‘Sanatan Board’ : ಬರುವ ನವೆಂಬರ್ 16 ರಂದು ದೆಹಲಿಯಲ್ಲಿ ಧರ್ಮಸಂಸದ್ !

‘ಸನಾತನ ಬೋರ್ಡ್’ ಸ್ಥಾಪಿಸುವ ಘೋಷಣೆಯ ಸಾಧ್ಯತೆ !

ನವ ದೆಹಲಿ – ರಾಜಧಾನಿ ದೆಹಲಿಯಲ್ಲಿ ನವೆಂಬರ್ 16 ರಂದು ಧರ್ಮಸಂಸದ್ ಅನ್ನು ಆಯೋಜಿಸಲಾಗಿದೆ. ಈ ಧರ್ಮಸಂಸದ್ ನಲ್ಲಿ ಧಾರ್ಮಿಕ ಮುಖಂಡರು ಹಲವು ಮಹತ್ವದ ಅಂಶಗಳನ್ನು ಮಂಡಿಸಲಿದ್ದಾರೆ. ಖ್ಯಾತ ಕಥೆಗಾರ ದೇವಕಿನಂದನ್ ಠಾಕೂರ್ ಅವರು ಈ ಮಾಹಿತಿ ನೀಡಿದ್ದು, ಧರ್ಮಸಂಸದ್ ನಲ್ಲಿ ಪಾಲ್ಗೊಳ್ಳುವಂತೆ ಹಿಂದೂಗಳಿಗೆ ಮನವಿ ಮಾಡಿದ್ದಾರೆ. ಹಾಗೂ ಅವರು ಹಿಂದೂಗಳ ‘ಸನಾತನ ಬೋರ್ಡ್’ ಸ್ಥಾಪಿಸುವಂತೆಯೂ ಮನವಿ ಮಾಡಿದ್ದಾರೆ.

ದೇವಕಿನಂದನ್ ಠಾಕೂರ್ ಮಾತನಾಡಿ,

1. ಈ ಧರ್ಮಸಂಸದ್ ನಲ್ಲಿ ಲವ್ ಜಿಹಾದ್, ಗೋಹತ್ಯೆ, ಶ್ರೀಕೃಷ್ಣನ ಜನ್ಮಸ್ಥಳವನ್ನು ಮರಳಿ ಪಡೆಯುವುದು ಸೇರಿದಂತೆ ಹಲವು ಪ್ರಮುಖ ಅಂಶಗಳನ್ನು ಚರ್ಚಿಸಲಾಗುವುದು. ನಾವು ಯಾರಿಗೂ ಹಾನಿ ಮಾಡುವುದಿಲ್ಲ. ನಮ್ಮ ಸಹೋದರಿಯರು-ಮಕ್ಕಳು ಸುರಕ್ಷಿತವಾಗಿಲ್ಲ, ನಮ್ಮ ಸಂಸ್ಕೃತಿ, ಧರ್ಮ ಮತ್ತು ದೇವರುಗಳು ಸುರಕ್ಷಿತವಾಗಿಲ್ಲ. ದೇವತೆಗಳನ್ನು ಅವಮಾನಿಸಲಾಗುತ್ತದೆ. ತಿರುಪತಿಯ ಪ್ರಸಾದದಲ್ಲಿ ಕೊಬ್ಬನ್ನು ಹಾಕಿ ಹಿಂದೂ ಧರ್ಮ ಭ್ರಷ್ಟವಾಗಿದೆ.

2. ದೇಶದಲ್ಲಿ ಸಂಸತ್ತು ಮತ್ತು ವಿಮಾನ ನಿಲ್ದಾಣದ ಭೂಮಿಗಳು ವಕ್ಫ್ ಮಂಡಳಿಯ ಒಡೆತನದಲ್ಲಿದೆ ಎಂದು ಹೇಳಲಾಗುತ್ತಿದೆ. ಇದೇ ಪರಿಸ್ಥಿತಿ ಮುಂದುವರಿದರೆ 10 ರಿಂದ 12 ವರ್ಷಗಳಲ್ಲಿ ವಕ್ಫ್ ಮಂಡಳಿ ಇಡೀ ದೇಶದ ಮೇಲೆ ತನ್ನ ಅಧಿಕಾರ ಚಲಾಯಿಸಲಿದೆ. ಸನಾತನ ಬೋರ್ಡ್‌ನ ಸೂತ್ರಕ್ಕೆ ರಾಜಕೀಯ ಪಕ್ಷಗಳು ಪರವಾಗಿ ಸ್ಪಂದಿಸಿ ಬೆಂಬಲ ನೀಡಬೇಕು, ಎಂದು ಹೇಳಿದರು.