ಸರ್ವೋಚ್ಚ ನ್ಯಾಯಾಲಯ ಮಣಿಪುರ ಸರಕಾರದಿಂದ ಉತ್ತರ ಕೇಳಿದೆ

‘ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ’ ವಿರುದ್ಧ ದಾಖಲಿಸಿರುವ ದೂರಿನ ಪ್ರಕರಣ

ಸರ್ವೋಚ್ಚ ನ್ಯಾಯಾಲಯ

ನವ ದೆಹಲಿ – ಮಣಿಪುರ ಸರಕಾರ ದೇಶದ ಸಂಪಾದಕರ ಸಂಘಟನೆಯಾಗಿರುವ `ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ’ ವಿರುದ್ಧ ದೂರು ದಾಖಲಿಸಿದೆ. ಇದರ ವಿರುದ್ಧ ಈ ಸಂಘಟನೆಯು ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿರುವ ಅರ್ಜಿಯ ಕುರಿತು ವಿಚಾರಣೆ ನಡೆಸಿದ ನ್ಯಾಯಾಲಯವು ಈ ಸಂದರ್ಭದಲ್ಲಿ ಮಣಿಪುರ ಸರಕಾರದಿಂದ ಉತ್ತರವನ್ನು ಕೇಳಿದೆ. ಈ ಸಂಘಟನೆಯು ಮಣಿಪುರ ಹಿಂಸಾಚಾರದ ಕುರಿತು ಒಂದು ವರದಿಯನ್ನು ಸಲ್ಲಿಸಿತ್ತು. ಅದಕ್ಕೆ ರಾಜ್ಯದ ಮುಖ್ಯಮಂತ್ರಿ ಬಿರೇನ್ ಸಿಂಹ್ ಅವರು, ‘ಎಡಿಟರ್ಸ ಗಿಲ್ಡ’ನ ಈ ವರದಿ ಸುಳ್ಳು ಮತ್ತು ನಕಲಿಯಾಗಿದ್ದು, ಗಿಲ್ಡ ಸದಸ್ಯರು ರಾಜ್ಯದಲ್ಲಿ ಹಿಂಸಾಚಾರವನ್ನು ಉತ್ತೇಜಿಸಲು ಪ್ರಯತ್ನಿಸುತ್ತಿದ್ದಾರೆ’ ಎಂದು ಆರೋಪಿಸಿತ್ತು. ಈ ಸಂಘಟನೆಯ ವಿರುದ್ಧವೂ ಪ್ರಕರಣ ದಾಖಲಾಗಿತ್ತು.

`ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ’ ಸಂಘಟನೆಯು ಮಣಿಪುರದಲ್ಲಿ ನಡೆದ ಹಿಂಸಾಚಾರದ ವಿಷಯದ ಕುರಿತು ಮಾಡಿರುವ ನಮ್ಮ ವರದಿಗೆ ಮುಖ್ಯಮಂತ್ರಿ ಸಿಂಹ ಇವರು ವ್ಯಕ್ತಪಡಿಸಿರುವ ಪ್ರತಿಕ್ರಿಯೆ ಬೆದರಿಕೆಯಂತಿದೆ. ನಮ್ಮ ಸಂಘಟನೆಯನ್ನು ರಾಜ್ಯ ಮತ್ತು ರಾಷ್ಟ್ರ ವಿರೋಧಿ ಎಂದು ಕರೆಯುವುದು ಬೇಸರದ ಸಂಗತಿ ಎಂದು ಹೇಳಿದೆ.