Canada Hindu Temple Khalistani Attack : ಕೆನಡಾದಲ್ಲಿ ದೇವಸ್ಥಾನದ ಮೇಲೆ ಖಲಿಸ್ತಾನಿ ಬೆಂಬಲಿಗರಿಂದ ದಾಳಿ

  • ಹಿಂದೂ ಭಕ್ತರಿಗೆ ಥಳಿತ

  • ಪ್ರಧಾನಿ ಟ್ರುಡೋ ಇವರಿಂದ ಖಂಡನೆ

ಬ್ರಂಪ್ಟನ್ (ಕೆನಡಾ) – ಖಲಿಸ್ತಾನ ಬೆಂಬಲಿಗರು ಇಲ್ಲಿನ ಹಿಂದೂ ಸಭಾ ಮಂದಿರದಲ್ಲಿ ನುಗ್ಗಿ ಹಿಂದೂ ಭಕ್ತರ ಮೇಲೆ ದಾಳಿ ಮಾಡಿದರು. ಈ ಘಟನೆ ನವೆಂಬರ್ 3 ರಂದು ಬೆಳಿಗ್ಗೆ ಸಂಭವಿಸಿದೆ. ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಈ ದಾಳಿಯನ್ನು ಖಂಡಿಸಿದ್ದಾರೆ. ಟ್ರುಡೊ ಅವರು, ಬ್ರಂಪ್ಟನನಲ್ಲಿರುವ ಹಿಂದೂ ಸಭಾ ಮಂದಿರದಲ್ಲಿ ನಡೆದ ಹಿಂಸಾಚಾರ ಸ್ವೀಕಾರಾರ್ಹವಲ್ಲ. ಕೆನಡಾದ ಪ್ರತಿಯೊಬ್ಬ ನಾಗರಿಕನು ತನ್ನ ಸ್ವಂತ ಧರ್ಮವನ್ನು ಸ್ವತಂತ್ರವಾಗಿ ಮತ್ತು ಸುರಕ್ಷಿತವಾಗಿ ಆಚರಿಸುವ ಅಧಿಕಾರವಿದೆ ಎಂದು ಹೇಳಿದ್ದಾರೆ.

ಘಟನೆಯ ವಿವರ

ಖಲಿಸ್ತಾನಿಗಳು ತಮ್ಮ ಧ್ವಜವನ್ನು ಹಿಡಿದು ದೇವಸ್ಥಾನದ ಹೊರಗೆ ತಲುಪಿದ್ದರು. ಅವರ ಕೈಗಳಲ್ಲಿ ದೊಣ್ಣೆಗಳಿದ್ದವು. ಅವರು ದೇವಸ್ಥಾನದ ಪರಿಸರದಲ್ಲಿ ನುಗ್ಗಿ ಹಿಂದೂ ಭಕ್ತರನ್ನು ದೊಣ್ಣೆಯಿಂದ ಥಳಿಸಿದ್ದಾರೆ. ಆ ಸಮಯದಲ್ಲಿ ಮಹಿಳಾ ಭಕ್ತರ ಮೇಲೆಯೂ ದಾಳಿ ಮಾಡಿದ್ದಾರೆ. ಭಕ್ತರು ಅವರನ್ನು ವಿರೋಧಿಸಲು ಪ್ರಯತ್ನಿಸಿ ನೂಕು ನುಗ್ಗಲು ಕೂಡ ನಡೆಯಿತು. ಈ ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗುತ್ತಿದೆ.

