The Chinmaya Mission South Africa : ‘ಚಿನ್ಮಯ ಮಿಷನ ದಕ್ಷಿಣ ಆಫ್ರಿಕಾ’ದ ‘ಪೋಷಣೆಯಿಂದ ಬೆಳವಣಿಗೆ ಮತ್ತು ಅಭಿವೃದ್ಧಿ’ ಉಪಕ್ರಮ!

7 ಶಾಲೆಗಳಲ್ಲಿನ 5 ಸಾವಿರಕ್ಕಿಂತ ಹೆಚ್ಚಿನ ಮಕ್ಕಳಿಗೆ ಉಚಿತ ಊಟ !

ಸ್ವಾಮಿ ಅಭೇದಾನಂದರಿಗೆ ಪ್ರಶಸ್ತಿ ನೀಡುತ್ತಿರುವ ಮುಖ್ಯಮಂತ್ರಿ ಥಾಮಿ ನತುಲಿ ಮತ್ತು ರಾಜಕುಮಾರ ಈಶ್ವರ ರಾಮಲಚ್ಛಮನ ಮಭೇಕಾ ಝುಲು

ಡರ್ಬನ (ದಕ್ಷಿಣ ಆಫ್ರಿಕಾ) – ‘ಚಿನ್ಮಯ ಮಿಷನ ದಕ್ಷಿಣ ಆಫ್ರಿಕಾ’ ಎಂಬ ಸಂಘಟನೆಯು ಆಧ್ಯಾತ್ಮಿಕ ಗುರುಗಳಾದ ಸ್ವಾಮಿ ಅಭೇದಾನಂದ ಸರಸ್ವತಿಯವರ ನೇತೃತ್ವದಲ್ಲಿ ಒಂದು ಸ್ತುತ್ಯರ್ಹ ಸಮಾಜೋಪಯೋಗಿ ಉಪಕ್ರಮವನ್ನು ಕೈಗೆತ್ತಿಕೊಂಡಿದೆ.

ಕಾರ್ಯಕ್ರಮದಲ್ಲಿ ನೆರೆದಿರುವ ಜನಸಮೂಹ

‘ನರಿಶ್ ಟು ಫ್ಲರಿಶ್’, ಅಂದರೆ ‘ಪೋಷಣೆಯಿಂದ ಬೆಳವಣಿಗೆ ಮತ್ತು ಅಭಿವೃದ್ಧಿ’ ಎಂಬುದು ಈ ಉಪಕ್ರಮದ ಹೆಸರಾಗಿದ್ದು, ವಿಜಯದಶಮಿಯಿಂದ (ಅಕ್ಟೋಬರ್ 12) ರಿಂದ ಇಲ್ಲಿಯವರೆಗೆ ನಗರದ 2 ಸಾವಿರಕ್ಕೂ ಹೆಚ್ಚು ವಂಚಿತ ಶಾಲಾ ಮಕ್ಕಳಿಗೆ ಪ್ರತಿದಿನ ಉಚಿತ ಆಹಾರವನ್ನು ಒದಗಿಸಲಾಗುತ್ತಿದೆ. ಈ ಯೋಜನೆಯ ಅನ್ವಯ ಇಲ್ಲಿಯವರೆಗೆ ಡರ್ಬನ ನಗರದಲ್ಲಿರುವ 7 ಶಾಲೆಗಳಲ್ಲಿ ಒಟ್ಟು 5 ಸಾವಿರಕ್ಕೂ ಹೆಚ್ಚು ಆಹಾರದ ಚೀಲಗಳನ್ನು ನೀಡಲಾಗಿದೆ.

