ಅಮೇರಿಕಾದಲ್ಲಿ ಭೋಪಾಲ ಅನಿಲ ದುರಂತದ ವಿಷಯದ ಮರುಮಂಡಣೆ

ಭೋಪಾಲ – ಭೋಪಾಲ ಅನಿಲ ದುರಂತದ ಅಂಶವನ್ನು ಅಮೇರಿಕಾದಲ್ಲಿ ಪುನಃ ಪ್ರಸ್ತುತಪಡಿಸಲಾಗಿದೆ. ಅಮೇರಿಕದಲ್ಲಿನ ೧೨ ಸಂಸದರು ದೇಶದ ನ್ಯಾಯ ವಿಭಾಗಕ್ಕೆ ಪತ್ರ ಬರೆದು `ಡಾವು ಕೆಮಿಕಲ್’ ಸಂಸ್ಥೆಯ ಮೇಲೆ ತಕ್ಷಣ ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ಈ ಸಂಸ್ಥೆಯ ಮಾಲೀಕತ್ವದಲ್ಲಿದ್ದ `ಯೂನಿಯನ್ ಕಾರ್ಬೈಡ್’ ಕಾರ್ಖಾನೆಯಲ್ಲಿ ೧೯೮೪ರಲ್ಲಿ ವಿಷಪೂರಿತ ಅನಿಲವನ್ನು ಉಸಿರಾಡಿದ್ದರಿಂದ ನೂರಾರು ಜನರು ಸಾವನ್ನಪ್ಪಿದ್ದರು ಹಾಗೆಯೆ ಸಾವಿರಾರು ಜನರು ಶಾಶ್ವತವಾಗಿ ಅಂಗವಿಕಲರಾಗಿದ್ದರು.

ಈ ಘಟನೆಯ ಕ್ರಿಮಿನಲ್ ಖಟ್ಲೆಯ ಆಲಿಕೆಯು ಭೋಪಾಲದ ನ್ಯಾಯಾಲಯದಲ್ಲಿ ಇಂದಿಗೂ ನಡೆಯುತ್ತಿದೆ. ನ್ಯಾಯಾಲಯವು `ಡಾವು ಕೆಮಿಕಲ್’ ಸಂಸ್ಥೆಗೆ ನ್ಯಾಯಾಲಯದಲ್ಲಿ ಹಾಜರಿರುವಂತೆ ಹಾಗೂ ಖಟ್ಲೆಯನ್ನು ಎದುರಿಸಲು ಈಗಾಗಲೇ ೭ ಸಮನ್ಸ್ ಕಳುಹಿಸಿದೆ. ಆದರೆ ಅದರಿಂದ ಯಾವುದೇ ಉಪಯೋಗವಾಗಲಿಲ್ಲ. ೭ ನೇ ಸಮನ್ಸ್ ನಲ್ಲಿ ಪುನಃ ಇನ್ನೊಮ್ಮೆ ಸಂಸ್ಥೆಯ ಅಧಿಕಾರಿಗಳಿಗೆ ಅಕ್ಟೊಬರ್ ೪ರಂದು ಉಪಸ್ಥಿತರಿರಲು ಹೇಳಲಾಗಿದೆ.

ಸಂಪಾದಕೀಯ ನಿಲುವು

ಭಾರತದಲ್ಲಿನ ಎಷ್ಟು ಸಂಸದರು ಸಂಸತ್ತಿನಲ್ಲಿ ಈ ರೀತಿಯಲ್ಲಿ ಮನವಿ ಮಾಡಿದ್ದಾರೆ ?