ಸರ್ವೋಚ್ಚ ನ್ಯಾಯಾಲಯ ಮಣಿಪುರ ಸರಕಾರದಿಂದ ಉತ್ತರ ಕೇಳಿದೆ

ಮಣಿಪುರ ಸರಕಾರ ದೇಶದ ಸಂಪಾದಕರ ಸಂಘಟನೆಯಾಗಿರುವ `ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ’ ವಿರುದ್ಧ ದೂರು ದಾಖಲಿಸಿದೆ. ಇದರ ವಿರುದ್ಧ ಈ ಸಂಘಟನೆಯು ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿರುವ ಅರ್ಜಿಯ ಕುರಿತು ವಿಚಾರಣೆ ನಡೆಸಿದ ನ್ಯಾಯಾಲಯವು ಈ ಸಂದರ್ಭದಲ್ಲಿ ಮಣಿಪುರ ಸರಕಾರದಿಂದ ಉತ್ತರವನ್ನು ಕೇಳಿದೆ.

ಭಾರತದಿಂದ ನೇಪಾಳದ ವಿದೇಶಾಂಗ ಸಚಿವಾಲಯವು ಕ್ರಮಕೈಗೊಳ್ಳುವಂತೆ ಆಗ್ರಹ !

ನೇಪಾಳದಲ್ಲಿನ ಚೀನಾದ ರಾಯಭಾರಿಯು ಭಾರತದ ವಿರುದ್ಧ ಹೇಳಿಕೆ ನೀಡಿದ ನಂತರ ಈಗ ಭಾರತದ ಕಟ್ಮಂಡು ಇಲ್ಲಿಯ ರಾಯಭಾರಿ ಕಚೇರಿಯಿಂದ ನೇಪಾಳದ ವಿದೇಶಾಂಗ ಸಚಿವಾಲಯದ ಬಳಿ ಈ ವಿಷಯದ ಬಗ್ಗೆ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳಲು ಒತ್ತಾಯಿಸಿದೆ.

‘ದೇವಸ್ಥಾನದಲ್ಲಿ ಕೆಲವು ಜನರಿಗೆ ಶರ್ಟು ಬಿಚ್ಚಿಸಿ ಪ್ರವೇಶ ನೀಡುವುದು, ಇದು ಅಮಾನವಿಯ ಪದ್ಧತಿಯಾಗಿದ್ದು ದೇವರೆದುರು ಎಲ್ಲರೂ ಸಮಾನರೆ ! (ಅಂತೆ) – ಮುಖ್ಯಮಂತ್ರಿ ಸಿದ್ದರಾಮಯ್ಯ

ಒಮ್ಮೆ ನಾನು ಕೇರಳದ ಒಂದು ದೇವಸ್ಥಾನಕ್ಕೆ ಹೋಗಿದ್ದೇನು. ಅಲ್ಲಿ ನನ್ನನ್ನು ಶರ್ಟ್ ತೆಗೆದು ಪ್ರವೇಶ ಮಾಡಲು ಹೇಳಿದರು; ಆದರೆ ನಾನು ದೇವಸ್ಥಾನದಲ್ಲಿ ಪ್ರವೇಶಿಸಲು ನಿರಾಕರಿಸಿದೆ. ‘ನಾನು ಹೊರಗಿನಿಂದ ಪ್ರಾರ್ಥನೆ ಮಾಡುವೆ’, ಎಂದು ಅವರಿಗೆ ಹೇಳಿದೆ. ಅವರು ಸಾಲಿನಲ್ಲಿನ ಪ್ರತಿಯೊಬ್ಬರಿಗೆ ಶರ್ಟು ಬಿಚ್ಚಲು ಹೇಳಲಿಲ್ಲ. ಕೇವಲ ಕೆಲವು ಜನರಿಗೆ ಶರ್ಟು ಬಿಚ್ಚಲು ಹೇಳುತ್ತಿದ್ದರು.

ಅಯೋಧ್ಯೆಯನ್ನು ವಿಶ್ವದ ಅತಿದೊಡ್ಡ ಧಾರ್ಮಿಕ ಯಾತ್ರಾ ಕೇಂದ್ರವನ್ನಾಗಿ ಮಾಡಲು 32 ಸಾವಿರ ಕೋಟಿ ರೂಪಾಯಿಗಳ ಯೋಜನೆ !

ಕೇಂದ್ರ ಮತ್ತು ರಾಜ್ಯ ಸರಕಾರಗಳು ಅಯೋಧ್ಯೆಯನ್ನು ಕೇವಲ ಧಾರ್ಮಿಕ ಪ್ರವಾಸೋದ್ಯಮದ ದೃಷ್ಟಿಯಿಂದ ಅಭಿವೃದ್ಧಿಪಡಿಸದೇ ಅದನ್ನು ಹಿಂದೂ ಧರ್ಮವನ್ನು ಕಲಿಯುವ ವಿಶ್ವದರ್ಜೆಯ ಕೇಂದ್ರವನ್ನಾಗಿ ಮಾಡಲು ಪ್ರಯತ್ನಿಸಬೇಕು ! ಇದರಿಂದಲೇ ಹಿಂದೂ ಧರ್ಮ ಮತ್ತು ಅದರ ಧಾರ್ಮಿಕ ಸಂಪ್ರದಾಯಗಳನ್ನು ಸಂರಕ್ಷಣೆ ಮತ್ತು ಉತ್ತೇಜಿಸಬಹುದು !

