ಫ್ರಾನ್ಸ್ ನ ಸರಕಾರಿ ಶಾಲೆಯಲ್ಲಿ ‘ಅಬಾಯಾ’ ಧರಿಸಿ ಬಂದ ಮುಸ್ಲಿಂ ವಿದ್ಯಾರ್ಥಿನಿಯರನ್ನು ವಾಪಸ್ ಕಳುಹಿಸಲಾಯಿತು!

(ಅಬಾಯಾ ಎಂದರೆ ಮುಖವನ್ನು ಬಿಟ್ಟು ಇಡೀ ದೇಹವನ್ನು ಮುಚ್ಚುವ ಬಟ್ಟೆ)

ಪ್ಯಾರಿಸ್ (ಫ್ರಾನ್ಸ್) – ಫ್ರಾನ್ಸ್‌ನ ಸರಕಾರಿ ಶಾಲೆಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ‘ಅಬಾಯಾ’ ಧರಿಸುವುದನ್ನು ನಿಷೇಧಿಸಿವೆ. ಇಂತಹ ಸಮಯದಲ್ಲಿ, ಶಾಲೆಯ ಮೊದಲ ದಿನ ಅಬಾಯಾ ಧರಿಸಿ ಶಾಲೆಗೆ ಬಂದ ಮುಸ್ಲಿಂ ವಿದ್ಯಾರ್ಥಿನಿಯರನ್ನು ಅದನ್ನು ಬದಲಾಯಿಸಲು ಹೇಳಲಾಯಿತು; ಆದರೆ ಇದಕ್ಕೆ ವಿದ್ಯಾರ್ಥಿನಿ ನಿರಾಕರಿಸಿದ್ದಾಳೆ. ಸುಮಾರು 300ಕ್ಕೂ ಹೆಚ್ಚು ಮುಸ್ಲಿಂ ವಿದ್ಯಾರ್ಥಿಗಳು ಅಬಾಯಾ ಧರಿಸಿ ಶಾಲೆಗೆ ಬಂದಿದ್ದರು. ಅವರಲ್ಲಿ 67 ಮಂದಿ ಅಬಾಯಾವನ್ನು ತೆಗೆದುಹಾಕಲು ನಿರಾಕರಿಸಿದರು. ಅವರನ್ನು ಮನೆಗೆ ಕಳುಹಿಸಲಾಯಿತು. ಈ ಬಗ್ಗೆ ಶಿಕ್ಷಣ ಸಚಿವ ಗೇಬ್ರಿಯಲ್ ಇವರು ಖಚಿತಪಡಿಸಿದ್ದಾರೆ.