ಭಕ್ತರ ಮೇಲಿನ ದಾಳಿಯಿಂದಾಗಿ ಕೆನಡಾದಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ. ದೇವಸ್ಥಾನದ ಹೊರಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಬಂದೋಬಸ್ತು ಮಾಡಲಾಗಿದೆ. ಪೀಲ ಪ್ರಾದೇಶಿಕ ಪೊಲೀಸ ಮುಖ್ಯಸ್ಥ ನಿಶಾನ ದುರಾಯಿಪಾ ಮಾತನಾಡಿ, ನಾವು ಶಾಂತಿಯುತವಾಗಿ ಮತ್ತು ಸುರಕ್ಷಿತವಾಗಿ ಪ್ರತಿಭಟಿಸುವ ಹಕ್ಕನ್ನು ಗೌರವಿಸುತ್ತೇವೆ; ಆದರೆ ಹಿಂಸಾಚಾರ ಮತ್ತು ಅಪರಾಧ ಕೃತ್ಯಗಳನ್ನು ಸಹಿಸುವುದಿಲ್ಲ. ಅಂತಹ ಕೃತ್ಯಗಳಲ್ಲಿ ತೊಡಗಿರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಸಂಪಾದಕೀಯ ನಿಲುವು

ಕೆನಡಾದಲ್ಲಿ ಖಲಿಸ್ತಾನಿಗಳಿಗೆ ಟ್ರುಡೋ ಸರಕಾರವು ಭಾರತ ಮತ್ತು ಹಿಂದೂಗಳ ವಿರುದ್ಧ ಚಟುವಟಿಕೆ ನಡೆಸಲು ಪೂರ್ಣ ಸ್ವಾತಂತ್ರ್ಯ ನೀಡಿರುವುದರಿಂದ ಇಂತಹ ಘಟನೆಗಳು ನಿರಂತರವಾಗಿ ನಡೆಯುತ್ತಿವೆ. ಕೆನಡಾಗೆ ಹದ್ದುಬಸ್ತಿನಲ್ಲಿಡಲು ಭಾರತ ಪ್ರಯತ್ನಿಸುತ್ತಿದ್ದರೂ, ಅದು ಸಾಕಾಗುತ್ತಿಲ್ಲವೆಂದು ಸಾಬೀತಾಗುತ್ತಿದೆ ಎನ್ನುವುದು ಇದರಿಂದ ಗಮನಕ್ಕೆ ಬರುತ್ತಿದೆ. ಇದನ್ನು ಅರಿತು ಭಾರತವು ಕೆನಡಾವನ್ನು ಸಂಪೂರ್ಣವಾಗಿ ಬಹಿಷ್ಕರಿಸುವುದು ಸೂಕ್ತವಾಗಿದೆ !

ಹಿಂದೂಗಳನ್ನು ರಕ್ಷಿಸುವಲ್ಲಿ ನಮ್ಮ ದೇಶ ಅಸಮರ್ಥವಾಗಿದೆ ! – ಕೆನಡಾದ ವಿರೋಧ ಪಕ್ಷದ ನಾಯಕ

ಕೆನಡಾದ ವಿರೋಧ ಪಕ್ಷದ ನಾಯಕ ಪಿಯೆ ಪಾಲಿಯೆವರಾ ಇವರು ದೇವಸ್ಥಾನದಲ್ಲಿ ನಡೆದ ದಾಳಿಯನ್ನು ಖಂಡಿಸಿದ್ದಾರೆ. ಅವರು ಮಾತನಾಡಿ, ನಮ್ಮ ದೇಶ ಹಿಂದೂಗಳನ್ನು ರಕ್ಷಿಸಲು ಸಮರ್ಥವಾಗಿಲ್ಲ ಎಂದರು. ಒಟಾವಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಈ ಘಟನೆಯ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿ, “ಇದು ತುಂಬಾ ನಿರಾಶಾದಾಯಕವಾಗಿದೆ” ಎಂದು ಹೇಳಿದೆ.