ಉದಯನಿಧಿ ಮಾರನ್ ಹೇಳಿಕೆಗೆ ಧಿಕ್ಕಾರ ! – ಖ್ಯಾತ ನಟ ಹಾಗೂ ನಿರ್ದೇಶಕ ಡಾ. ಥ್ರಿಲ್ಲರ ಮಂಜು

ಸನಾತನ ಧರ್ಮವನ್ನು ಡೆಂಗ್ಯೂ ಮತ್ತು ಮಲೇರಿಯಾಗೆ ಹೋಲಿಕೆ ಮಾಡಿದ ತಮಿಳು ನಾಡಿನ ಮುಖ್ಯಮಂತ್ರಿ ಸ್ಟಾಲಿನ್ ಅವರ ಪುತ್ರ ಹಾಗೂ ಸಚಿವ ಉದಯನಿಧಿ ಮಾರನ್ ಅವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸುತ್ತೇನೆ

ಮೋಸದಿಂದ ಹಿಂದೂಗಳ ಮತಾಂತರವನ್ನು ನಿಲ್ಲಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯದಿಂದ ತಿರಸ್ಕಾರ !

ಮೋಸದಿಂದ ನಡೆಯುವ ಮತಾಂತರಕ್ಕೆ ಕಡಿವಾಣ ಹಾಕಲು ಕೇಂದ್ರ ಸರಕಾರಕ್ಕೆ ಕ್ರಮ ಕೈಗೊಳ್ಳುವಂತೆ ಆದೇಶಿಸಬೇಕೆಂದು ಒತ್ತಾಯಿಸುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿತು. ಅರ್ಜಿಯನ್ನು ಕರ್ನಾಟಕದ ನ್ಯಾಯವಾದಿ ಜೆರೋಮ್ ಆಂಟೊ ಸಲ್ಲಿಸಿದ್ದರು.

ವಕ್ಫ್ ಕಾನೂನು ರದ್ದು ಪಡಿಸಿ – ಬಸವನಗೌಡ ಪಾಟೀಲ ಯತ್ನಾಳ

ಭಾಜಪದ ಶಾಸಕ ಮತ್ತು ಮಾಜಿ ಕೇಂದ್ರ ಸಚಿವ ಬಸವನಗೌಡ ಪಾಟೀಲ ಯತ್ನಾಳ ಇವರು ಪ್ರಧಾನಮಂತ್ರಿ ಮೋದಿ ಇವರಿಗೆ ಪತ್ರ ಬರೆದು ವಕ್ಫ್ ಕಾನೂನು ರದ್ದು ಪಡಿಸಲು ಆಗ್ರಹಿಸಿದ್ದಾರೆ.

ಉದಯ ನಿಧಿ ಇವರ ಹೇಳಿಕೆಗೆ ಉತ್ತರ ನೀಡಿ ! – ಪ್ರಧಾನಮಂತ್ರಿ ಮೋದಿ

ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಇವರ ಪುತ್ರ ಮತ್ತು ಸಚಿವ ಉದಯನಿಧಿ ಇವರು ಸನಾತನ ಧರ್ಮ ಮುಗಿಸುವುದರ ಬಗ್ಗೆ ನೀಡಿರುವ ಹೇಳಿಕೆಯ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿ ಇವರು ಮೊಟ್ಟಮೊದಲ ಬಾರಿಗೆ ಹೇಳಿಕೆ ನೀಡಿದ್ದಾರೆ.

ಫ್ರಾನ್ಸ್ ನ ಸರಕಾರಿ ಶಾಲೆಯಲ್ಲಿ ‘ಅಬಾಯಾ’ ಧರಿಸಿ ಬಂದ ಮುಸ್ಲಿಂ ವಿದ್ಯಾರ್ಥಿನಿಯರನ್ನು ವಾಪಸ್ ಕಳುಹಿಸಲಾಯಿತು!

ಫ್ರಾನ್ಸ್‌ನ ಸರಕಾರಿ ಶಾಲೆಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ‘ಅಬಾಯಾ’ ಧರಿಸುವುದನ್ನು ನಿಷೇಧಿಸಿವೆ. ಇಂತಹ ಸಮಯದಲ್ಲಿ, ಶಾಲೆಯ ಮೊದಲ ದಿನ ಅಬಾಯಾ ಧರಿಸಿ ಶಾಲೆಗೆ ಬಂದ ಮುಸ್ಲಿಂ ವಿದ್ಯಾರ್ಥಿನಿಯರನ್ನು ಅದನ್ನು ಬದಲಾಯಿಸಲು ಹೇಳಲಾಯಿತು; ಆದರೆ ಇದಕ್ಕೆ ವಿದ್ಯಾರ್ಥಿನಿ ನಿರಾಕರಿಸಿದ್ದಾಳೆ.

ಸಂಸತ್ತಿನ ವಿಶೇಷ ಅಧಿವೇಶನದ ವಿಷಯ ಪ್ರಸ್ತಾಪಿಸದಿದ್ದರಿಂದ ಪ್ರಧಾನಿ ಮೋದಿಗೆ ಸೋನಿಯಾ ಗಾಂಧಿ ಪತ್ರ

ಸೆಪ್ಟೆಂಬರ್ 18 ರಿಂದ 23 ರವರೆಗೆ ಸಂಸತ್ತಿನ ವಿಶೇಷ ಅಧಿವೇಶನವನ್ನು ಕರೆಯಲಾಗಿದೆ. ‘ಈ ಅಧಿವೇಶನದ ವಿಷಯ ಏನೆಂದು ಸರಕಾರ ಹೇಳಿಲ್ಲ. ಈ ಕುರಿತು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.