ಕೆನಡಾದ ಗುಪ್ತಚರ ಸಂಸ್ಥೆಯು 20 ದೇಶಗಳ ಪಟ್ಟಿಯಲ್ಲಿ ಭಾರತದ ಹೆಸರನ್ನು ಸೇರಿಸಿತು

ಕೆನಡಾಗೆ ಭಾರತವು ಅಪಾಯಕಾರಿ ದೇಶವಾಗಿದೆ !

ಒಟಾವಾ (ಕೆನಡಾ) – ಕೆನಡಾದ ಗುಪ್ತಚರ ಸಂಸ್ಥೆ ‘ಕಮ್ಯುನಿಕೇಷನ ಸೆಕ್ಯುರಿಟಿ ಎಸ್ಟಾಬ್ಲಿಷ್ಮೆಂಟ್’ನ ಸೈಬರ್ ವಿಭಾಗವು 2025-26ರಲ್ಲಿ ಕೆನಡಾಕ್ಕೆ ಅಪಾಯಕಾರಿಯಾಗಿರುವ ದೇಶಗಳ ಪಟ್ಟಿಯನ್ನು ಪ್ರಕಟಿಸಿದೆ. ಇದರಲ್ಲಿ ಭಾರತ 5ನೇ ಸ್ಥಾನದಲ್ಲಿದೆ. ಭಾರತದ ಮೊದಲು ಚೀನಾ, ರಷ್ಯಾ, ಇರಾನ ಮತ್ತು ಉತ್ತರ ಕೊರಿಯಾ ದೇಶಗಳಿವೆ. ಈ ಸೂಚಿಯನ್ನು ಕೆನಡಾ ಸರಕಾರದ ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿದೆ. ಕೆನಡಾ ಸರಕಾರದ ಈ ಪಟ್ಟಿಯಲ್ಲಿ ಭಾರತದ ಹೆಸರು ಸೇರಿರುವುದು ಇದೇ ಮೊದಲ ಬಾರಿಯಾಗಿದೆ.

ಗುಪ್ತಚರ ಸಂಸ್ಥೆಯ ವರದಿಯಲ್ಲಿ, ಕೆನಡಾ ಮತ್ತು ಭಾರತದ ನಡುವಿನ ಉದ್ವಿಗ್ನತೆಯಿಂದ ಸೈಬರ್ ಘಟನೆಗಳು ನಡೆಯುತ್ತಿವೆ. ಭಾರತ ಸರಕಾರವು ಸುಧಾರಿತ ಸೈಬರ್ ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತಿದೆ. ಇದರಿಂದ ಕೆನಡಾಕ್ಕೆ ಅನೇಕ ಹಂತಗಳಲ್ಲಿ ಅಪಾಯವಿದೆ. ಭಾರತವು ತನ್ನ ರಾಷ್ಟ್ರೀಯ ಭದ್ರತೆಯನ್ನು ಸುದೃಢಗೊಳಿಸಲು ಸೈಬರ್ ಕಾರ್ಯಕ್ರಮಗಳನ್ನು ಅಭಿವೃದ್ಧಿಪಡಿಸುತ್ತಿದೆ. ಈ ಮೂಲಕ ಅದು ಬೇಹುಗಾರಿಕೆ ನಡೆಸುವ ಸಾಧ್ಯತೆಯಿದೆ. ಭಯೋತ್ಪಾದನೆಯನ್ನು ಎದುರಿಸಬಹುದು ಮತ್ತು ಜಗತ್ತಿನಲ್ಲಿ ತನ್ನ ಸ್ಥಾನವನ್ನು ಸುದೃಢಪಡಿಸಿಕೊಳ್ಳಬಹುದು ಎಂದು ಹೇಳಿದೆ.

ಸಂಪಾದಕೀಯ ನಿಲುವು

  • ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಖಲಿಸ್ತಾನವಾದಿಗಳ ಬೆಂಬಲವನ್ನು ಪಡೆಯುವುದಕ್ಕಾಗಿಯೇ ಅವರ ಸರಕಾರವು ಈ ರೀತಿಯ ಮೂರ್ಖತನವನ್ನು ಮಾಡುತ್ತಿದೆ. ಇದಕ್ಕೆ ಕೆನಡಾದ ನಾಗರಿಕರೇ ಮುಂದಿನ ಚುನಾವಣೆಯಲ್ಲಿ ಉತ್ತರಿಸುತ್ತಾರೆ !
  • ಭಾರತದ ಗುಪ್ತಚರ ಸಂಸ್ಥೆ ‘ರಾ’ ಕೂಡ, ಭಾರತಕ್ಕೆ ಈಗ ಮುಸ್ಲಿಂ ರಾಷ್ಟ್ರಗಳಿಗಿಂತ ಮೊದಲು ಕೆನಡಾವನ್ನು ವಿಶ್ವದ ಅತ್ಯಂತ ಅಪಾಯಕಾರಿ ದೇಶ ಎಂದು ಘೋಷಿಸಬೇಕು !