ಅಖಿಲ ಭಾರತೀಯ ಸಂತ ಸಮಿತಿಯಿಂದ ವಿರೋಧ

ಕೆನಡಾದಲ್ಲಿ ದೇವಸ್ಥಾನದಲ್ಲಿನ ದಾಳಿಯ ನಂತರ ಅಖಿಲ ಭಾರತೀಯ ಸಂತ ಸಮಿತಿಯ ರಾಷ್ಟ್ರೀಯ ಕಾರ್ಯದರ್ಶಿ ಸ್ವಮಿ ಜಿತೇಂದ್ರನಂದ ಸರಸ್ವತಿಯವರು ಮಾತನಾಡಿ, ಇದು ಹಿಂದೂಗಳ ವಿರುದ್ಧ ಜಾಗತಿಕ ಸಂಚಿನ ಭಾಗವಾಗಿದೆ. ಟ್ರುಡೊ ಸರಕಾರ ಈ ದಾಳಿಯನ್ನು ಖಲಿಸ್ತಾನಿ ದಾಳಿಯೆಂದು ಹೇಳಿ ಅದರಿಂದ ದೂರಸರಿಯಲು ಸಾಧ್ಯವಿಲ್ಲ. ಪ್ರಪಂಚದಾದ್ಯಂತ ಅಹಿಂಸೆಯ ಸಂದೇಶವನ್ನು ನೀಡುವ ಸನಾತನ ಧರ್ಮದವರ ದೇವಸ್ಥಾನಗಳ ಮೇಲೆ ದಾಳಿ ನಡೆದರೆ, ಅಲ್ಲಿನ ಸರಕಾರ ವಿಫಲವಾಗಿದೆಯೆಂದು ತಿಳಿಯಬೇಕು. ಈ ಪ್ರಕರಣದ ಕುರಿತು ಭಾರತ ಸರಕಾರ ತನ್ನ ನಿಲುವನ್ನು ಮಂಡಿಸಬೇಕು ಎಂದು ಹೇಳಿದರು.

ದೀಪಾವಳಿಯ ನಿಮಿತ್ತ ಪ್ರಧಾನಿ ಟ್ರುಡೊ ದೇವಸ್ಥಾನಕ್ಕೆ ಭೇಟಿ !

ಈ ದಾಳಿಯ ಮೊದಲು ಕೆನಡಾ ಪ್ರಧಾನಿ ಜಸ್ಟಿನ ಟ್ರುಡೊ ಕೆನಡಾದ ಹಿಂದೂಗಳನ್ನು ದೀಪಾವಳಿಯ ಶುಭಾಶಯಗಳನ್ನು ನೀಡಿದ್ದರು. ಅವರು ಸಾಮಾಜಿಕ ಮಾಧ್ಯಮದಲ್ಲಿ ಒಂದು ವಿಡಿಯೋ ಪ್ರಸಾರ ಮಾಡಿದರು. ವಿಡಿಯೋದಲ್ಲಿ ಟ್ರುಡೊ ತಮ್ಮ ಮುಂಗೈಗೆ ಕಟ್ಟಿರುವ ಪವಿತ್ರ ದಾರವನ್ನು ತೋರಿಸುತ್ತಾ, ‘ಕಳೆದ ಕೆಲವು ತಿಂಗಳಿನಲ್ಲಿ ನಾನು 3 ವಿವಿಧ ಹಿಂದೂ ದೇವಸ್ಥಾನಕ್ಕೆ ಹೋಗಿದ್ದಾಗ, ಆ ಸಮಯದಲ್ಲಿ ನನಗೆ ಈ ದಾರವನ್ನು ಕಟ್ಟದ್ದಾರೆ. ಇದು ಸೌಭಾಗ್ಯ ತರುತ್ತದೆ, ರಕ್ಷಣೆ ನೀಡುತ್ತದೆ. ಇದು ತಾನಾಗಿಯೇ ಬೀಳುವವರೆಗೂ ನಾನು ಇದನ್ನು ಕೈಯಿಂದ ತೆಗೆಯುವುದಿಲ್ಲ’. ಎಂದು ಹೇಳಿದ್ದರು.