`ನರಿಶ ಟು ಫ್ಲರಿಶ್’ನ `ಚಿನ್ಮಯ ಅನ್ನಪೂರ್ಣಾ’ ಈ ಅನ್ನಪೂರ್ಣಾ ಕೋಣೆಯ ಉದ್ಘಾಟನೆ

1. ಸಂಘಟನೆಯ ಪದಾಧಿಕಾರಿಗಳು ಇತ್ತೀಚೆಗೆ ಈ ಉಪಕ್ರಮದ ಸಂದರ್ಭದಲ್ಲಿ ಒಂದು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು, ಎಂದು `ಸನಾತನ ಪ್ರಭಾತ’ಕ್ಕೆ ತಿಳಿಸಿದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಿರುವ ವಿವಿಧ ಗಣ್ಯರು

2. ಕಾರ್ಯಕ್ರಮದ ಸಂದರ್ಭದಲ್ಲಿ ಈ ಯೋಜನೆಯ ಫಲಾನುಭವಿಗಳು, ಭಾವಿಕರು, ಉದ್ಯಮಿಗಳು, ಪ್ರಸಾರ ಮಾಧ್ಯಮಗಳ ಪ್ರತಿನಿಧಿಗಳು, ದಾನಿಗಳು ಹಾಗೂ ಪ್ರಮುಖ ವಕ್ತಾರರು ಸೇರಿದಂತೆ ನಗರದ 700 ಕ್ಕೂ ಹೆಚ್ಚು ಜನರು ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಮುಖ್ಯ ವಕ್ತಾರರು ಚಿನ್ಮಯ ಮಿಷನಗೆ ಕೃತಜ್ಞತೆ ಸಲ್ಲಿಸಿದರು.

3. ಈ ಸಂದರ್ಭದಲ್ಲಿ ಸ್ವಾಮಿ ಅಭೇದಾನಂದರು ಮಾನವೀಯತೆಗಾಗಿ ಮಾಡಿದ ಸೇವೆ ಮತ್ತು ಕಳೆದ 18 ವರ್ಷಗಳಲ್ಲಿ ದಕ್ಷಿಣ ಆಫ್ರಿಕಾದಲ್ಲಿನ ಸಾಮಾಜದ ಪರಿವರ್ತನೆಗಾಗಿ ಅವರು ನೀಡಿರುವ ಕೊಡುಗೆಯ ಗೌರವಾರ್ಥ ಅವರನ್ನು ಮುಖ್ಯಮಂತ್ರಿ ಥಾಮಿ ನತುಲಿ ಹಾಗೂ ರಾಜಕುಮಾರ ಈಶ್ವರ ರಾಮಲಛ್ಚಮನ ಮಭೇಕಾ ಝುಲುರವರು ಪ್ರತಿಷ್ಠಿತ ‘ಶಿವಾನಂದಾ ಜಾಗತಿಕ ಶಾಂತಿ ಪ್ರಶಸ್ತಿ’ಯನ್ನು ನೀಡಿ ಗೌರವಿಸಿದರು.

4. ಸ್ವಾಮಿ ಅಭೇದಾನಂದರು ಹಿಂದೂ ಧರ್ಮಗ್ರಂಥಗಳಲ್ಲಿನ ಬೋಧನೆಗಳ ಅನುಸಾರ ಸೇವೆ, ಸತ್ಸಂಗ ಮತ್ತು ಸಾಧನೆಯ ಮಹತ್ವವನ್ನು ವಿವರಿಸುವಾಗ, ದೈನಂದಿನ ಸತ್ಸಂಗದಲ್ಲಿ ಉಪನಿಷತ್ತುಗಳು, ಭಗವದ್ಗೀತೆ, ಭಾಗವತ ಮಹಾಪುರಾಣ, ವಾಲ್ಮೀಕಿ ಮತ್ತು ತುಳಸಿ ರಾಮಾಯಣ ಹಾಗೆಯೇ ಇತರ ಪುರಾಣ ಮತ್ತು ವೇದ ಗ್ರಂಥಗಳಲ್ಲಿನ ವಿಷಯಗಳನ್ನು ವಿವರವಾಗಿ ವ್ಯಾಖ್ಯಾನ ನಡೆಸುತ್ತಾರೆ.

ಸಂಕ್ಷಿಪ್ತದಲ್ಲಿ ಚಿನ್ಮಯ ಮಿಷನ !

