ಭಾರತದಿಂದ ನೇಪಾಳದ ವಿದೇಶಾಂಗ ಸಚಿವಾಲಯವು ಕ್ರಮಕೈಗೊಳ್ಳುವಂತೆ ಆಗ್ರಹ !

ನೇಪಾಳದಲ್ಲಿನ ಚೀನಾದ ರಾಯಭಾರಿಯ ಭಾರತ ವಿರೋಧಿ ಹೇಳಿಕೆ ಪ್ರಕರಣ

ನವ ದೆಹಲಿ – ನೇಪಾಳದಲ್ಲಿನ ಚೀನಾದ ರಾಯಭಾರಿಯು ಭಾರತದ ವಿರುದ್ಧ ಹೇಳಿಕೆ ನೀಡಿದ ನಂತರ ಈಗ ಭಾರತದ ಕಟ್ಮಂಡು ಇಲ್ಲಿಯ ರಾಯಭಾರಿ ಕಚೇರಿಯಿಂದ ನೇಪಾಳದ ವಿದೇಶಾಂಗ ಸಚಿವಾಲಯದ ಬಳಿ ಈ ವಿಷಯದ ಬಗ್ಗೆ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳಲು ಒತ್ತಾಯಿಸಿದೆ. ನೇಪಾಳದ ವಿದೇಶಾಂಗ ಸಚಿವ ಎನ್.ಪಿ. ಸೌದ ಇವರು, ನಾವು ಚೀನಾದ ರಾಯಭಾರಿಗೆ ನೋಟಿಸ್ ನೀಡಿದ್ದೇವೆ, ಎಂದು ಹೇಳಿದರು.

೧. ನೇಪಾಳದ ಅನೇಕ ರಾಜಕೀಯ ಮುತ್ಸದ್ದಿಗಳು ಕೂಡ ಚೀನಾದ ರಾಯಭಾರಿಯ ಹೇಳಿಕೆಯನ್ನು ವಿರೋಧಿಸಿದ್ದಾರೆ. ‘ಚೀನಾದ ರಾಯಭಾರಿ ನೇಪಾಳದಲ್ಲಿ ಭಾರತದ ವಿರುದ್ಧ ಅನಾವಶ್ಯಕ ವಿವಾದ ನಿರ್ಮಿಸಿದ್ದಾರೆ’, ಎಂದು ಅವರು ಹೇಳಿದರು.

೨. ಮಾಜಿ ಪ್ರಧಾನಿ ಶೇರ ಬಹದ್ದೂರ್ ದೇವುಬಾ ಸರಕಾರದಲ್ಲಿ ಪ್ರಧಾನ ಮಂತ್ರಿಗಳ ಸಲಹೆಗಾರರಾಗಿದ್ದ ಅರುಣ ಸುಬೇದಿ ಇವರು, ನೇಪಾಳದ ಪ್ರಧಾನ ಮಂತ್ರಿ ಪ್ರಚಂಡ ಇವರ ಸರಕಾರ ಚೀನಾಗೆ ಒಂದು ಪತ್ರ ಬರೆದು ಅವರ ರಾಯಭಾರಿಯ ಹೇಳಿಕೆಯನ್ನು ವಿರೋಧಿಸಬೇಕು ಎಂದು ಹೇಳಿದ್ದಾರೆ. ಪ್ರಶ್ನೆ ಏನೆಂದರೆ, ಭಾರತೀಯ ರಾಯಭಾರಿ ಏನಾದರೂ ಈ ರೀತಿಯ ಹೇಳಿಕೆ ನೀಡಿದ್ದರೆ ಆಗ ನೇಪಾಳದ ಉತ್ತರ ಏನು ? ಇರಬಹುದು ಪ್ರಚಂಡ ಇವರ ಸರಕಾರ ಚೀನಾದ ರಾಯಭಾರಿಯ ಹೇಳಿಕೆಯ ಬಗ್ಗೆ ಮೌನವಾಗಿದೆ.

ಪ್ರಧಾನಮಂತ್ರಿ ಕಾರ್ಯಾಲಯದಿಂದ ಚೀನಾದ ರಾಯಭಾರಿಯ ಹೇಳಿಕೆಯ ಬಗ್ಗೆ ವಿರೋಧ

ನೇಪಾಳದ ಪ್ರಧಾನಮಂತ್ರಿ ಕಾರ್ಯಾಲಯದಿಂದ ಚೀನಾದ ರಾಯಭಾರಿಯ ಹೇಳಿಕೆ ಬಗ್ಗೆ ಅರಾಜಕೀಯ ಎಂದು ಘೋಷಿಸಿದೆ. ಅವರು, ಚೀನಾದ ರಾಯಭಾರಿ ನೇಪಾಳದ ಆಂತರಿಕ ವಿಷಯಗಳು ಬಗ್ಗೆ ಈ ರೀತಿಯ ಹೇಳಿಕೆ ನೀಡಲು ಸಾಧ್ಯವಿಲ್ಲ. ಹಾಗೂ ನೆರೆಯ ದೇಶದ ಬಗ್ಗೆ ನಮ್ಮ ಸಂಬಂಧಗಳ ಮೇಲೆ ಮತ್ತು ಯಾರ ಮೇಲೆ ನಾವು ಹೆಚ್ಚಾಗಿ ಅವಲಂಬಿತವಾಗಿದ್ದೇವೆ ಅವರ ಬಗ್ಗೆ ಟಿಪ್ಪಣಿ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.

ಸಂಪಾದಕೀಯ ನಿಲಿವು

ನೇಪಾಳದ ಬಳಿ ಚೀನಾ ರಾಯಭಾರಿಯ ಮೇಲೆ ಕ್ರಮ ಕೈಗೊಳ್ಳುವ ಶಕ್ತಿ ಇಲ್ಲ. ಆದ್ದರಿಂದ ಹೀಗೆ ನಡೆಯಲು ಸಾಧ್ಯವಿಲ್ಲ. ಭಾರತವೇ ಚೀನಾಗೆ ಅರ್ಥವಾಗುವ ಭಾಷೆಯಲ್ಲಿ ಉತ್ತರ ನೀಡಬೇಕು !