ಸಂಪಾದಕೀಯ ನಿಲುವು

ದೀಪಾವಳಿಯ ದಿನಗಳಲ್ಲಿ ಖಲಿಸ್ತಾನಿಗಳು ಹಿಂದೂಗಳ ದೇವಸ್ಥಾನದ ಮೇಲೆ ದಾಳಿ ನಡೆಸುತ್ತಾರೆ. ಅದಕ್ಕೆ ಟ್ರುಡೊ ಕಠಿಣ ಕ್ರಮ ಕೈಕೊಳ್ಳುತ್ತಾರೆಯೇ ? ಎನ್ನುವುದು ಪ್ರಶ್ನೆಯಾಗಿದೆ. ಟ್ರುಡೋ ಎಷ್ಟು ಸಲ ದೇವಸ್ಥಾನಕ್ಕೆ ಹೋದರೂ ಹಿಂದೂಗಳಿಗೆ ಅವರ ಬಗ್ಗೆ ಆತ್ಮೀಯತೆ ನಿರ್ಮಾಣವಾಗುವುದಿಲ್ಲ ಎನ್ನುವುದನ್ನು ಗಮನದಲ್ಲಿಟ್ಟುಕೊಳ್ಳಬೇಕು !

ಪ್ರಧಾನಿ ಜಸ್ಟಿ ಟ್ರುಡೋ ಭಯೋತ್ಪಾದಕರನ್ನು ಬಹಿರಂಗವಾಗಿ ಬೆಂಬಲಿಸುತ್ತಾರೆ ! – ಕೆನಡಾ ಪತ್ರಕರ್ತ ಡೆನಿಯಲ ಬೋರ್ಡಮನನಿಂದ ಕಪಾಳಮೋಕ್ಷ

ಕೆನಡಾ ಪತ್ರಕರ್ತ ಡೆನಿಯಲ ಬೋರ್ಡಮನ ಇವರು ಸ್ವಂತ ದೇಶದ ಸರಕಾರಕ್ಕೆ ಕಪಾಳ ಮೋಕ್ಷ ಮಾಡಿದ್ದಾರೆ. ಅವರು ದೇವಸ್ಥಾನ ಮೇಲಿನ ದಾಳಿಯ ಘಟನೆಯ ವಿಷಯದಲ್ಲಿ ಮಾತನಾಡಿ, ಕೆನಡಾದಲ್ಲಿ ಮೊದಲು ಸಿನೆಗಾಂಗ (ಜ್ಯೂ ಸಮುದಾಯದವರ ಪ್ರಾರ್ಥನಾ ಸ್ಥಳ) ಮತ್ತು ಚರ್ಚಗಳಂತಹ ಧಾರ್ಮಿಕ ಸ್ಥಳಗಳನ್ನು ಗುರಿ ಮಾಡಲಾಗಿತ್ತು; ಆದರೆ ಈ ತಾಜಾ ಘಟನೆ ಹಿಂದೂ ಭಕ್ತರ ಮೇಲೆ ನಡೆದ ಹಿಂಸಾಚಾರ ಇದು ಆತಂಕ ಹೆಚ್ಚಾಗಿರುವುದು ತೋರಿಸುತ್ತಿದೆ. ಈ ದೇಶದಲ್ಲಿ ಹಗಲಿನಲ್ಲೇ ಭಕ್ತರ ಮೇಲೆ ನಡೆದ ಇದು ಮೊದಲ ದಾಳಿಯಾಗಿದೆ. ಈ ಘಟನೆಯನ್ನು ತಡೆಯಬೇಕಾಗಿತ್ತು. ಕೆನಡಾ ಸರಕಾರ ಹಿಂದೂಗಳನ್ನು ಬೆಂಬಲಿಸುವುದಿಲ್ಲ. ಪ್ರಧಾನಿ ಜಸ್ಟಿನ ಟ್ರುಡೋ ಕೆಲವೊಮ್ಮೆ ಬಹಿರಂಗವಾಗಿ ಭಯೋತ್ಪಾದನೆಯನ್ನು ಬೆಂಬಲಿಸುತ್ತಾರೆ. ಕೆಲವೊಮ್ಮೆ ಮೌನ ವಹಿಸುತ್ತಾರೆ. ಅವರು ತಮ್ಮ ಕೆಲಸವನ್ನು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ. ಇದರಿಂದ ಎಲ್ಲಿಯವರೆಗೆ ಈ ಸಂದರ್ಭದಲ್ಲಿ ನಿರ್ದಿಷ್ಟ ಕ್ರಮವನ್ನು ಕೈಕೊಳ್ಳುವುದು ಕಾಣಿಸುವುದಿಲ್ಲವೋ, ಅಲ್ಲಿಯವರೆಗೆ ಅವರ ಮೇಲೆ ವಿಶ್ವಾಸವಿಡಲು ಸಾಧ್ಯವಿಲ್ಲ. ಪ್ರಧಾನಿ ಇಂತಹ ದಾಳಿಯ ನಿಷೇಧಿಸುವ ಹೇಳಿಕೆಯನ್ನು ನೀಡಬಹುದು; ಆದರೆ ಇಲ್ಲಿಯವರೆಗೆ ಸೂಕ್ತ ಕ್ರಮ ಕೈಗೊಂಡಿಲ್ಲ. ಟ್ರುಡೋ ಇವರ ಕಾಲಾವಧಿ ಮುಂದುವರಿದಿರುವುದರಿಂದ ಎರಡೂ ದೇಶಗಳ ಸಂಬಂಧ ನಿರಾಶಜನಕ ಆಗಿದೆ. ಹದಗೆಟ್ಟಿರುವ ರಾಜಕೀಯ ಸಂಬಂಧ ಬೇಗನೆ ಸುಧಾರಣೆಯಾಗುವಸಾಧ್ಯತೆಯಿಲ್ಲ ಎಂದು ಹೇಳಿದರು.