‘ಎಲ್ಲ ಪ್ರಾಣಿಮಾತ್ರರ ಕಲ್ಯಾಣದಲ್ಲಿ ನಿರತರಾಗಿರುವ ಹಾಗೂ ಎಲ್ಲರ ವಿಷಯದಲ್ಲಿ ಸಮಾನ ಭಾವನೆಯನ್ನು ಹೊಂದಿರುವ ಯೋಗಿಗಳು ನನ್ನನ್ನೇ ಸೇರುತ್ತಾರೆ’ ಎಂಬ ಭಗವದ್ಗೀತೆಯಲ್ಲಿನ ಭಗವಾನ ಶ್ರೀ ಕೃಷ್ಣನ ವಚನದಂತೆ ಚಿನ್ಮಯ ಮಿಷನ ಕಾರ್ಯನಿರ್ವಹಿಸುತ್ತಿದೆ. ಸುತ್ತಲಿರುವ ಎಲ್ಲರಲ್ಲೂ ಈಶ್ವರನನ್ನು ಕಾಣುವುದು ಹಾಗೂ ಸ್ವಂತದ ಸಾಧನೆಯೆಂದು ಎಲ್ಲರ ಸೇವೆ ಮಾಡುವುದೇ ಸನಾತನ ಧರ್ಮದ ಬೋಧನೆಯಾಗಿದೆ. ಇದೇ ಜೀವನಾಡಿಯಾಗಿದೆ. ಇದು ನಮ್ಮ ಸಂಸ್ಕೃತಿಯನ್ನು ಒಂದು ಆಶಾಕಿರಣವಾಗಿ ಜಗತ್ತಿನಾದ್ಯಂತ ಸಾದರಪಡಿಸುತ್ತದೆ. ಪ.ಪೂ. ಸ್ವಾಮಿ ಚಿನ್ಮಯಾನಂದರು (ಗುರುದೇವರು) 1951 ರಲ್ಲಿ ಚಿನ್ಮಯ ಮಿಷನನ್ನು ಸ್ಥಾಪಿಸಿದರು. `ಅಧಿಕಾಧಿಕ ಜನರಿಗೆ ಅಧಿಕ ಸಮಯದ ವರೆಗೆ ಹೆಚ್ಚಿನ ಆನಂದವನ್ನು ನೀಡುವ’ ಬೋಧವಾಕ್ಯದೊಂದಿಗೆ ಈ ಸಂಸ್ಥೆ ಕಾರ್ಯನಿರವಾಗಿದೆ. ಸದ್ಯದ ಜಾಗತಿಕ ಮುಖ್ಯಸ್ಥರಾದ ಪೂ. ಸ್ವಾಮಿ ಸ್ವರೂಪಾನಂದರ ಮಾರ್ಗದರ್ಶನದಲ್ಲಿ ಚಿನ್ಮಯ ಮಿಷನನಲ್ಲಿ 300 ಕ್ಕೂ ಹೆಚ್ಚು ಕೇಂದ್ರಗಳು ಮತ್ತು ಮಿಷನ್ನಿನ ವಿವಿಧ ಸ್ವಾಮಿಗಳು ಮತ್ತು ಬ್ರಹ್ಮಚಾರಿಣಿಯರ ನೇತೃತ್ವದಲ್ಲಿ ಸಮರ್ಪಿತ ಭಕ್ತರ ಬೃಹತ ಜಾಲವು ಜಗತ್ತಿನಾದ್ಯಂತ ಪಸರಿಸಿದೆ.

ಸಂಪಾದಕೀಯ ನಿಲುವು

ಇದು ಹಿಂದುತ್ವನಿಷ್ಠ ಸಂಘಟನೆಗಳು, ಹಾಗೆಯೇ ಹಿಂದೂಗಳ ಆಧ್ಯಾತ್ಮಿಕ ಸಂಸ್ಥೆಗಳು ಜಗತ್ತಿನಲ್ಲಿ ಎಲ್ಲಿ ಹೋದರೂ ಅಲ್ಲಿನ ಸಮಾಜದ ಕಲ್ಯಾಣಕ್ಕಾಗಿ ತಮ್ಮನ್ನು ತಾವು ಸಮರ್ಪಿಸಿಕೊಳ್ಳುತ್ತಾರೆ ಎನ್ನುವುದರ ಉದಾಹರಣೆಯಾಗಿದೆ !