳಿತ ಸಮಿತಿಯಿಂದ ಭೂಮಿಯನ್ನು ಖರೀದಿಸಿದ್ದರು; ಆದರೆ ಈಗ ವಕ್ಫ್ ಬೋರ್ಡ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಮನವಿ ಮೇರೆಗೆ ಕಂದಾಯ ಅಧಿಕಾರಿಗಳು ಜಮೀನಿನ ದಾಖಲೆಗಳನ್ನು ವರ್ಗಾಯಿಸಲು ನಿರಾಕರಿಸಿದ್ದಾರೆ.
ದೂರುದಾರರು ವಕ್ಫ್ ಕಾಯ್ದೆಯ ಕಲಂ 14 ಸಂವಿಧಾನದ ವಿರುದ್ಧವಾಗಿದೆಯೆಂದು ಹೇಳಿದ್ದಾರೆ. ಈ ಕಾನೂನು ವಕ್ಫ್ ಬೋರ್ಡ್‌ಗೆ ಯಾವುದೇ ಟ್ರಸ್ಟ್ ಅಥವಾ ಸೊಸೈಟಿಯ ಆಸ್ತಿಯನ್ನು ತನ್ನದೆಂದು ಘೋಷಿಸುವ ಹಕ್ಕನ್ನು ನೀಡುತ್ತದೆ. ಈ ದೂರುದಾರರು ಹೇಳುವುದೇನೆಂದರೆ, ಈ ನಿಬಂಧನೆಗಳು ನೈಸರ್ಗಿಕ ನ್ಯಾಯ ಮತ್ತು ನಿಷ್ಪಕ್ಷಪಾತ ತತ್ವಗಳಿಗೆ ವಿರುದ್ಧವಾಗಿದೆ ವಕ್ಫ್ ಬೋರ್ಡ್‌ಗೆ ಮುಸ್ಲಿಮೇತರ ಜನರ ಆಸ್ತಿಯ ಬಗ್ಗೆ ಅಂತಹ ಅಧಿಕಾರ ನೀಡಬಾರದು. ವಕ್ಫ ಬೋರ್ಡ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ನಿವಾಸಿಗಳನ್ನು ತೆಗೆದುಹಾಕಲು ಅಧಿಕಾರ ನೀಡುವುದು ಸಂವಿಧಾನದ ಕಲಂ ‘300’ ಅ ಉಲ್ಲಂಘನೆಯಾಗಿದೆ ಎಂದು ಹೇಳಿದೆ.
ಏನಿದು ಪ್ರಕರಣ ?
2019 ರಲ್ಲಿ ವಕ್ಫ್ ಬೋರ್ಡ್ ಕೇರಳದ ಮುನಂಬಮ್, ಚೆರಾಯಿ ಮತ್ತು ಪಲ್ಲಿಕಲ್ ಈ ಪ್ರದೇಶಗಳು ತಮ್ಮ ಆಸ್ತಿ ಎಂದು ಹೇಳಿಕೊಂಡಿತ್ತು. ಕೇರಳದ ಈ ಭಾಗದಲ್ಲಿ 600 ಕ್ಕಿಂತ ಹೆಚ್ಚು ಕುಟುಂಬಗಳೇ ಇಲ್ಲ, ಬದಲಾಗಿ0 1989 ರಿಂದ ಸಕ್ರಮ ಭೂ ದಾಖಲೆಗಳೊಂದಿಗೆ ವಿವಿಧ ಧರ್ಮದ ಜನರು ವಾಸಿಸುತ್ತಿದ್ದಾರೆ. ಹೀಗಿರುವಾಗಲೂ ವಕ್ಫ್ ಬೋರ್ಡ ಈ ಪ್ರದೇಶದಲ್ಲಿ ತನ್ನ ಹಕ್ಕು ಇದೆಯೆಂದು ಹೇಳಿದೆ. ಈ ಕುಟುಂಬಗಳು ತಮ್ಮ ಭೂಮಿಯನ್ನು ಕಾನೂನುಬದ್ಧವಾಗಿ ಖರೀದಿಸಿತ್ತು; ಆದರೆ ಈಗ ಅವರಿಗೆ ಆ ಭೂಮಿಯನ್ನು ಬಲವಂತವಾಗಿ ಖಾಲಿ ಮಾಡುವಂತೆ ಆದೇಶಿಸಲಾಗುತ್ತಿದೆ, ಇದು ಅವರ ಮೂಲಭೂತ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದೆ.
ಸಂಪಾದಕೀಯ ನಿಲುವುಕೇಂದ್ರ ಸರಕಾರವು ವಕ್ಫ್ ಕಾಯಿದೆಯಲ್ಲಿ ಸುಧಾರಣೆ ಮಾಡುವ ಬದಲು ದೇಶದ ಮತ್ತು ಜನರ ಹಿತದೃಷ್ಟಿಯಿಂದ ಅದನ್ನು ರದ್ದುಗೊಳಿಸುವುದೇ ಸೂಕ್ತ ! |