ಭಾಜಪದ ಶಾಸಕ ಮತ್ತು ಮಾಜಿ ಕೇಂದ್ರ ಸಚಿವ ಬಸವನಗೌಡ ಪಾಟೀಲ ಯತ್ನಾಳ ಇವರಿಂದ ಪ್ರಧಾನಿ ಮೋದಿ ಇವರಿಗೆ ಪತ್ರ
ಬೆಂಗಳೂರು – ಭಾಜಪದ ಶಾಸಕ ಮತ್ತು ಮಾಜಿ ಕೇಂದ್ರ ಸಚಿವ ಬಸವನಗೌಡ ಪಾಟೀಲ ಯತ್ನಾಳ ಇವರು ಪ್ರಧಾನಮಂತ್ರಿ ಮೋದಿ ಇವರಿಗೆ ಪತ್ರ ಬರೆದು ವಕ್ಫ್ ಕಾನೂನು ರದ್ದು ಪಡಿಸಲು ಆಗ್ರಹಿಸಿದ್ದಾರೆ. ಯತ್ನಾಳ ಇವರು ಪತ್ರದಲ್ಲಿ, ವಕ್ಫ್ ಬೋರ್ಡ್ ದೇಶಾದ್ಯಂತ ಮುಖ್ಯ ಭೂಮಿಯನ್ನು ವಶಪಡಿಸಿಕೊಳ್ಳುವುದಕ್ಕಾಗಿ ಅವರ ಅಧಿಕಾರವನ್ನು ಉಪಯೋಗಿಸುತ್ತಿದ್ದಾರೆ. ಈ ವಕ್ಫ್ ಕಾನೂನು ವಕ್ಫ್ ಆಸ್ತಿ ವ್ಯವಸ್ಥಾಪನೆ ಮಾಡುವುದಕ್ಕಾಗಿ ರೂಪಿಸಲಾಗಿತ್ತು ಮತ್ತು ಈ ರೀತಿಯ ಕಾನೂನು ಇತರ ಧರ್ಮದವರಿಗಾಗಿ ರೂಪಿಸಿಲ್ಲ. ೨೦೧೩ ರಲ್ಲಿ ಇದರಲ್ಲಿ ಸುಧಾರಣೆ ತಂದು ವಕ್ಫ್ ಬೋರ್ಡಿಗೆ ಹೆಚ್ಚಿನ ಅಧಿಕಾರ ನೀಡಲಾಯಿತು. ಈಗ ಈ ವಕ್ಫ್ ಬೋರ್ಡ್ ಬಳಿ 8 ಲಕ್ಷ 54 ಸಾವಿರದ ೫೦೯ ಆಸ್ತಿಪಾಸ್ತಿ ಇದೆ. ಅದರಲ್ಲಿ ಎಂಟು ಲಕ್ಷ ಎಕರೆ ಭೂಮಿಯಲ್ಲಿ ಪಸರಿಸಿದೆ. ವಿಶೇಷವೆಂದರೆ ಈ ರೀತಿಯ ವಕ್ಫ್ ಹೆಸರಿನ ಯಾವುದೇ ರೀತಿ ಟರ್ಕಿ, ಲಿಬಿಯಾ, ಈಜಿಪ್ಟ್, ಸುಡಾನ್, ಲೆಬೆನಾನ್, ಸಿರಿಯ, ಜಾಡನ್, ಟ್ಯುನೇಶಿಯಾ ಮತ್ತು ಇರಾಕ್ ಇಂತಹ ಇಸ್ಲಾಮಿ ದೇಶಗಳಲ್ಲಿ ಇಲ್ಲ. ಆದ್ದರಿಂದ ವಕ್ಫ್ ಬೋರ್ಡ್ ಗೆ ವಕ್ಫ್ ಕಾನೂನಿನ ಮೂಲಕ ನೀಡಿರುವ ಅಧಿಕಾರ ರದ್ದು ಪಡಿಸಬೇಕು ಎಂದು ಹೇಳಿದ್ದಾರೆ.
ವಕ್ಫ್ ಕಾಯಿದೆಯನ್ನು ರದ್ದುಗೊಳಿಸಿ: ಪ್ರಧಾನಿ ಮೋದಿಗೆ ಬಸನಗೌಡ ಪಾಟೀಲ್ ಯತ್ನಾಳ್ ಪತ್ರ
Yatnal writes to PM, urges him to abolish Waqf Act#BasangoudaPatilYatnal #BJP #PMmodi #Letter #WaqfAct #ಬಸನಗೌಡಪಾಟೀಲ್ಯತ್ನಾಳ್ #ಬಿಜೆಪಿ #ಪ್ರಧಾನಿಮೋದಿ #ಪತ್ರ #ವಕ್ಫ್ಕಾಯಿದೆ @XpressBengaluru @BJP4Karnataka
Read…— kannadaprabha (@KannadaPrabha) September 5, 2023
ಸಂಪಾದಕೀಯ ನಿಲಿವುಭಾಜಪದ ಶಾಸಕರು ಈ ಸೂತ್ರಗಳ ಬಗ್ಗೆ ಸರಕಾರಕ್ಕೆ ಬೆಂಬತ್ತಿ ವಕ್ಫ್ ಕಾನೂನು ರದ್ದುಪಡಿಸುವುದಕ್ಕಾಗಿ ಪ್ರಯತ್ನ ಮಾಡಬೇಕೆಂದು ಹಿಂದೂಗಳ ಅಪೇಕ್ಷೆಯಾಗಿದೆ ! |