ಕ್ಷೌರಿಕ ಜಾವೇದ್ ಹಬಿಬ ಕೇಶ ವಿನ್ಯಾಸ ಮಾಡಿಸಿ ಬಂದ ಮಹಿಳೆಯ ತಲೆಯ ಮೇಲೆ ಉಗಳಿದ !

ಪ್ರಸಿದ್ಧ ಕೇಶ ವಿನ್ಯಾಸಕ (ಹೇರ್ ಸ್ಟೈಲಿಸ್ಟ್) ಜಾವೇದ್ ಹಬೀಬ್ ಇವನ ಕಾರ್ಯಾಗಾಋವನ್ನು ಆಯೋಜಿಸಲಾಗಿತ್ತು. ಆ ಸಮಯದಲ್ಲಿ ಓರ್ವ ಮಹಿಳೆಯ ತಲೆಯ ಮೇಲೆ ಉಗುಳಿದ್ದರಿಂದ ವಿವಾದ ನಿರ್ಮಾಣವಾಯಿತು.

ಪ್ರಧಾನಿ ಮೋದಿಯವರ ಭದ್ರತಾ ಲೋಪದ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ದಾಖಲು !

ಪಂಜಾಬಿನ ಫಿರೋಜಪುರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತಾ ಲೋಪದ ಅಕ್ಷಮ್ಯ ತಪ್ಪಿನ ಕುರಿತು ಕೇಂದ್ರೀಯ ಗೃಹ ಸಚಿವಾಲಯವು ಪಂಜಾಬ ಸರಕಾರದಿಂದ ವರದಿ ಕೇಳಿದೆ ಹಾಗೂ ಇನ್ನೊಂದೆಡೆ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿದೆ.

ಕೊರೋನಾ ಸಾಂಕ್ರಾಮಿಕ ರೋಗಕ್ಕೆ ಮಹಾರಾಷ್ಟ್ರದಿಂದ ಶೇ. ೦.೩೨ ರಷ್ಟು ಕೇಂದ್ರದ ನಿಧಿಯಷ್ಟೇ ಬಳಕೆ

ಕೊರೊನಾದ ಮೂರನೆಯ ಅಲೆ ತಡೆಯಲು ಕೇಂದ್ರ ಸರಕಾರವು ಮಹಾರಾಷ್ಟ್ರ ಸರಕಾರಕ್ಕೆ ನೀಡಿರುವ ನಿಧಿಯನ್ನು ಖರ್ಚು ಮಾಡಲಿಲ್ಲ, ಎಂದು ‘ಪಿಐಬಿ’ವು (ಪ್ರೆಸ್ ಇನ್ಫರ್ಮೇಶನ್ ಬ್ಯೂರೋ – ಮಾಹಿತಿ ಮತ್ತು ಪ್ರಸಾರಣ ಸಚಿವಾಲಯದ ಅಧೀನದಲ್ಲಿ ಕೆಲಸ ಮಾಡುವ ಸಂಸ್ಥೆ) ಹೇಳಿದೆ.

ಒಡಿಶಾದ ಬಿಜು ಜನತಾ ದಳದ ಸರಕಾರದಿಂದ ಮದರ್ ತೆರೇಸಾದ ‘ಮಿಶನರಿಸ್ ಆಫ್ ಚಾರಿಟಿ’ ಸಂಸ್ಥೆಗೆ ೭೮ ಲಕ್ಷ ೭೬ ಸಾವಿರ ರೂಪಾಯಿ ಸಹಾಯ

ಒಡಿಶಾದ ಮುಖ್ಯಮಂತ್ರಿ ಮತ್ತು ಬಿಜು ಜನತಾ ದಳದ ಅಧ್ಯಕ್ಷ ನವೀನ್ ಪಟ್ನಾಯಕ್ ಇವರು ಮದರ್ ತೆರೇಸಾ ಅವರು ಸ್ಥಾಪಿಸಿದ್ದ ‘ಮಿಶನರಿಸ್ ಆಫ್ ಚಾರಿಟಿ’ಯಿಂದ ನಡೆಸಲಾಗುವ ೧೩ ಸಂಸ್ಥೆಗಳಿಗೆ ಮುಖ್ಯಮಂತ್ರಿ ಸಹಾಯ ನಿಧಿಯಿಂದ ಆರ್ಥಿಕ ಸಹಾಯ ನೀಡುವಾಗ ೭೮ ಲಕ್ಷ ೭೬ ಸಾವಿರ ರೂಪಾಯಿ ನೀಡಿದೆ.

ನ್ಯಾಯವಾದಿಗಳು ೭೫ ನೇ ವಯಸ್ಸಿನಲ್ಲಿಯೂ ಖಟ್ಲೆಗಳನ್ನು ನಡೆಸಬಹುದು, ಆದರೆ ನ್ಯಾಯಾಧೀಶರಿಗೆ ಮಾತ್ರ ೬೫ ನೇ ವರ್ಷಕ್ಕೆ ನಿವೃತ್ತಿ ಏಕೆ ? – ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ

ನಮ್ಮ ನ್ಯಾಯಾಧೀಶರನ್ನು ನೋಡಿ ನಾನು ಖಂಡಿತವಾಗಿಯೂ ’ಅವರು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರೆಂದು ತಮ್ಮ ಕರ್ತವ್ಯವನ್ನು ನ್ಯಾಯಯುತವಾಗಿ, ನಿಷ್ಪಕ್ಷಪಾತದಿಂದ ಮತ್ತು ಸಕ್ಷಮವಾಗಿ ನಿರ್ವಹಿಸುವರು’ ಎಂದು ಹೇಳಬಹುದು.

