ಹಿಂದೂಗಳ ರಕ್ಷಣೆಗಾಗಿ ಆಗ್ರಹ!
ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಆಗುತ್ತಿರುವ ನಿರಂತರ ದಾಳಿಯ ವಿರುದ್ಧ ನವೆಂಬರ್ 1 ರಂದು 30 ಸಾವಿರಕ್ಕೂ ಹೆಚ್ಚು ಹಿಂದೂಗಳು ಮೆರವಣಿಗೆ ನಡೆಸಿ ಹಿಂದೂಗಳ ರಕ್ಷಣೆಗೆ ಆಗ್ರಹಿಸಿದರು. ಈ ಸಮಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ಮತ್ತು ಸೈನಿಕರನ್ನು ನಿಯೋಜಿಸಲಾಗಿತ್ತು. ದೇಶಾದ್ಯಂತ ಅನೇಕ ಪ್ರದೇಶಗಳಲ್ಲಿ ಈ ರೀತಿ ಸರಕಾರದ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿವೆ. ಸಧ್ಯಕ್ಕೆ ಬಾಂಗ್ಲಾದೇಶದಲ್ಲಿ ಹಿಂದೂಗಳ ಸಂಖ್ಯೆ ಶೇ.8 ರಷ್ಟು ಅಂದರೆ 1 ಕೋಟಿ 70 ಲಕ್ಷ ಇದೆ ಮತ್ತು ಮುಸ್ಲಿಮರ ಸಂಖ್ಯೆ ಶೇ. 91ರಷ್ಟಿದೆ.
1. `ಬಾಂಗ್ಲಾದೇಶ ಹಿಂದೂ-ಬೌದ್ಧ- ಕ್ರಿಶ್ಚಿಯನ್ ಏಕತಾ ಪರಿಷತ್ತು’, ಆಗಸ್ಟ್ 4 ರಿಂದ ಹಿಂದೂಗಳ ಮೇಲೆ 2 ಸಾವಿರಕ್ಕೂ ಹೆಚ್ಚು ದಾಳಿಗಳು ನಡೆದಿವೆಯೆಂದು ಹೇಳಿದೆ. ಹಿಂದೂಗಳು ಮತ್ತು ಇತರ ಅಲ್ಪಸಂಖ್ಯಾತ ಸಮುದಾಯಗಳು, ಮಧ್ಯಂತರ ಸರಕಾರ ಅವರಿಗೆ ಸೂಕ್ತ ರಕ್ಷಣೆ ಒದಗಿಸಿಲ್ಲವೆಂದು ಹೇಳುತ್ತಿವೆ. ಶೇಖ್ ಹಸೀನಾ ಅವರ ಉಚ್ಚಾಟನೆಯ ನಂತರ, ಮತಾಂಧ ಇಸ್ಲಾಂವಾದಿಗಳು ಹೆಚ್ಚೆಚ್ಚು ಪ್ರಭಾವಶಾಲಿಯಾಗಿದ್ದಾರೆ.
2. ಮಂದ್ಯಂತರ ಸರಕಾರದ ಮುಖ್ಯಸ್ಥ ಮೊಹಮ್ಮದ್ ಯೂನಸ್ ಇವರು, ದಾಳಿಯ ಅಂಕಿಅಂಶಗಳು ಉತ್ಪ್ರೇಕ್ಷಿತವಾಗಿವೆ ಎಂದು ಹೇಳುತ್ತಾರೆ.
3. ಈ ಹಿಂದೆ ಅಕ್ಟೋಬರ್ 26 ರಂದು ‘ಸನಾತನ ಜಾಗರಣ ಮಂಚ’ ಅಲ್ಪಸಂಖ್ಯಾತರ ರಕ್ಷಣೆ ಮತ್ತು ಹಕ್ಕುಗಳಿಗಾಗಿ ಚಿತ್ತಗಾಂವ್‌ನಲ್ಲಿ ಬೃಹತ್ ಮೆವಣಿಗೆಯನ್ನು ಮಾಡಿತ್ತು. ಹಿಂದೂ ಅಲ್ಪಸಂಖ್ಯಾತರು 8 ಪ್ರಮುಖ ಬೇಡಿಕೆಗಳ ಬಗ್ಗೆ ಧ್ವನಿ ಎತ್ತಿದ್ದರು. ಬಾಂಗ್ಲಾದೇಶ ಸರಕಾರ ತಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೂ ಆಂದೋಲನ ಮುಂದುವರಿಯಲಿದೆ ಎಂದು ಕಾರ್ಯಕರ್ತರು ತಿಳಿಸಿದ್ದಾರೆ.
ಸಂಪಾದಕೀಯ ನಿಲುವುಭಾರತದ ಹಿಂದೂಗಳಿಗಿಂತ ಬಾಂಗ್ಲಾದೇಶದ ಹಿಂದೂಗಳು ಹೆಚ್ಚು ಜಾಗೃತರಾಗಿದ್ದಾರೆ, ಎಂದೇ ಹೇಳಬೇಕಾಗುವುದು ! |