Supreme Court Questions Government: ದೀಪಾವಳಿಯಲ್ಲಿ ಪಟಾಕಿ ಮೇಲೆ ನಿಷೇಧ ಇದ್ದರೂ ಸಿಡಿಸಿದ್ದರಿಂದ ಅಸಮಾಧಾನಗೊಂಡ ಸರ್ವೋಚ್ಚ ನ್ಯಾಯಾಲಯ

ದೆಹಲಿ ಸರಕಾರ ಮತ್ತು ಪೊಲೀಸರ ಬಳಿ ಕಾರಣ ಕೇಳಿದೆ !- ಸರ್ವೋಚ್ಚ ನ್ಯಾಯಾಲಯ

ನವ ದೆಹಲಿ – ದೆಹಲಿ ಹಾಗೂ ರಾಷ್ಟ್ರೀಯ ರಾಜಧಾನಿ ಪ್ರದೇಶಲ್ಲಿ ಪಟಾಕಿಗಳನ್ನು ನಿಷೇಧಿಸಿದ್ದರು ಕೂಡ ದೀಪಾವಳಿಯಲ್ಲಿ ಪಟಾಕಿ ಸಿಡಿಸಿದ್ದರಿಂದ ಸರ್ವೋಚ್ಚ ನ್ಯಾಯಾಲಯವು ಅಸಮಾಧಾನ ವ್ಯಕ್ತಪಡಿಸಿದೆ. ನಿಷೇಧ ಇದ್ದರೂ ಪಟಾಕಿಗಳು ಹೇಗೆ ಹಾರಿಸಲಾಯಿತು ? ಇದನ್ನು ನಾವು ರಾಜ್ಯ ಸರಕಾರಕ್ಕೆ ಕೇಳಲು ಇಚ್ಚಿಸುತ್ತೇನೆ, ಎಂದು ನ್ಯಾಯಾಲಯವು ಹೇಳಿದೆ. ನ್ಯಾಯಾಲಯವು ದೆಹಲಿ ಪೊಲೀಸ ಅಧಿಕಾರಿಗಳಿಗೂ ಪ್ರಶ್ನಿಸಿದೆ. ಇದಕ್ಕಾಗಿ ಇಬ್ಬರಿಗೂ ಒಂದು ವಾರದ ಕಾಲಾವಕಾಶ ನೀಡಲಾಗಿದೆ. ಪಟಾಕಿಗಳನ್ನು ಉಪಯೋಗಿಸುವುದರ ಕುರಿತು ಸಂಪೂರ್ಣ ನಿಷೇಧ ಹೇರಲು ಏನು ಮಾಡಿದ್ದೀರಿ ? ಇದರ ಕುರಿತು ಪ್ರತಿಜ್ಞಾಪತ್ರ ಪ್ರಸ್ತುತಪಡಿಸುವಂತೆ ಆದೇಶ ಕೂಡ ನೀಡಿದೆ.

೧. ‘ರೈಟರ್ಸ್’ ಈ ವಿದೇಶಿ ವಾರ್ತಾಸಂಸ್ಥೆಯ ಪ್ರಕಾರ, ನವೆಂಬರ್ ೧ ರಂದು ಬೆಳಿಗ್ಗೆ ದೆಹಲಿಗೆ ಜಗತ್ತಿನಲ್ಲಿನ ಅತಿ ಹೆಚ್ಚು ಮಾಲಿನ್ಯ ಇರುವ ನಗರದ ಸ್ಥಾನ ದೊರೆತಿದೆ.

೨. ಒಂದು ವರದಿಯ ಆಧಾರ ನೀಡುತ್ತಾ ಸರ್ವೋಚ್ಚ ನ್ಯಾಯಾಲಯವು, ಈ ಸಾರಿ ಇಲ್ಲಿಯ ಮಾಲಿನ್ಯದ ಮಟ್ಟ ಎಲ್ಲಕ್ಕಿಂತ ಹೆಚ್ಚಾಗಿ ಇರುವುದು ಕಂಡು ಬಂದಿದೆ, ಅದು ಕಳೆದ ೨ ವರ್ಷದ ತುಲನೆಯಲ್ಲಿ ಎಲ್ಲಕ್ಕಿಂತ ಹೆಚ್ಚಾಗಿದೆ ಎಂದು ಹೇಳಿತು.

೩. ನ್ಯಾಯಾಲಯವು, ದೀಪಾವಳಿಯ ಸಮಯದಲ್ಲಿ ಹೊಲದಲ್ಲಿನ ಕಳೆಗಳು ಕೂಡ ಹೊತ್ತಿರುವ ಪ್ರಕರಣಗಳಲ್ಲಿ ಹೆಚ್ಚಳವಾಗಿದೆ. ಪರಿಣಾಮವಾಗಿ ನ್ಯಾಯಾಲಯವು ಪಂಜಾಬ್ ಮತ್ತು ಹರಿಯಾಣ ಸರಕಾರದಿಂದ ಕೂಡ ಅಕ್ಟೋಬರದ ಕೊನೆಯ ೧೦ ದಿನದಲ್ಲಿ ಒಣ ಹುಲ್ಲು ಸುಟ್ಟಿರುವ ಘಟನೆಯ ವರದಿ ಕೇಳಿದೆ. ಈ ಪ್ರಕರಣದಲ್ಲಿನ ಮುಂದಿನ ವಿಚಾರಣೆ ನವೆಂಬರ್ ೧೪ ರಂದು ನಡೆಯುವುದು.