ಭಾಗಲಪುರ (ಬಿಹಾರ) – ಇಲ್ಲಿ ಶ್ರೀಕಾಲಿ ಮಾತೆಯ ಮೂರ್ತಿ ವಿಸರ್ಜನೆಯ ಮೆರವಣಿಗೆಯ ಸಮಯದಲ್ಲಿ ಮಸೀದಿಯ ಮೇಲೆ ತಥಾಕಥಿತವಾಗಿ ಕೇಸರಿ ಧ್ವಜ ಹಾರಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾದ ನಂತರ ಇಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಯಿತು. ಈ ಸಮಯದಲ್ಲಿ ಸಣ್ಣಪುಟ್ಟ ಘರ್ಷಣೆ ಕೂಡ ನಡೆಯಿತು; ಆದರೆ ಆಡಳಿತವು ತಕ್ಷಣ ಪರಿಸ್ಥಿತಿಯನ್ನು ಹಿಡಿತಕ್ಕೆ ತಂದರು. ಈ ಸಮಯದಲ್ಲಿ ಮೂರ್ತಿ ವಿಸರ್ಜನೆ ೨ ಗಂಟೆಗಳ ಕಾಲ ನಿಲ್ಲಿಸಲಾಗಿತ್ತು. ಆಡಳಿತವು ಧ್ವಜ ಹಾರಿಸಿರುವ ಯುವಕನನ್ನು ವಶಕ್ಕೆ ಪಡೆದಿದ್ದು ಈ ಪ್ರಕರಣದ ವಿಚಾರಣೆ ನಡೆಸುತ್ತಿದ್ದಾರೆ.
ಈ ಸಂದರ್ಭದಲ್ಲಿ ಈ ಘಟನೆಯ ಪ್ರತ್ಯಕ್ಷದರ್ಶಿ ಜಗದೀಶ ಪ್ರಸಾದ ಇವರು, ಇದು ತಪ್ಪಾದ ಉದ್ದೇಶದಿಂದ ಮಾಡಿರುವುದಲ್ಲ. ವಿಸರ್ಜನೆಯ ಸಮಯದಲ್ಲಿ ಮಸೀದಿಯ ಹತ್ತಿರ ಒಂದು ವಿದ್ಯುತ್ತಂತಿ ಕಂಬದಲ್ಲಿ ಕೆಳಗೆ ತೂಗಾಡುತ್ತಿತ್ತು. ಆದ್ದರಿಂದ ಮೂರ್ತಿ ಇರುವ ವಾಹನ ಮುಂದೆ ಹೋಗಲು ಸಾಧ್ಯವಾಗುತ್ತಿರಲಿಲ್ಲ. ಮಸೀದಿಯ ಹತ್ತಿರ ಮುಸಲ್ಮಾನ ಜನಾಂಗದ ಕೆಲವು ಜನರು ಕೂಡ ಕುಳಿತಿದ್ದರು. ಅವರಿಗೆ ಕೇಳಿಯೇ ಓರ್ವ ಹಿಂದೂ ಯುವಕನು ಚಪ್ಪಲಿ ತೆಗೆದು ಮಸೀದಿಯ ಪಕ್ಕದಲ್ಲಿನ ಅಂಗಡಿಯ ಮೇಲೆ ಹತ್ತಿ ತಂತಿ ಮೇಲೆ ಹಿಡಿಯುವ ಪ್ರಯತ್ನ ಮಾಡಿದನು. ಯುವಕನು ತಂತಿ ಮೇಲೆ ಮಾಡಲು ಕೋಲನ್ನು ಕೇಳಿದಾಗ ಕೆಳಗಿನ ಕೇಸರಿ ಧ್ವಜ ಇರುವ ಕೋಲನ್ನು ಕೊಟ್ಟರು. ಯುವಕನು ಅದೇ ಧ್ವಜದಿಂದ ತಂತಿಯನ್ನು ಎತ್ತಿದನು ಮತ್ತು ನಂತರ ಮೂರ್ತಿ ಇರುವ ವಾಹನ ಮುಂದೆ ಸಾಗಲು ಸಾಧ್ಯವಾಯಿತು. ಈ ತಪ್ಪಾದ ತಿಳುವಳಿಕೆಯಿಂದ ಈ ಪ್ರಕರಣ ಬೆಳೆಯಿತು ಮತ್ತು ಎರಡು ಜನಾಂಗದಲ್ಲಿ ಒತ್ತಡದ ವಾತಾವರಣ ನಿರ್ಮಾಣವಾಯಿತು ಎಂದು ಹೇಳಿದರು.
Tension in Bhagalpur (Bihar) over the alleged Incident of hoisting a Saffron Flag on a Mosque
Tension arises over the alleged hoisting of a saffron flag on a mosque; however, when there are attacks on Hindu processions and temples, & tensions occur, Hindus themselves are held… pic.twitter.com/0IjWH8Ilir
— Sanatan Prabhat (@SanatanPrabhat) November 4, 2024
ಸಂಪಾದಕೀಯ ನಿಲುವುಮಸೀದಿಯ ಮೇಲೆ ಕಥಿತ ಕೇಸರಿ ದ್ವಜ ಹಾರಿಸಿರುವುದರಿಂದ ಬಿಗುವಿನ ವಾತಾವರಣ ನಿರ್ಮಾಣ ಮಾಡಲಾಗುತ್ತದೆ; ಆದರೆ ಹಿಂದುಗಳ ಮೆರವಣಿಗೆಗಳ ಮತ್ತು ದೇವಸ್ಥಾನಗಳ ಮೇಲೆ ದಾಳಿ ಮಾಡುವಾಗ ಬಿಗುವಿನ ವಾತಾವರಣ ನಿರ್ಮಾಣವಾದರೆ, ಅದಕ್ಕೆ ಹಿಂದುಗಳನ್ನೇ ಜವಾಬ್ದಾರರನ್ನಾಗಿ ಮಾಡುತ್ತಾರೆ ! |