ಹಿಂದೂ ಮತ್ತು ದೇವಾಲಯಗಳನ್ನು ರಕ್ಷಿಸಿ ! – ಭಾರತದಿಂದ ಕೆನಡಾ ಸರಕಾರಕ್ಕೆ ಆಗ್ರಹ

ನವದೆಹಲಿ – ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಇವರು, ನಾವು ಹಿಂದೂ ಸಭಾ ದೇವಸ್ಥಾನದಲ್ಲಿ ಕಟ್ಟರವಾದಿಗಳು ಮತ್ತು ಪ್ರತ್ಯೇಕತಾವಾದಿಗಳು ನಡೆಸಿದ ಹಿಂಸಾಚಾರವನ್ನು ಖಂಡಿಸುತ್ತೇವೆ. ಇಂತಹ ದಾಳಿಗಳಿಂದ ಎಲ್ಲಾ ಪ್ರಾರ್ಥನಾ ಸ್ಥಳಗಳನ್ನು ರಕ್ಷಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ನಾವು ಕೆನಡಾ ಸರಕಾರಕ್ಕೆ ಕರೆ ನೀಡುತ್ತೇವೆ. ಹಿಂಸಾಚಾರದಲ್ಲಿ ಭಾಗಿಯಾಗಿರುವವರ ವಿರುದ್ಧ ಕೆನಡಾ ಸರಕಾರ ಕ್ರಮ ಕೈಗೊಳ್ಳುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ. ಕೆನಡಾದಲ್ಲಿರುವ ಭಾರತೀಯ ನಾಗರಿಕರ ಸುರಕ್ಷತೆ ಮತ್ತು ಕಲ್ಯಾಣದ ಬಗ್ಗೆ ನಾವು ತುಂಬಾ ಆತಂಕದಲ್ಲಿದ್ದೇವೆ ಎಂದು ಹೇಳಿದರು.