ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಉಕ್ರೇನ್ ರಾಷ್ಟ್ರಾಧ್ಯಕ್ಷ ಝೆಲೆಂಸ್ಕಿಯವರೊಂದಿಗೆ ೩೫ ನಿಮಿಷಗಳ ವರೆಗೆ ಮಾತುಕತೆ ನಡೆಸಿದರು

ನವದೆಹಲಿ – ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಉಕ್ರೇನ್ ರಾಷ್ಟ್ರಾಧ್ಯಕ್ಷ ವ್ಲೊದಿಮಿರ ಝೆಲೆಂಸ್ಕಿಯವರೊಂದಿಗೆ ದೂರವಾಣಿ ಮುಖಾಂತರ ೩೫ ನಿಮಿಷಗಳ ವರೆಗೆ ಚರ್ಚಿಸಿದರು. ಇಬ್ಬರೂ ಮುಖಂಡರು ಉಕ್ರೇನನಲ್ಲಿ ಬದಲಾಗುತ್ತಿರುವ ಪರಿಸ್ಥಿತಿಯ ಕುರಿತು ಚರ್ಚಿಸಿದರು. ಈ ಸಂದರ್ಭದಲ್ಲಿ ಪ್ರಧಾನಮಂತ್ರಿ ಮೋದಿಯವರು ಉಕ್ರೇನನಿಂದ ಭಾರತೀಯ ನಾಗರಿಕರನ್ನು ಸ್ಥಳಾಂತರಿಸಲು ಉಕ್ರೇನ ಸರಕಾರ ನೀಡಿರುವ ಸಹಾಯಕ್ಕಾಗಿ ಝೆಲೆಂಸ್ಕಿಯವರಿಗೆ ಧನ್ಯವಾದ ಸಲ್ಲಿಸಿದರು. ಇದರೊಂದಿಗೆ ಪ್ರಧಾನಮಂತ್ರಿ ಮೋದಿಯವರು ಉಕ್ರೇನನ ಸುಮಿ ನಗರದಿಂದ ಭಾರತೀಯ ನಾಗರಿಕರನ್ನು ಸ್ಥಳಾಂತರಿಸಲು ಉಕ್ರೇನ್ ಸರಕಾರದ ಸಹಾಯವನ್ನು ಕೋರಿದ್ದಾರೆ.

ಭಾರತದಿಂದ ನೀಡಲಾಗುತ್ತಿರುವ ಸಹಾಯಕ್ಕಾಗಿ ಭಾರತಕ್ಕೆ ಕೃತಜ್ಞ – ಝೆಲೆಂಸ್ಕಿ

ಉಕ್ರೇನ ರಾಷ್ಟ್ರಾಧ್ಯಕ್ಷ ಝೆಲೆಂಸ್ಕಿಯವರು ಟ್ವೀಟ ಮಾಡಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಚರ್ಚೆ ಮಾಡಿದ್ದಕ್ಕಾಗಿ ಧನ್ಯವಾದಗಳನ್ನು ವ್ಯಕ್ತಪಡಿಸಿದ್ದಾರೆ. ಝೆಲೆಂಸ್ಕಿಯವರು, ನಾನು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ರಷ್ಯಾದ ಆಕ್ರಮಣಕಾರಿ ನಡೆಗೆ ಉಕ್ರೇನ ನೀಡುತ್ತಿರುವ ಪ್ರತ್ಯುತ್ತರ ಕುರಿತು ಮಾಹಿತಿಯನ್ನು ನೀಡಿದ್ದೇನೆ. ಈ ಸಂದರ್ಭದಲ್ಲಿ ಮೋದಿಯವರು ಯುದ್ಧದ ಸಮಯದಲ್ಲಿ ಭಾರತೀಯ ನಾಗರಿಕರಿಗೆ ಉಕ್ರೇನನಿಂದ ನೀಡಿರುವ ಸಹಾಯಕ್ಕಾಗಿ ಶ್ಲಾಘಿಸಿದರು. ಉಕ್ರೇನ ಜನರಿಗೆ ಭಾರತದಿಂದ ನೀಡಲಾಗುತ್ತಿರುವ ಸಹಾಯಕ್ಕಾಗಿ ಉಕ್ರೇನ ಭಾರತಕ್ಕೆ ಕೃತಜ್ಞವಾಗಿದೆ.

ಪ್ರಧಾನಮಂತ್ರಿ ಮೋದಿಯವರು ರಷ್ಯಾದ ರಾಷ್ಟ್ರಾಧ್ಯಕ್ಷ ಪುತಿನರೊಂದಿಗೆ ೫೦ ನಿಮಿಷಗಳ ವರೆಗೆ ಚರ್ಚಿಸಿದರು !

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಉಕ್ರೇನ ರಾಷ್ಟ್ರಾಧ್ಯಕ್ಷ ಝೆಲೆಂಸ್ಕಿಯವರೊಂದಗೆ ಚರ್ಚಿಸಿದ ಬಳಿಕ ರಷ್ಯಾದ ರಾಷ್ಟ್ರಾಧ್ಯಕ್ಷ ವ್ಲಾದಿಮಿರ ಪುತಿನ ಇವರೊಂದಿಗೆ ದೂರವಾಣಿ ಮೂಲಕ ೫೦ ನಿಮಿಷಗಳ ವರೆಗೆ ಚರ್ಚಿಸಿದರು. ಈ ಸಮಯದಲ್ಲಿ ಮೋದಿಯವರು ಪುತಿನ್ ಇವರಿಗೆ ಉಕ್ರೇನ್ ರಾಷ್ಟ್ರಾಧ್ಯಕ್ಷ ಝೆಲೆಂಸ್ಕಿಯವರೊಂದಿಗೆ ನೇರವಾಗಿ ಚರ್ಚೆ ನಡೆಸುವಂತೆ ಮನವಿ ಮಾಡಿದರು. ಮೋದಿಯವರು ಉಕ್ರೇನನ ಕೆಲವು ಪ್ರದೇಶಗಳಲ್ಲಿ ರಷ್ಯಾ ಘೋಷಿಸಿರುವ ಯುದ್ಧವಿರಾಮ ಮತ್ತು ಯುದ್ಧದಲ್ಲಿ ಸಿಲುಕಿರುವ ನಾಗರಿಕರ ಬಿಡುಗಡೆಗಾಗಿ ಸಿದ್ಧಪಡಿಸಿರುವ ‘ಮಾನವತಾವಾದಿ ಮಾರ್ಗ’ (ಹ್ಯುಮೇನಿಟೇರಿಯನ್ ಕಾರಿಡಾರ) ಬಗ್ಗೆ ಶ್ಲಾಘಿಸಿದರು. ಇದರೊಂದಿಗೆ ಉಭಯ ಮುಖಂಡರು ಉಕ್ರೇನ ಪರಿಸ್ಥಿತಿಯ ಕುರಿತು ಚರ್ಚಿಸಿದರು. ಪುತಿನ ಮೋದಿಯವರಿಗೆ ಉಕ್ರೇನ ಮತ್ತು ರಷ್ಯಾ ನಡುವೆ ನಡೆದ ಮಾತುಕತೆ ಸ್ಥಿತಿಗತಿಗಳ ಕುರಿತು ಮಾಹಿತಿಯನ್ನು ನೀಡಿದರು ಎಂದು ‘ಎ.ಎನ್.ಐ.’ ವಾರ್ತಾ ಸಂಸ್ಥೆ ತಿಳಿಸಿದೆ.