‘ಕೆನೆಡಿಯನ್ ನ್ಯಾಷನಲ್ ಕೌನ್ಸಿಲ್ ಆಫ್ ಹಿಂದುಜ್’ ನ ನಿರ್ಣಯ
ಓಟಾವಾ (ಕೆನಡಾ) – ಹಿಂದೂ ದೇವಸ್ಥಾನಗಳ ಮೇಲೆ ಖಲಿಸ್ತಾನಿಗಳಿಂದ ನಡೆದಿರುವ ದಾಳಿಯ ನಂತರ ‘ಕೆನಡಿಯನ್ ನ್ಯಾಷನಲ್ ಕೌನ್ಸಿಲ್ ಆಫ್ ಹಿಂದುಜ್’ಯಿಂದ ಕೆನಡಾದಲ್ಲಿನ ಎಲ್ಲಾ ನಾಯಕರಿಗೆ ಹಿಂದುಗಳ ದೇವಸ್ಥಾನದಲ್ಲಿನ ಪ್ರವೇಶ ನಿಷೇಧಿಸಿರುವ ಘೋಷಣೆ ಮಾಡಿದೆ. ‘ಎಲ್ಲಿಯವರೆಗೆ ಖಲಿಸ್ತಾನಿಗಳ ವಿರುದ್ಧ ಕ್ರಮ ಕೈಗೊಳ್ಳುವುದಿಲ್ಲ ಮತ್ತು ದೇವಸ್ಥಾನಗಳ ಸುರಕ್ಷೆಯನ್ನು ಬಲಿಷ್ಠ ಗೊಳಿಸುವದಿಲ್ಲ ಅಲ್ಲಿಯವರೆಗೆ, ದೇವಸ್ಥಾನವನ್ನು ರಾಜಕೀಯ ಉದ್ದೇಶಕ್ಕೆ ಉಪಯೋಗಿಸಲು ನಿಷೇಧಿಸಲಾಗಿದೆ. ರಾಜಕಾರಣಿಗಳು ಯಾವುದೇ ಪಕ್ಷಕ್ಕೆ ಸಂಬಂಧಪಟ್ಟವರಾಗಿದ್ದರು ಸರಿ, ಅವರು ಭಕ್ತರು ಎಂದು ಬರಬಹುದು; ಆದರೆ ಎಲ್ಲಿಯವರೆಗೆ ಅವರು ಖಲಿಸ್ತಾನಿ ಭಯೋತ್ಪಾದಕರ ಸಮಸ್ಯೆಯನ್ನು ಪರಿಹರಿಸಲು ನಿಖರವಾದ ಪ್ರಯತ್ನ ಮಾಡುವುದಿಲ್ಲವೋ ಅಲ್ಲಿಯವರೆಗೆ ಅವರಿಗೆ ದೇವಸ್ಥಾನದ ವೇದಿಕೆಯಲ್ಲಿ ಪ್ರವೇಶ ಸಿಗುವುದಿಲ್ಲ, ಎಂದು ಸಂಘಟನೆಯಿಂದ ಹೇಳಲಾಗಿದೆ.
ಸಂಪಾದಕೀಯ ನಿಲುವುಭಾರತದಲ್ಲಿ ಹಿಂದೂಗಳ ದೇವಸ್ಥಾನಗಳ ಮತ್ತು ಧಾರ್ಮಿಕ ಮೆರವಣಿಗೆಗಳ ಮೇಲೆ ನಡೆಯುವ ದಾಳಿಯ ನಂತರ ಈಗ ಇಲ್ಲಿಯ ಹಿಂದುಗಳು ಕೂಡ ಹೀಗೆ ನಿರ್ಣಯ ತೆಗೆದುಕೊಂಡರೆ, ಆಶ್ಚರ್ಯ ಅನ್ನಿಸಬಾರದು ! |