ಮೋಸದಿಂದ ಹಿಂದೂಗಳ ಮತಾಂತರವನ್ನು ನಿಲ್ಲಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯದಿಂದ ತಿರಸ್ಕಾರ !

  • ಅರ್ಜಿಯ ಮೂಲಕ ಈ ನಿಟ್ಟಿನಲ್ಲಿ ಕೇಂದ್ರ ಸರಕಾರಕ್ಕೆ ಆದೇಶ ನೀಡುವಂತೆ ಕೋರಲಾಗಿತ್ತು !

ನವ ದೆಹಲಿ – ಮೋಸದಿಂದ ನಡೆಯುವ ಮತಾಂತರಕ್ಕೆ ಕಡಿವಾಣ ಹಾಕಲು ಕೇಂದ್ರ ಸರಕಾರಕ್ಕೆ ಕ್ರಮ ಕೈಗೊಳ್ಳುವಂತೆ ಆದೇಶಿಸಬೇಕೆಂದು ಒತ್ತಾಯಿಸುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿತು. ಅರ್ಜಿಯನ್ನು ಕರ್ನಾಟಕದ ನ್ಯಾಯವಾದಿ ಜೆರೋಮ್ ಆಂಟೊ ಸಲ್ಲಿಸಿದ್ದರು. ‘ಹಿಂದೂಗಳನ್ನು ಗುರಿಯಾಗಿಸಿ ವಂಚನೆಯಿಂದ ಮತಾಂತರಿಸಲಾಗುತ್ತಿದೆ’ ಎಂದು ಅರ್ಜಿಯಲ್ಲಿ ತಿಳಿಸಲಾಗಿತ್ತು.

1. ನ್ಯಾಯಾಲಯ ವಿಚಾರಣೆಯ ಸಮಯದಲ್ಲಿ, ಈ ಪ್ರಕರಣದಲ್ಲಿ ನ್ಯಾಯಾಲಯ ಏಕೆ ಹಸ್ತಕ್ಷೇಪ ಮಾಡಬೇಕು ? ನ್ಯಾಯಾಲಯ ಈ ಅಸಂದರ್ಭದಲ್ಲಿ ಸರಕಾರಕ್ಕೆ ಹೇಗೆ ಆದೇಶಿಸಬಹುದು ? ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುವುದು. ಈಗ ಒಂದು ಅಸ್ತ್ರದಂತೆ ಆಗಿದೆ. ಯಾರೂ ಬರುತ್ತಾರೆ ಮತ್ತು ಯಾವುದೋ ಪ್ರಕರಣದ ಕುರಿತು ಅರ್ಜಿ ದಾಖಲಿಸುತ್ತಾರೆ ಎಂದು ಹೇಳಿದೆ.

2. ನ್ಯಾಯವಾದಿ ಆಂಟೋ ಇವರು ಈ ಸಂದರ್ಭದಲ್ಲಿ ನ್ಯಾಯಾಲಯಕ್ಕೆ, ಈ ರೀತಿಯ ಪ್ರಕರಣಗಳಿಗಾಗಿ ಯಾರ ಬಳಿ ದೂರು ಸಲ್ಲಿಸಬೇಕು ? ಎಂದು ಕೇಳಿದಾಗ, ನ್ಯಾಯಾಲಯ ನಾವು ಸಲಹೆಗಾರರಲ್ಲ. ಒಂದು ವೇಳೆ ಈ ರೀತಿಯ ಪ್ರಕರಣಗಳು ಇತ್ತೀಚೆಗೆ ನಡೆದಿದ್ದರೆ ಮತ್ತು ಅಂತಹವರ ಮೇಲೆ ಮೊಕದ್ದಮೆ ದಾಖಲಾಗಿ ವಿಚಾರಣೆ ನಡೆದಿದ್ದರೆ ನಾವು ಇದರ ಬಗ್ಗೆ ಯೋಚಿಸಬಹುದು. ಎಂದು ಹೇಳಿದೆ.

ಸಂಪಾದಕೀಯ ನಿಲುವು

ಕೇಂದ್ರ ಸರಕಾರ ಹಿಂದೂಗಳ ಮತಾಂತರಕ್ಕೆ ಕಡಿವಾಣ ಹಾಕಲು ಮತಾಂತರ ವಿರೋಧಿ ಕಾನೂನು ರೂಪಿಸುವುದು ಅಗತ್ಯವಾಗಿದೆ !