(ವಾರಾಹಿ, ಇದು ಒಂದು ದೇವಿಯ ಹೆಸರಾಗಿದೆ. ತಾಂತ್ರಿಕ ಉಪಾಸನೆಯಲ್ಲಿ ಆಕೆಗೆ ಹೆಚ್ಚಿನ ಮಹತ್ವವಿದೆ. ವರಾಹ ಅವತಾರದ ಶಕ್ತಿ ವಾರಾಹಿಯಾಗಿದೆ)
ಅಮರಾವತಿ (ಆಂಧ್ರಪ್ರದೇಶ ) – ದಕ್ಷಿಣದಲ್ಲಿನ ಪ್ರಸಿದ್ಧ ನಟ ಮತ್ತು ಜನಸೇನಾ ಪಕ್ಷದ ಮುಖ್ಯಸ್ಥ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ ಕಲ್ಯಾಣ ಇವರು ಅವರ ಪಕ್ಷದಲ್ಲಿ ‘ನರಸಿಂಹ ವಾರಾಹಿ ಬ್ರಿಗೇಡ್’ ಸ್ಥಾಪನೆ ಮಾಡುವ ಘೋಷಣೆ ಮಾಡಿದ್ದಾರೆ. ಸನಾತನ ಧರ್ಮದ ರಕ್ಷಣೆ ಮಾಡುವುದು, ಇದು ಈ ಬ್ರಿಗೇಡಿನ ಮುಖ್ಯ ಉದ್ದೇಶವಾಗಿದೆ, ಎಂದು ಅವರು ಸ್ಪಷ್ಟಪಡಿಸಿದರು. ‘ರಾಜ್ಯದಲ್ಲಿನ ಯಾವುದೇ ಗುಂಪು ಅಥವಾ ವ್ಯಕ್ತಿಯು ಧರ್ಮದ ಅಪಮಾನ ಮಾಡಿದರೆ ನಮ್ಮ ಪಕ್ಷ ಸಹಿಸಿಕೊಳ್ಳುವುದಿಲ್ಲ’ ಎಂದು ಪವನ ಕಲ್ಯಾಣ ಇವರು ಸ್ಪಷ್ಟವಾಗಿ ಎಚ್ಚರಿಕೆ ನೀಡಿದ್ದಾರೆ.
Andhra Pradesh Deputy CM @PawanKalyan garu forms ‘Narasimha Varahi Brigade’ to safeguard Sanatan Dharma! 🕉️
Key Highlights:
🕉️ Protecting Sanatan Dharma: Pawan Kalyan’s brigade aims to shield Sanatan Dharma from insults and criticism.
🛑 Zero Tolerance Policy: No tolerance for… pic.twitter.com/YSWb0TeVWd
— Sanatan Prabhat (@SanatanPrabhat) November 3, 2024
೧. ಪವನ ಕಲ್ಯಾಣ ಇವರು ಒಂದು ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ನಾನು ಎಲ್ಲಾ ಧರ್ಮವನ್ನು ಗೌರವಿಸುತ್ತೇನೆ; ಆದರೆ ನಾನು ನನ್ನ ಶ್ರದ್ದೆಯ ಕುರಿತು ದೃಢವಾಗಿದ್ದೇನೆ. ಯಾರು ಸಾಮಾಜಿಕ ಜಾಲತಾಣದಲ್ಲಿ ಸನಾತನ ಧರ್ಮವನ್ನು ಟೀಕಿಸುತ್ತಾರೆ ಅಥವಾ ಅದರ ಕುರಿತು ಆಗೌರ ತೋರುತ್ತಾರೆ, ಅವರು ಇದರ ಪರಿಣಾಮ ಭೋಗಿಸಬೇಕಾಗುತ್ತದೆ; ಆದ್ದರಿಂದ ನಾನು ಒಂದು ಸಮರ್ಪಿತ ಶಾಖೆ ಸ್ಥಾಪಿಸುತ್ತಿದ್ದೇನೆ. ಸನಾತನ ಧರ್ಮದ ರಕ್ಷಣೆಗಾಗಿ ನನ್ನ ಶಾಖೆಯ ಹೆಸರು ‘ನರಸಿಂಹ ವಾರಾಹಿ ಬ್ರಿಗೇಡ್’ ಎಂದಾಗಿದೆ, ಎಂದು ಹೇಳಿದರು.
೨. ಪ್ರತಿಯೊಬ್ಬ ಹಿಂದೂ ತನ್ನ ಧರ್ಮವನ್ನು ಗೌರವಿಸುವುದರ ಜೊತೆಗೆ ಶಿಸ್ತು ಕೂಡ ಕಲಿತಿರಬೇಕು, ಎಂದು ಅವರು ಈ ಸಮಯದಲ್ಲಿ ಹೇಳಿದರು. ಇದರ ಜೊತೆಗೆ ಅವರು ಆಂಧ್ರಪ್ರದೇಶದ ದತ್ತಿ ಇಲಾಖೆಗೆ ಇತರ ಧರ್ಮದ ಅವಮಾನ ಮಾಡುವ ಪ್ರಯತ್ನ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಕರೆ ಕೂಡ ನೀಡಿದ್ದಾರೆ. ಇಂತಹ ವರ್ತನೆ ತಡೆಯುವದಕ್ಕಾಗಿ ಸಮಾಜದಲ್ಲಿ ಜನಜಾಗೃತಿ ಮಾಡುವ ಆವಶ್ಯಕತೆ ಇದೆ, ಎಂದು ಕೂಡ ಅವರು ಹೇಳಿದರು.
ಸಂಪಾದಕೀಯ ನಿಲುವುಸನಾತನ ಧರ್ಮದ ರಕ್ಷಣೆಗಾಗಿ ಕೃತಿಶೀಲವಾಗಿರುವ ಪವನ ಕಲ್ಯಾಣ ಇವರಿಗೆ ಅಭಿನಂದನೆಗಳು ! |