‘ದ ಕಾಶ್ಮೀರ ಫೈಲ್ಸ್’ ಈ ಚಲನಚಿತ್ರದ ಪ್ರಸಿದ್ಧಿಗಾಗಿ ‘ದ ಕಪಿಲ್ ಶರ್ಮಾ ಶೋ’ ಈ ಕಾರ್ಯಕ್ರಮದಲ್ಲಿ ಕಪಿಲ್ ಶರ್ಮ ಇವರ ನಿರಾಕರಣೆ

ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಇವರಿಂದ ಮಾಹಿತಿ

ಕಾಶ್ಮೀರಿ ಹಿಂದುಗಳ ಆಘಾತಕಾರಿ ಸತ್ಯ ಬೆಳಕಿಗೆ ತರುವ ಚಲನಚಿತ್ರದ ಪ್ರಸಿದ್ಧ ಯಾರೂ ಮಾಡುವುದಿಲ್ಲ, ಎಂಬುದನ್ನು ಅರಿತು ರಾಷ್ಟ್ರಪ್ರೇಮಿ ಭಾರತೀಯರೇ ಇದಕ್ಕಾಗಿ ಮುಂದಾಳತ್ವ ವಹಿಸಬೇಕು !

ಮುಂಬಯಿ – ವಿವೇಕ್ ಅಗ್ನಿಹೋತ್ರಿ ಇವರು ನಿರ್ದೇಶಿಸಿರುವ ‘ದ ಕಾಶ್ಮೀರ ಫೈಲ್’ ಚಲನಚಿತ್ರದ ಪ್ರಸಿದ್ಧಿಗಾಗಿ ‘ದ ಕಪಿಲ್ ಶರ್ಮಾ ಶೋ’ ಈ ‘ರಿಯಾಲಿಟಿ ಶೋ’ನಲ್ಲಿ (ಪ್ರತ್ಯಕ್ಷ ಭೇಟಿ ಮಾಡುವ ಕಾರ್ಯಕ್ರಮ) ಕಪಿಲ್ ಶರ್ಮ ಇವರು ನಿರಾಕರಿಸಿದ್ದಾರೆ, ಎಂದು ಚಲನಚಿತ್ರದ ನಿರ್ದೇಶಕ ವಿವೇಕ ಅಗ್ನಿಹೋತ್ರಿ ಇವರು ಟ್ವೀಟ್ ಮೂಲಕ ತಿಳಿಸಿದ್ದಾರೆ. ಈ ಚಲನಚಿತ್ರದಲ್ಲಿ ದೊಡ್ಡ ವೃತ್ತಿಪರ ಕಲಾವಿಧರು ಇರದಿರುವುದರಿಂದ ಶರ್ಮಾ ಇವರು ಪ್ರಸಿದ್ಧಿ ನೀಡಲು ನಿರಾಕರಿಸಿದ್ದಾರೆಂದು ಅಗ್ನಿಹೋತ್ರಿಯವರ ಹೇಳಿಕೆಯಾಗಿದೆ. ಒಬ್ಬ ವ್ಯಕ್ತಿ ಅಗ್ನಿಹೋತ್ರಿ ಇವರಿಗೆ ‘ದ ಕಪಿಲ್ ಶರ್ಮಾ ಶೋ’ನಲ್ಲಿ ಚಲನಚಿತ್ರದ ಜಾಹಿರಾತು ಮಾಡಿ ಪ್ರಸಿದ್ಧಿ ಪಡಿಸುವ ಬಗ್ಗೆ ಸಲಹೆ ನೀಡಿದ್ದರು. ಈ ಬಗ್ಗೆ ಉತ್ತರ ನೀಡುವಾಗ ಅವರು ಈ ಮೇಲಿನಂತೆ ಹೇಳಿದರು.

ಅಗ್ನಿಹೋತ್ರಿ ತಮ್ಮ ಮಾತು ಮುಂದುವರೆಸುತ್ತಾ, “ಹಿಂದಿ ಚಿತ್ರರಂಗದ ಅಷ್ಟಾಗಿ ಗುರುತಿಸಿಕೊಳ್ಳದಿರುವ ನಿರ್ದೇಶಕರು, ಲೇಖಕರು ಮತ್ತು ಒಳ್ಳೆಯ ಕಲಾವಿದರು ಇವರಿಗೆ ಪ್ರಸ್ತುತ ಯಾರು ಬೆಲೆ ಕೊಡುವುದಿಲ್ಲ. ಶರ್ಮಾ ಅವರು ತಮ್ಮ ಕಾರ್ಯಕ್ರಮದಲ್ಲಿ ಯಾರಿಗೆ ಕರೆಯಬೇಕು ? ಈ ನಿರ್ಣಯ ಸಂಪೂರ್ಣವಾಗಿ ಅವರೇ ಮತ್ತು ನಿರ್ಮಾಪಕರದಾಗಿರುತ್ತದೆ. ಒಂದು ಸಾರಿ ಹಿರಿಯ ನಟ ಅಮಿತಾಬ್ ಬಚ್ಚನ್ ಮ. ಗಾಂಧಿ ಇವರ ಬಗ್ಗೆ, ಅವರು ರಾಜ ನಾವು ರಂಕ.” ಎಂದು ಹೇಳಿದ್ದರು.

ಅಗ್ನಿಹೋತ್ರಿ ಅವರ ಟ್ವೀಟ್‌ನಂತರ ಅನೇಕರು ಕಪಿಲ್ ಶರ್ಮಾ ಇವರನ್ನು ವಿರೋಧಿಸಿ ಅವರ ಮೇಲೆ ಟೀಕೆ ಮಾಡುತ್ತಿದ್ದಾರೆ. ‘ದ ಕಾಶ್ಮೀರ್ ಫೈಲ್ಸ್’ ಈ ಚಲನಚಿತ್ರ ಕಾಶ್ಮೀರಿ ಹಿಂದುಗಳಿಗೆ ಸಂಬಂಧಿಸಿದೆ. ೧೯೯೦ ರ ದಶಕದಲ್ಲಿ ಕಾಶ್ಮೀರಿ ಹಿಂದುಗಳ ಮೇಲೆ ನಡೆದಿದ್ದ ದೌರ್ಜನ್ಯ ಮತ್ತು ಅವರ ಹತ್ಯೆಗಳು, ಈ ಬಗ್ಗೆ ಚಲನಚಿತ್ರ ಆಗಿದೆ. ಮಾರ್ಚ್ ೧೧ ರಂದು ಈ ಚಲನಚಿತ್ರ ಬಿಡುಗಡೆ ಮಾಡಲಾಗುವುದು.