ಕರ್ನಾಟಕದ ಒಂದು ಸರಕಾರಿ ಮಹಾವಿದ್ಯಾಲಯದಲ್ಲಿ ಹಿಜಾಬ್ (ತಲೆಯ ಮೇಲೆ ಹಾಕಿಕೊಳ್ಳುವ ಬಟ್ಟೆ) ಹಾಕಿಕೊಳ್ಳುವ ಅನುಮತಿ ಇರುವುದರಿಂದ ಹಿಂದೂ ವಿದ್ಯಾರ್ಥಿಗಳು ಕೊರಳಿನಲ್ಲಿ ಕೇಸರಿ ವಸ್ತ್ರವನ್ನು ಹಾಕಿಕೊಳ್ಳುವರು

‘ಇಂಡಿಯಾ ಟುಡೆ’ ನಿಯತಕಾಲಿಕೆಯಲ್ಲಿ ಈ ವಿಷಯದ ವಾರ್ತೆಯನ್ನು ನೀಡಲಾಗಿದೆ. ಕೆಲವು ವಿದ್ಯಾರ್ಥಿಗಳು ಈ ಮೊದಲು ವಿದ್ಯಾರ್ಥಿನಿಯರನ್ನು ಹಿಜಾಬ್ ಹಾಕಿಕೊಂಡು ವರ್ಗದಲ್ಲಿ ಕುಳಿತುಕೊಳ್ಳಲು ನಿರಾಕರಿಸಲಾಗಿತ್ತು.

ಕಳೆದ ೨ ವರ್ಷಗಳಿಂದ ಅಕ್ರಮವಾಗಿ ಭಾರತದಲ್ಲಿರುವ ಶ್ರೀಲಂಕಾದ ಮತಾಂಧ ನಾಗರಿಕನ ಬಂಧನ

ಇಲ್ಲಿಯ ಲೋಧಿ ಸರಾಯ ಪ್ರದೇಶದಲ್ಲಿ ಕಳೆದ ಎರಡು ವರ್ಷಗಳಿಂದ ಅಕ್ರಮವಾಗಿ ವಾಸಿಸುತ್ತಿದ್ದ ಅಬ್ದುಲ್ ಖಾದಿರ್ ಮಹಮ್ಮದ್ ನಜೀರ್ ಎಂಬ ಶ್ರೀಲಂಕಾದ ನಾಗರಿಕನನ್ನು ಪೊಲೀಸರು ಬಂಧಿಸಿದ್ದಾರೆ.

ಭ್ರಷ್ಟ ನೌಕರರಿಗೆ ಗಲ್ಲು ಶಿಕ್ಷೆ ನೀಡಬೇಕು ! – ಮದ್ರಾಸ್ ಉಚ್ಚ ನ್ಯಾಯಾಲಯ

ಭ್ರಷ್ಟಾಚಾರ ಆರೋಪವಿರುವ ಮದ್ರಾಸ್ ವಿಶ್ವವಿದ್ಯಾಲಯದ ನೌಕರರಿಬ್ಬರಿಗೆ ಬಡ್ತಿ ನೀಡಿದ್ದನ್ನು ವಿರೋಧಿಸಿ ಮದ್ರಾಸ್ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಲಾಗಿತ್ತು.

ಕರ್ನಾಟಕದಲ್ಲಿ ಇಸ್ಲಾಮಿಕ ಸ್ಟೇಟಿನೊಂದಿಗೆ ಸಂಬಂಧವಿರುವ ಓರ್ವ ಮಹಿಳಾ ಜಿಹಾದಿ ಭಯೋತ್ಪಾದಕಿಯ ಬಂಧನ !

ರಾಷ್ಟ್ರೀಯ ತನಿಖಾ ದಳವು ಕರ್ನಾಟಕದಿಂದ ದೀಪ್ತಿ ಮಾರಲಾ ಉರ್ಫ್ ಮರಿಯಮ ಎಂಬ ಜಿಹಾದಿ ಭಯೋತ್ಪಾದಕಿಯನ್ನು ಭಯೋತ್ಪಾದಕ ಸಂಘಟನೆಯಾದ ಇಸ್ಲಾಮಿಕ್ ಸ್ಟೇಟನೊಂದಿಗೆ ಸಂಬಂಧ ಇರುವುದರಿಂದ ಬಂಧಿಸಿದ್ದಾರೆ.

ಭಗವಾನ ಶ್ರೀಕೃಷ್ಣ ಪ್ರತಿದಿನ ನನ್ನ ಕನಸ್ಸಿನಲ್ಲಿ ಬಂದು ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷ ರಾಮರಾಜ್ಯ ಸ್ಥಾಪನೆ ಮಾಡುವುದು ! (ಅಂತೆ)

ಇಂತಹ ಹಿಂದೂದ್ರೋಹಿ ರಾಜಕಾರಣಿಗಳ ಕನಸ್ಸಿನಲ್ಲಿ ಎಂದಾದರೂ ಭಗವಾನ್ ಶ್ರೀಕೃಷ್ಣನು ಬರಲು ಸಾಧ್ಯವೇ ? ತದ್ವಿರುದ್ಧ ಇಂತಹವರ ಕನಸ್ಸಿನಲ್ಲಿ ಕಂಸ ಅಥವಾ ರಾವಣ ಬರುತ್ತಿದ್ದಾರೆ ಎಂದು ಯಾರಿಗಾದರೂ ಅನಿಸಿದರೆ ಅದರಲ್ಲಿ ಆಶ್ಚರ್ಯವೇನೂ ಇಲ್ಲ!