ಗದರ 2, ದ ಕಾಶ್ಮೀರ ಫೈಲ್ಸ್ ಮತ್ತು ದ ಕೇರಳ ಸ್ಟೋರಿ ಈ ಚಲನಚಿತ್ರಗಳಿಗೆ ದೊರೆತಿರುವ ಜನಪ್ರಿಯತೆ ನಿರಾಶಾದಾಯಕ ! – ನಟ ನಸರುದ್ದೀನ್ ಶಾಹ

ನಟ ನಸರುದ್ದೀನ್ ಶಾಹ ಇವರ ಅಸುಯೆ !


ಮುಂಬಯಿ – ಗದರ 2, ದ ಕಾಶ್ಮೀರ್ ಫೈಲ್, ದ ಕೇರಳ ಸ್ಟೋರಿ ಈ ಚಲನಚಿತ್ರಗಳಿಗೆ ದೊರೆತಿರುವ ಜನಪ್ರಿಯತೆ ನೋಡಿ ನಾನು ನಿರಾಶನಾಗಿದ್ದೇನೆ. ಈ ಜನಪ್ರಿಯತೆ ನಿರಾಶಾದಾಯಕವಾಗಿದೆ ಎಂದು ನಟ ನಸುರುದ್ದೀನ್ ಶಾಹ ಇವರು ಫ್ರೀ ಪ್ರೆಸ್ ಜರ್ನಲ್ ಇದಕ್ಕೆ ನೀಡಿರುವ ಸಂದರ್ಶನದಲ್ಲಿ ಹೇಳಿದರು. ಈ ಸಮಯದಲ್ಲಿ ಶಾಹ ಇವರಿಗೆ, ಬಾಲಿವುಡ್ ನಲ್ಲಿ ಚಲನಚಿತ್ರ ನಿರ್ಮಾಣದ ಉದ್ದೇಶ ಬದಲಾಗಿದೆಯೆ ? ಈ ಬಗ್ಗೆ ಶಾಹ ಇವರು, ‘ನೀವು ಎಷ್ಟು ಕುರುಡು ರಾಷ್ಟ್ರವಾದಿಗಳಾಗುವಿರಿ ಅಷ್ಟು ಜನಪ್ರಿಯವಾಗುತ್ತೀರಾ; ಕಾರಣ ಅವರೇ ಈ ದೇಶದ ಮೇಲೆ ಅಧಿಕಾರ ಹೊಂದಿದ್ದಾರೆ. ಕೇವಲ ದೇಶಪ್ರೇಮ ಮಾಡುವುದು ಸಾಲದು, ಅದರ ಬಗ್ಗೆ ಡೋಲು ಬಡಿಯುವುದು ಮತ್ತು ಕಾಲ್ಪನಿಕ ಶತ್ರುಗಳನ್ನು ನಿರ್ಮಿಸುವುದು ಅವಶ್ಯಕವಾಗಿದೆ. ಚಲನಚಿತ್ರ ನಿರ್ಮಾಪಕರಿಗೆ ಎಲ್ಲಾ ಸುಳ್ಳು ವಿಷಯಕ್ಕೆ ಗೌರವ ನೀಡುವುದು ಮತ್ತು ಇತರ ಜನಾಂಗವನ್ನು ಕೀಳಾಗಿ ತೋರಿಸುವ ಚಲನಚಿತ್ರ ನಿರ್ಮಿಸಲು ಅನಿವಾರ್ಯಗೊಳಿಸಲಾಗುತ್ತಿದೆ ಇದು ಅಪಾಯಕಾರಿ ಆಗಿದೆ.” ಎಂದು ಹೇಳಿದರು.

ಸಂಪಾದಕರ ನಿಲುವು 

* ಈ ಚಲನಚಿತ್ರ ಹಿಂದುಗಳ ಮೇಲಿನ ಅನ್ಯಾಯದ ಬಗ್ಗೆ ಮತ್ತು ಮತಾಂಧ ಮುಸಲ್ಮಾನರ ದೌರ್ಜನ್ಯ ಮತ್ತು ಕ್ರೂರ ಮಾನಸಿಕತೆಯ ಮೇಲೆ ಬೆಳಕು ಚೆಲ್ಲಿರುವುದರಿಂದ ನಸರುದ್ದೀನ್ ಶಾಹ ಇಂತಹ ಹಿಂದೂದ್ವೇಷಿಗಳಿಗೆ ಹೊಟ್ಟೆ ಉರಿ ಬರುತ್ತದೆ. ಇದರಲ್ಲಿ ಆಶ್ಚರ್ಯವೇನು ! ಶಾಹ ಇವರ ಧರ್ಮಬಾಂಧವರು ಹಿಂದುಗಳ ಮೇಲೆ ನಡೆಸಿರುವ ದೌರ್ಶನ್ಯ ಎಂದು ಸಮಾಜದ ಮುಂದೆ ಬರಬಾರದೆಂದು ಅವರಿಗೆ ಅನಿಸಿತ್ತೆ ? ಇಂತಹವರು ಅವರ ಚಲನ ಚಿತ್ರದಲ್ಲಿ ಎಷ್ಟು ಹಿಂದೂ ದ್ವೇಷ ಕಾಪಾಡಿದ್ದಾರೆ ? ಇಂತಹವರ ಚಲನಚಿತ್ರಗಳ ಮೇಲೆ ಈಗ ಹಿಂದುಗಳು ಬಹಿಷ್ಕಾರ ಹಾಕಿ ಅವರಿಗೆ ಹಿಂದೂ ಐಕತೆಯ ಬಿಸಿ ಮುಟ್ಟಿಸಬೇಕು !