ಮಥುರಾ(ಉತ್ತರಪ್ರದೇಶ)ದಲ್ಲಿ ಗೋಹತ್ಯೆಯನ್ನು ತಡೆಯಲು ಹೋದಂತಹ ಗೋರಕ್ಷಕರ ಮೇಲೆ ಮತಾಂಧರಿಂದ ಆಕ್ರಮಣ

ಘಟನೆಯ ಸ್ಥಳದಲ್ಲಿ ಪೊಲೀಸರು ತಡವಾಗಿ ತಲುಪಿರುವ ಬಗ್ಗೆ ಗೋರಕ್ಷಕರ ಆರೋಪ

ಉತ್ತರಪ್ರದೇಶದಲ್ಲಿ ಭಾಜಪದ ಸರಕಾರವಿರುವಾಗ ಮತ್ತು ಗೋಹತ್ಯಾ ನಿಷೇಧ ಕಾನೂನು ಇರುವಾಗಲೂ ಗೋಹತ್ಯೆಗಳು ನಡೆಯುತ್ತಿವೆ ಮತ್ತು ಅದನ್ನು ತಡೆಯಲು ಪೊಲೀಸರು ಸೋಲುತ್ತಿದ್ದಾರೆ, ಇದು ಹಿಂದೂಗಳಿಗೆ ಅಪೇಕ್ಷಿತವಿಲ್ಲ. ಸರಕಾರವು ಇಂತಹ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿ ಕಠೋರ ಉಪಾಯಯೋಜನೆಯನ್ನು ಮಾಡಬೇಕು !

ಮಥುರಾ (ಉತ್ತರಪ್ರದೇಶ) – ಗೋರಕ್ಷಕರು ಇಲ್ಲಿನ ಗೋವಿಂದನಗರದಲ್ಲಿನ ಕಸಾಯಿಪಾಡಾದ ಒಂದು ಮನೆಯಲ್ಲಿ ಗೋವಂಶದ ಹತ್ಯೆ ನಡೆಸಲಾಗುತ್ತಿರುವ ಮಾಹಿತಿ ದೊರೆತಾಗ ಅಲ್ಲಿ ತಲುಪಿದರು. ಆಗ ಮತಾಂಧ ಕಟುಕ ಮತ್ತು ಗೋರಕ್ಷಕರ ನಡುವೆ ವಾದ ನಿರ್ಮಾಣವಾಗಿ ಕಟುಕ ಹಾಗೂ ಅಲ್ಲಿನ ಇತರ ಮತಾಂಧರು ಗೋರಕ್ಷಕರ ಮೇಲೆ ಕಲ್ಲುತೂರಾಟ ನಡೆಸಿದರು. ಇದರಲ್ಲಿ ಅನೇಕ ಗೋರಕ್ಷಕರು ಗಾಯಗೊಂಡರೆ, ಮತಾಂಧರು ೪ ಜನರನ್ನು ಹಿಡಿದಿಟ್ಟರು. ನಂತರ ಪೊಲೀಸರು ಇವರನ್ನು ಬಿಡಿಸಿದರು. ದೇವರಾಜ ಪಂಡಿತ ಎಂಬ ಗೋರಕ್ಷಕನು ಫೇಸಬುಕ್‌ ಮೂಲಕ ಈ ಘಟನೆಯ ನೇರ ಪ್ರಸಾರ ಮಾಡಿದ್ದನು. ಈ ಘಟನೆಯು ಮಾರ್ಚ ೬ರ ಬೆಳಿಗ್ಗೆ ನಡೆದಿತ್ತು. ಈ ಪ್ರಕರಣದಲ್ಲಿ ಪೊಲೀಸರಲ್ಲಿ ದೂರನ್ನು ನೋಂದಾಯಿಸಲಾಗಿದೆ. ಇದರಲ್ಲಿನ ಪ್ರಮುಖ ಆರೋಪಿಯ ಹೆಸರು ರೋಹಿತ ಉಪಾಖ್ಯ ಬಾಬುಲಾಲ ಎಂದು ಇದ್ದು ಇವನು ಹಿಂದೂ ಆಗಿರದೇ ಮುಸಲ್ಮಾನನಾಗಿದ್ದಾನೆ.

ಘಟನಾಸ್ಥಳದಲ್ಲಿ ಪೊಲೀಸರು ತಡವಾಗಿ ತಲುಪುವುದರಿಂದ ಗೋಹತ್ಯೆ ನಡೆಯುತ್ತದೆ ! – ಗೋರಕ್ಷಕರ ಆರೋಪ

ಇದು ಕಳೆದ ತಿಂಗಳಿನಲ್ಲಿ ಇಲ್ಲಿ ಗೋವಂಶದ ಹತ್ಯೆಯಾಗುವ ಮೂರನೇ ಘಟನೆಯಾಗಿದೆ, ಎಂದು ಗೋರಕ್ಷಕರಾದ ರವಿಕಾಂತ ಶರ್ಮಾರವರು ಹೇಳಿದ್ದಾರೆ. ಶರ್ಮಾರವರು ಆರೋಪಿಸುತ್ತ ಪೊಲೀಸರಿಗೆ ಗೋಹತ್ಯೆಯ ಬಗ್ಗೆ ಮಾಹಿತಿ ನೀಡಿದಾಗ ಅವರು ೪೫ ನಿಮಿಷಗಳಲ್ಲಿ ಘಟನಾಸ್ಥಳಕ್ಕೆ ತಲುಪುತ್ತಾರೆ. ಪೊಲೀಸರು ೧೦ ನಿಮಿಷಗಳಲ್ಲಿ ತಲುಪುವ ಬಗ್ಗೆ ಆಶ್ವಾಸನೆಯನ್ನು ನೀಡಿರುತ್ತಾರೆ. ಪೊಲೀಸರು ಬರುವ ವರೆಗೆ ಗೋಹತ್ಯೆ ನಡೆದಿರುತ್ತದೆ’ ಎಂದು ಹೇಳಿದರು.