Dhirendra Shastri: ಪ್ರಯಾಗರಾಜ ಮಹಾಕುಂಭ ಮೇಳದಲ್ಲಿ ಹಿಂದೂಯೇತರರ ಪ್ರವೇಶ ನಿಷೇಧಿಸಿ !

  • ಬಾಗೇಶ್ವರ ಧಾಮನ ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿ ಇವರ ಆಗ್ರಹ

  • ಹಿಂದೂಯೇತರರಿಗೆ ಅಂಗಡಿಗಳನ್ನು ಹಾಕುವ ಅನುಮತಿಗು ಕೂಡ ವಿರೋಧ !

ಬಾಗೇಶ್ವರ ಧಾಮನ ಪಂಡಿತ ಧೀರೇಂದ್ರ ಶಾಸ್ತ್ರಿ

ಕವಾರ್ಧ (ಛತ್ತಿಸಗಡ) – ಪ್ರಯಾಗರಾಜನ ಮಹಾಕುಂಭ ಮೇಳದಲ್ಲಿ ಹಿಂದೂಯೇತರರಿಗೆ ಪ್ರವೇಶ ನೀಡಬಾರದೆಂದು, ಬಾಗೇಶ್ವರ ಧಾಮನ ಪಂಡಿತ ಧೀರೇಂದ್ರ ಶಾಸ್ತ್ರಿ ಇವರು ಪ್ರಸಾರ ಮಾಧ್ಯಮಗಳ ಜೊತೆಗೆ ಮಾತನಾಡುವಾಗ ಆಗ್ರಹಿಸಿದ್ದಾರೆ. ಇದರೊಂದಿಗೆ ಅವರು ಮಹಾಕುಂಭ ಮೇಳದಲ್ಲಿ ಹಿಂದೂಯೇತರರಿಗೆ ಅಂಗಡಿಗಳು ಹಾಕುವ ಅನುಮತಿ ಕೂಡ ನೀಡಬಾರದೆಂದು ಈ ಅಂಶವನ್ನು ಬೆಂಬಲಿಸಿದ್ದಾರೆ.

ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿ ಇವರು ಮಾತು ಮುಂದುವರೆಸುತ್ತಾ,

೧. ಯಾರಿಗೆ ಸನಾತನ ಸಂಸ್ಕೃತಿ, ಪೂಜಾ ವಿಧಿ ಮತ್ತು ಸಾಹಿತ್ಯದ ಶುದ್ಧತೆ, ಇದರ ಕುರಿತು ಮಾಹಿತಿ ಇರುವುದು, ಅಂತಹ ಹಿಂದೂಗಳಿಗೆ ಮಾತ್ರ ಅಂಗಡಿಗಳು ಹಾಕಲು ಅನುಮತಿ ನೀಡಬೇಕು. ಯಾರಿಗೆ ಈ ಕುರಿತು ಮಾಹಿತಿ ಇಲ್ಲ, ಅವರಿಗೂ ಪ್ರವೇಶ ನೀಡಬಾರದು. ಎಲ್ಲೋ ಉಗಳಿರುವ ಘಟನೆ ಘಟಿಸುತ್ತದೆ, ಹಾಗೂ ಎಲ್ಲೋ ಹಣ್ಣುಗಳ ಮೇಲೆ ಹೇಸಿಗೆ ಹಚ್ಚುತ್ತಿರುವುದು ಕಾಣುತ್ತದೆ, ಹೀಗೆ ಆಗಬಹುದು. ಇದರ ಹಿಂದೆ ಕೆಲವು ಷಡ್ಯಂತ್ರಗಳು ಕೂಡ ಇರಬಹುದು, ಎಂದು ನಾವು ಹೇಳುತ್ತಿಲ್ಲ.

೨. ಪ್ರಯಾಗರಾಜನಲ್ಲಿ ತ್ರಿವೇಣಿ ಸಂಗಮವಿದೆ. ಇಲ್ಲಿ ಸಂತರ ದರ್ಶನವಾಗುತ್ತದೆ. ಧಾರ್ಮಿಕ ಕಥೆಗೆ ನಿಮ್ಮ ಯಾವುದೇ ಸಂಬಂಧವಿಲ್ಲ. ಹಿಂದುತ್ವದ ಜೊತೆಗೆ ನಿಮ್ಮ ಯಾವುದೇ ಸಂಬಂಧವಿಲ್ಲ. ಸನಾತನ ಜೊತೆಗೆ ನಿಮ್ಮ ಯಾವುದೇ ಸಂಬಂಧವಿಲ್ಲ. ನಿಮಗೆ ಶ್ರೀ ರಾಮನೊಂದಿಗೆ ಯಾವುದೇ ಸಂಬಂಧವಿಲ್ಲ. ಒಂದು ವೇಳೆ ನಿಮಗೆ ಶ್ರೀ ರಾಮನ ಜೊತೆಗೆ ಯಾವುದೇ ಸಂಬಂಧವಿಲ್ಲವಾದರೆ, ನಿಮಗೆ ಶ್ರೀರಾಮನ ಕಾರ್ಯದ ಉಪಯೋಗವೇನು ? ಎಂದು ಅವರು ಹೇಳಿದರು.

ಸಂಪಾದಕೀಯ ನಿಲುವು

  • ಹಿಂದೂಯೇತರರಿಗೆ ಮಹಾಕುಂಭ ಮೇಳದಲ್ಲಿ ಹಣ ಗಳಿಸುವುದಕ್ಕಾಗಿ ಅಥವಾ ಹಿಂದುಗಳ ಮತಾಂತರ ಮಾಡಲು ಬರುತ್ತಾರೆ, ಇಲ್ಲಿಯವರೆಗೆ ಹೀಗೆಯೇ ಕಂಡು ಬಂದಿದೆ. ಆದ್ದರಿಂದ ಇಂತಹವರು ಇಲ್ಲಿ ಬರದಂತೆ ನಿಷೇಧಿಸಲು ಯಾರಾದರೂ ಆಗ್ರಹಿಸಿದರೆ, ಅದರಲ್ಲಿ ತಪ್ಪೇನಿದೆ !
  • ಇಂತಹ ಬೇಡಿಕೆ ಇತರ ಸಂತರು ಮತ್ತು ಧಾರ್ಮಿಕ ಸಂಘಟನೆಗಳು ಕೂಡ ಆಗ್ರಹಿಸಿದರೆ ಸರಕಾರದ ಮೇಲೆ ಒತ್ತಡ ನಿರ್ಮಾಣವಾಗಬಹುದು ಮತ್ತು ಹಿಂದುಗಳ ತೀರ್ಥಕ್ಷೇತ್ರ ಮತ್ತು ಕುಂಭ ಮೇಳದಲ್ಲಿ ಪಾವಿತ್ರ್ಯತೆ ಉಳಿಯಬಹುದು !