ಹುದ್ದೆಯನ್ನು ದುರುಪಯೋಗಪಡಿಸಿಕೊಂಡು ಕಂಪನಿ ಮತ್ತು ದಳ್ಳಾಳಿಗಳಿಗೆ ೫೦ ಸಾವಿರ ಕೋಟಿ ರೂಪಾಯಿಗಳ ಲಾಭ ಮಾಡಿಕೊಟ್ಟರು !
ರಾಷ್ಟ್ರೀಯ ಶೇರು ಮಾರುಕಟ್ಟೆಯಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಹಗರಣ ನಡೆಯುತ್ತಿರುವಾಗ ಸಂಬಂಧಿಸಿದ ವ್ಯವಸ್ಥೆ ಮಲಗಿಕೊಂಡಿತ್ತೇ ?
ನವ ದೆಹಲಿ – ರಾಷ್ಟ್ರೀಯ ಶೇರು ಮಾರುಕಟ್ಟೆ(‘ಎನ್.ಎಸ್.ಇ.’ನ) ಮಾಜಿ ವ್ಯವಸ್ಥಾಪಕ ನಿರ್ದೇಶಕಿ ಮತ್ತು ಮುಖ್ಯ ಕಾರ್ಯಕಾರಿ ಅಧಿಕಾರಿ ಚಿತ್ರಾ ರಾಮಕೃಷ್ಣ ಇವರನ್ನು ಕೇಂದ್ರ ತನಿಖಾದಳ(ಸಿಬಿಐ) ಬಂದಿಸಿತು. ಬಂಧಿಸುವ ಮೊದಲು ಅವರನ್ನು ನಿರಂತರವಾಗಿ ೩ ದಿನಗಳ ವರೆಗೆ ವಿಚಾರಣೆ ನಡೆಸಲಾಯಿತು.
ಒಂದು ಕಾಲದಲ್ಲಿ ಷೇರುಪೇಟೆಯನ್ನೇ ಆಳಿದ್ದ ‘ಚಿತ್ರಾ ರಾಮಕೃಷ್ಣ’ ಬಂಧನ!
#sharemarket https://t.co/AKwad4Pz8e— vijaykarnataka (@Vijaykarnataka) March 6, 2022
ಈ ಹಿಂದೆಯೂ ಚಿತ್ರಾ ರಾಮಕೃಷ್ಣ ಜಾಮೀನಿಗಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು; ಆದರೆ ಅದನ್ನು ತಿರಸ್ಕರಿಸಲಾಯಿತು. ರಾಮಕೃಷ್ಣ ಇವರು ತಮ್ಮ ಹುದ್ದೆಯನ್ನು ದುರುಪಯೋಗಪಡಿಸಿಕೊಂಡು ಶೇರುಗಳ ಗೌಪ್ಯ ಮಾಹಿತಿಯನ್ನು ಕೆಲವು ಕಂಪನಿಗಳಿಗೆ ಮತ್ತು ದಳ್ಳಾಳಿಗಳಿಗೆ ಮೊದಲೇ ನೀಡುತ್ತಿದ್ದರು. ಇದರಿಂದ ಆ ಕಂಪನಿ ಅಥವಾ ದಳ್ಳಾಳರಿಗೆ ಕೋಟಿಗಟ್ಟಲೆ ರೂಪಾಯಿಗಳ ಲಾಭವಾಗುತ್ತಿತ್ತು. ೫ ವರ್ಷಗಳಲ್ಲಿ ಸಂಬಂಧಿಸಿದವರಿಗೆ ೫೦ ಸಾವಿರ ಕೋಟಿ ರೂಪಾಯಿಗಳ ಲಾಭವನ್ನು ಮಾಡಿಕೊಟ್ಟಿದ್ದಾರೆಂದು ಹೇಳಲಾಗುತ್ತಿದೆ.