Woman Forced To Clean Hospital Bed : ಆಸ್ಪತ್ರೆಯ ಸಿಬ್ಬಂದಿಗಳಿಂದ ಹೇಯ ಕೃತ್ಯ; ಗಂಡ ತೀರಿಕೊಂಡ ನಂತರ, ಆತನ ಗರ್ಭಿಣಿ ಹೆಂಡತಿಯಿಂದ ಹಾಸಿಗೆಯನ್ನು ಸ್ವಚ್ಛಗೊಳಿಸಲು ಹೇಳಿದರು !

  • ದಿಂಡೋರಿಯಲ್ಲಿನ (ಮಧ್ಯಪ್ರದೇಶ) ಘಟನೆ

  • 2 ನೌಕರರ ಅಮಾನತು

ದಿಂಡೋರಿ (ಮಧ್ಯಪ್ರದೇಶ) – ಇಲ್ಲಿನ ಗದಾಸರಾಯ್‌ನಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಾಖಲಾದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ ನಂತರ ಅವನ ಗರ್ಭಿಣಿ ಪತ್ನಿಗೆ ಪತಿಯ ಬೆಡ್‌ಅನ್ನು ಸ್ವಚ್ಛಗೊಳಿಸಲು ಆಸ್ಪತ್ರೆ ಸಿಬ್ಬಂದಿ ಹೇಳಿದ್ದಾರೆ. ಇದಕ್ಕೆ ಮಹಿಳೆ ನಿರಾಕರಿಸಿದರೂ ಬಲವಂತವಾಗಿ ಹಾಸಿಗೆಯನ್ನು ಸ್ವಚ್ಛಗೊಳಿಸಲು ಒತ್ತಾಯಿಸಲಾಯಿತು. ಈ ಹಾಸಿಗೆಯ ಮೇಲೆ ರಕ್ತದ ಕಲೆಗಳಿದ್ದವು. ಈ ಘಟನೆಯ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾದ ನಂತರ, ಆಸ್ಪತ್ರೆ ಆಡಳಿತವು ಇಬ್ಬರು ಸಿಬ್ಬಂದಿಗಳಾದ ಛೋಟಿಬಾಯಿ ಠಾಕೂರ್ (ದಾದಿ) ಮತ್ತು ರಾಜಕುಮಾರಿ ಮರ್ಕರ್ ಅವರನ್ನು ಅಮಾನತುಗೊಳಿಸಿದೆ.