Conspiracy Of Separate Christian Country : ಭಾರತ, ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್ ಅನ್ನು ವಿಭಜಿಸಿ ಪ್ರತ್ಯೇಕ ಕ್ರೈಸ್ತ ದೇಶವನ್ನು ಸ್ಥಾಪಿಸುವ ಷಡ್ಯಂತ್ರ !

ಮಿಜೋರಾಂನ ಕ್ರೈಸ್ತ ಮುಖ್ಯಮಂತ್ರಿ ಹಾಗೂ ಅಮೇರಿಕದ ಗುಪ್ತಚರ ಸಂಸ್ಥೆ ‘ಸಿಐಎ’ ಯ ಪಿತೂರಿ ಬಯಲು !

ವಾಷಿಂಗ್ಟನ (ಅಮೇರಿಕಾ) – ಮಿಜೋರಾಂ ಮುಖ್ಯಮಂತ್ರಿ ಪಿಯು ಲಾಲದುಹೋಮಾ ಅವರು ಸೆಪ್ಟೆಂಬರ್ 4, 2024 ರಂದು ಅಮೇರಿಕದ ಇಂಡಿಯಾನಾಪೊಲಿಸ್‌ನಲ್ಲಿ ಮಾಡಿದ ಭಾಷಣವು ಭಾರತದಲ್ಲಿ ಮಾತ್ರವಲ್ಲದೆ ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್‌ನಲ್ಲಿಯೂ ಸಾಕಷ್ಟು ಚರ್ಚೆಯಾಗುತ್ತಿದೆ. ಲಾಲದುಹೋಮಾ ಅವರು ತಮ್ಮ ಭಾಷಣದಲ್ಲಿ ಚಿನ್-ಕುಕಿ-ಜೋ ನ ಐಕ್ಯತೆ ಮತ್ತು ಒಂದು ದೇಶ ಎಂದು ಕರೆ ನೀಡಿದ್ದರು. ಚಿನ್-ಕುಕಿ-ಜೋ ಇದು ಭಾರತ, ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್‌ನಲ್ಲಿ ವಾಸಿಸುವ ಕ್ರೈಸ್ತ ಬುಡಕಟ್ಟು ಜನಾಂಗದವರಾಗಿದ್ದಾರೆ. ಅಮೇರಿಕಾದಲ್ಲಿ ಭಾಷಣ ಮಾಡಿದ ಬಳಿಕ ಅಮೇರಿಕಾದ ಗುಪ್ತಚರ ಸಂಸ್ಥೆ ‘ಸಿಐಎ’ ಭಾರತ, ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್ ಭಾಗಗಳನ್ನು ಪ್ರತ್ಯೇಕಿಸಿ ಪ್ರತ್ಯೇಕ ಕ್ರೈಸ್ತ ದೇಶವನ್ನು ನಿರ್ಮಿಸುವ ಕೆಲಸ ಮಾಡುತ್ತಿದೆಯೇ ಎಂಬ ಪ್ರಶ್ನೆ ಎದ್ದಿದೆ.

1. ಮಿಜೋರಾಂ ಮುಖ್ಯಮಂತ್ರಿಯ ಭಾಷಣದಿಂದ ದಕ್ಷಿಣ ಏಷ್ಯಾವನ್ನು ಅಸ್ಥಿರಗೊಳಿಸುವ ಪ್ರತ್ಯೇಕತಾವಾದಿ ನೀತಿಗಳ ಬಗ್ಗೆ ಕಳವಳ ವ್ಯಕ್ತವಾಗಿದೆ. ಲಾಲದುಹೋಮಾ ಭಾಷಣಕ್ಕೆ ವಿದೇಶಿ ಬೆಂಬಲ ಇರುವ ಸಂಶಯ ವ್ಯಕ್ತವಾಗಿದೆ.

