‘ಭವಿಷ್ಯದಲ್ಲಿ ಭಾರತದಲ್ಲಿ ಹಿಂದೂ ಧರ್ಮ ಇರುವುದಿಲ್ಲವಂತೆ ! – ದೆಹಲಿಯ ಐಐಟಿ ಪ್ರಾಧ್ಯಾಪಕಿ ದಿವ್ಯಾ ದ್ವಿವೇದಿ

ದೆಹಲಿಯ ಐಐಟಿ ಪ್ರಾಧ್ಯಾಪಕಿ ದಿವ್ಯಾ ದ್ವಿವೇದಿ ಇವರ ಹಾಸ್ಯಾಸ್ಪದ ಅವಿಷ್ಕಾರ !

ನವ ದೆಹಲಿ – ಭೂತಕಾಲದಲ್ಲಿ ಭಾರತ ಇತ್ತು. ಅದರಲ್ಲಿ ಹೆಚ್ಚಿನ ಸಂಖ್ಯೆಯ ಜನರು ಜಾತಿ ಆಧಾರದ ಮೇಲೆ ಅತ್ಯಾಚಾರ ಹಾಗೂ ತುಳಿತಕ್ಕೆ ಒಳಗಾದರು. ಭವಿಷ್ಯದಲ್ಲಿ ಭಾರತ ಇರುವುದು. ಅದರಲ್ಲಿ ಜಾತಿ ಆಧಾರದ ಮೇಲೆ ಆಗುವ ಭೇದಭಾವ ಇರುವುದಿಲ್ಲ ಹಾಗೂ ಹಿಂದೂ ಧರ್ಮ ಇರುವುದಿಲ್ಲ ಎಂದು ‘ದೆಹಲಿ ಐಐಟಿಯ ಪ್ರಾಧ್ಯಾಪಕಿ ಮಾಡಿದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿದೆ. ಅವರು ‘ಜಿ-20’ ಶೃಂಗ ಸಭೆಯಲ್ಲಿ ಫ್ರೆಂಚ್ ನ ವಾಹಿನಿಯೊಂದರ ಸಂದರ್ಶನದಲ್ಲಿ ಹೇಳಿಕೆ ನೀಡಿದ್ದಾರೆ. ಈ ಹಿಂದೆ ದಿವ್ಯಾ ದ್ವಿವೇದಿಯವರು ‘ಹಿಂದೂ ಧರ್ಮ ನಕಲಿ ಧರ್ಮ, ಅದನ್ನು 20 ನೇ ಶತಮಾನದ ಆರಂಭದಲ್ಲಿ ನಿರ್ಮಿಸಲಾಗಿದೆ’ ಎಂದು ಹೇಳಿದ್ದರು.(ಯಾರು ಸುಳ್ಳು ಎಂಬುದು ಈ ಹೇಳಿಕೆಯಿಂದ ಗಮನಕ್ಕೆ ಬರುತ್ತದೆ ! – ಸಂಪಾದಕರು)

ದಿವ್ಯಾ ದ್ವಿವೇದಿ ವಿಡಿಯೋದ ಮೂಲಕ, ಸದ್ಯ ‘ಆರ್ಯನ್ ಮಾನಸಿಕತೆ’ ಇರುವ ಜನರನ್ನು ಜಗತ್ತಿನ ಮುಂದೆ ಪ್ರಸ್ತುತ ಪಡಿಸಲಾಗುತ್ತಿದೆ. ಹಾಗಾಗಿಯೇ ‘ಇಂಡಿಯಾ’ ಎನ್ನುವ ಹೆಸರಿನ ಬದಲಿಗೆ ‘ಭಾರತ’ ಎಂದು ಒತ್ತು ನೀಡಲಾಗುತ್ತಿದೆ. ಭವಿಷ್ಯದಲ್ಲಿ ‘ಹಿಂದೂ ಮುಕ್ತ ಭಾರತ’ ಎಂದು ಜಗತ್ತಿನಲ್ಲಿ ಪ್ರಸ್ತುತಪಡಿಸಲಾಗಿಲ್ಲ. ಕಳೆದ 300 ವರ್ಷಗಳಿಂದ ಜಾತಿ ವ್ಯವಸ್ಥೆಯು ಭಾರತದಲ್ಲಿರೂಪುಗೊಂಡಿದೆ. ದೇಶದಲ್ಲಿ ಶೇಕಡ ಹತ್ತರಷ್ಟು ಮೇಲ್ಜಾತಿಯವರು ಇದ್ದಾರೆ. ಆದರೆ ಅವರು ದೇಶದಲ್ಲಿ ಶೇಕಡ 90 ರಷ್ಟು ಶಕ್ತಿಶಾಲಿಗಳಾಗಿದ್ದಾರೆ ಹಾಗೂ ಲಾಭದಾಯಕ ಹುದ್ದೆಗಳನ್ನು ಆಕ್ರಮಿಸಿಕೊಂಡಿದ್ದಾರೆ. ಅದು ಇಂದಿಗೂ ನಡೆಯುತ್ತಿದೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ಹಿಂದೂ ಧರ್ಮ ಸನಾತನ ಧರ್ಮ. ಸಾವಿರಾರು ವರ್ಷಗಳಿಂದ ಅದನ್ನು ನಾಶಪಡಿಸಲು ಅನೇಕರು ಯತ್ನಿಸಿದರು, ಆದರೆ ಅವರೇ ನಾಶವಾದರು. ಹಿಂದೂ ಧರ್ಮ ಹಾಗೆಯೇ ಉಳಿದಿದೆ. ಆದ್ದರಿಂದ ಇಂತಹ ಹೇಳಿಕೆಗಳನ್ನು ನೀಡುವವರು ಬುದ್ಧಿಮಟ್ಟ ಎಷ್ಟಿದೆ ಎಂದು ತೋರಿಸುತ್ತದೆ !
ಹೀಗೆ ದ್ವೇಷಿಸುವ ಪ್ರಾಧ್ಯಾಪಕಿಯು ವಿದ್ಯಾರ್ಥಿಗಳಿಗೆ ಏನನ್ನು ಕಲಿಸುತ್ತಿರಬಹುದು ? ಇದನ್ನು ಬೇರೆ ಹೇಳಬೇಕಾಗಿಲ್ಲ ! ಸರಕಾರವು ಇಂತಹವರ ಮೇಲೆ ಕ್ರಮ ಕೈಗೊಳ್ಳಬೇಕು !