ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಇವರ ಹೇಳಿಕೆ !
ಬೆಂಗಳೂರು – ಒಮ್ಮೆ ನಾನು ಕೇರಳದ ಒಂದು ದೇವಸ್ಥಾನಕ್ಕೆ ಹೋಗಿದ್ದೇನು. ಅಲ್ಲಿ ನನ್ನನ್ನು ಶರ್ಟ್ ತೆಗೆದು ಪ್ರವೇಶ ಮಾಡಲು ಹೇಳಿದರು; ಆದರೆ ನಾನು ದೇವಸ್ಥಾನದಲ್ಲಿ ಪ್ರವೇಶಿಸಲು ನಿರಾಕರಿಸಿದೆ. ‘ನಾನು ಹೊರಗಿನಿಂದ ಪ್ರಾರ್ಥನೆ ಮಾಡುವೆ’, ಎಂದು ಅವರಿಗೆ ಹೇಳಿದೆ. ಅವರು ಸಾಲಿನಲ್ಲಿನ ಪ್ರತಿಯೊಬ್ಬರಿಗೆ ಶರ್ಟು ಬಿಚ್ಚಲು ಹೇಳಲಿಲ್ಲ. ಕೇವಲ ಕೆಲವು ಜನರಿಗೆ ಶರ್ಟು ಬಿಚ್ಚಲು ಹೇಳುತ್ತಿದ್ದರು. ಈ ಪದ್ಧತಿ ಅಮಾನವಿಯವಾಗಿದೆ. ದೇವರೆದರು ಎಲ್ಲರೂ ಸಮಾನರೆ, ಎಂದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದರು. ಸಮಾಜ ಸುಧಾರಕ ನಾರಾಯಣ ಗುರು ಇವರ ೧೬೯ ನೇ ಜಯಂತಿಯ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ದಕ್ಷಿಣ ಭಾರತದಲ್ಲಿನ ಅನೇಕ ದೇವಸ್ಥಾನಗಳಲ್ಲಿ ಪುರುಷರಿಗೆ ಶರ್ಟು ಬಿಚ್ಚಿಸಿ ಒಳಗೆ ಪ್ರವೇಶ ನೀಡುತ್ತಾರೆ. ಆ ಸಮಯದಲ್ಲಿ ಪುರುಷರ ಹೆಗಲ ಮೇಲೆ ಶಲ್ಯೆ ಹೋದಿಸುತ್ತಾರೆ. ಅನೇಕ ವರ್ಷಗಳಿಂದ ಈ ಪದ್ಧತಿ ಚಾಲ್ತಿಯಲ್ಲಿದೆ ಎಂದು ಹೇಳಿದರು.
ಸಂಪಾದಕೀಯ ನಿಲಿವುಪ್ರತಿಯೊಂದು ದೇವಸ್ಥಾನದಲ್ಲಿ ಕೆಲವು ನಿಯಮಗಳ ಪಾಲನೆ ಮಾಡುವುದು ಅವಶ್ಯಕವಾಗಿದೆ. ಸಮಾಜದಲ್ಲಿನ ಅನೇಕ ಕಾರ್ಯಾಲಯಗಳಲ್ಲಿ ಬೇರೆ ಬೇರೆ ನಿಯಮ ಇರುತ್ತದೆ ಅದಕ್ಕೆ ಯಾರು ವಿರೋಧಿಸುವುದಿಲ್ಲ. ಆಗ ಅಲ್ಲಿ ಸಮಾನತೆ ಇರುವುದಿಲ್ಲವೇ ? |