2. ಲಾಲದುಹೋಮಾ ಅವರು ತಮ್ಮ ಭಾಷಣದಲ್ಲಿ, ನಾವು (ಕ್ರೈಸ್ತರು) ಮೂರು ದೇಶಗಳಲ್ಲಿ ಮೂರು ಸರಕಾರಗಳ ನಡುವೆ ಅನ್ಯಾಯವಾಗಿ ವಿಂಗಡಿಸಲ್ಪಟ್ಟಿದ್ದೇವೆ. ಇದನ್ನು ನಾವು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಲಾಲದುಹೋಮಾ ಅವರು ರಾಜಕೀಯ ಐಕ್ಯತೆಯ ಬಲವಾದ ದೃಷ್ಟಿಕೋನವನ್ನು ಪ್ರಸ್ತಾಪಿಸಿದರು, ಇದು ಭಾರತದ ಸಾರ್ವಭೌಮತ್ವದ ಬಗ್ಗೆ ಕಳವಳವನ್ನು ಹುಟ್ಟುಹಾಕಿತು.

3. ಚಿನ್-ಕುಕಿ-ಜೋ ಸಮುದಾಯವು ಮಣಿಪುರ ಮತ್ತು ಮಿಜೋರಾಂ ಭಾರತೀಯ ರಾಜ್ಯಗಳಲ್ಲಿ ಹಾಗೆಯೇ ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್‌ನ ಕೆಲವು ಭಾಗಗಳಲ್ಲಿ ಹರಡಿದೆ.

4. ಅಮೇರಿಕಾದ ಮೇಲೆ ಸಮಾನ ಹಿತಸಂಬಂಧಗಳನ್ನು ರಕ್ಷಿಸಲು ಪ್ರತ್ಯೇಕತಾವಾದಿ ಚಳುವಳಿಗಳನ್ನು ಬೆಂಬಲಿಸುತ್ತಿರುವ ಆರೋಪ ಈ ಹಿಂದೆಯೂ ಕೇಳಿಬಂದಿತ್ತು. ಖಲಿಸ್ತಾನಿ ಭಯೋತ್ಪಾದಕ ಗುರುಪತ್ವಂತ ಸಿಂಗ ಪನ್ನು ‘ಸಿಐಎ’ನ ಏಜೆಂಟ್ ಎಮದು ನಂಬಲಾಗಿದೆ.

ಸಂಪಾದಕೀಯ ನಿಲುವು

  • ಈ ಘಟನೆಯಿಂದ ಜಾಗತಿಕ ಮಹಾಶಕ್ತಿಯಾಗಲು ಪ್ರಯತ್ನಿಸುತ್ತಿರುವ ಭಾರತದಲ್ಲಿ ವಿಭಜನೆಯ ಬೀಜಗಳನ್ನು ಬಿತ್ತುತ್ತಿರುವ ಅಂತರರಾಷ್ಟ್ರೀಯ ಶಕ್ತಿಗಳಿಗೆ ಕ್ರೈಸ್ತ ಬಹುಸಂಖ್ಯಾತವಿರುವ ಮಿಜೋರಾಂನ ಕ್ರೈಸ್ತ ಮುಖ್ಯಮಂತ್ರಿಯವರು ಏಜೆಂಟ್‌ ಆಗಿದ್ದಾರೆ ಎಂದು ಅನುಮಾನಿಸಲು ಸಾಕಷ್ಟು ಅಂಶವಿದೆ. ಅವರ ವಿರುದ್ಧ ಕೇಂದ್ರ ಸರಕಾರ ಏನು ಕ್ರಮ ಕೈಗೊಳ್ಳುತ್ತದೆ ?
  • ಸಾರ್ವಭೌಮ ರಾಷ್ಟ್ರದ ಒಂದು ರಾಜ್ಯದ ಮುಖ್ಯಮಂತ್ರಿ ಇಂತಹ ಘೋಷಣೆ ಮಾಡುತ್ತಾರೆ, ಇದರಿಂದ. ಸ್ಥಿತಿ ಕೈ ಮೀರಿ ಹೋಗಿದೆ ಎಂದು ಹೇಳಬಹುದು. ಕ್ರೈಸ್ತ ಬಹುಸಂಖ್ಯಾತ ಭಾಗವನ್ನು ಪ್ರತ್ಯೇಕಿಸಿ ಪ್ರತ್ಯೇಕ ದೇಶ ಮಾಡಲು ಯತ್ನಿಸುತ್ತಿರುವ ಈ ಶಕ್ತಿಗಳನ್ನು ಹತ್ತಿಕ್ಕುವುದು ಈಗ ಆವಶ್ಯಕವಾಗಿದೆ !