Hindus Self Defence Rights: ಹಿಂದೂಗಳಿಗೆ ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಹಕ್ಕು ಇರಬೇಕು

ದೆಹಲಿಯ ಧರ್ಮ ಸಂಸತ್ತಿನಲ್ಲಿ ದ್ವಾರಕಾ ಪೀಠದ ಶಂಕರಾಚಾರ್ಯ ಸದಾನಂದ ಸರಸ್ವತಿಯವರ ಹೇಳಿಕೆ.

ಶಂಕರಾಚಾರ್ಯ ಸದಾನಂದ ಸರಸ್ವತಿಯ

ನವದೆಹಲಿ – ಹಿಂದೂಗಳು ಸಂಘಟಿತರಾಗಬೇಕು. ಪ್ರತಿಯೊಬ್ಬರಿಗೂ ದೇಶದಲ್ಲಿ ವಾಸಿಸಲು ಅವಕಾಶವಿದೆ. ಸಂವಿಧಾನಕ್ಕೆ ಅನುಗುಣವಾಗಿ ಪ್ರತಿಯೊಬ್ಬರೂ ವಾಸ್ತವ್ಯ ಮಾಡಬಹುದು. ಆದರೆ ಯಾವಾಗ ನಮ್ಮ ಒಗ್ಗಟ್ಟು ಮುರಿಯಲು ಪ್ರಯತ್ನಿಸಲಾಗುವುದೋ ಮತ್ತು ಒಂದು ನಿರ್ದಿಷ್ಟ ಧರ್ಮದ ಮೂಲಕ ಇತರ ಧರ್ಮಗಳ ಮೇಲೆ ದಾಳಿ ನಡೆದಾಗ ನಮ್ಮನ್ನು ನಾವು ರಕ್ಷಿಸಿಕೊಳ್ಳುವ ಹಕ್ಕು ನಮಗಿರಬೇಕು ಎಂದು ದ್ವಾರಕಾ ಪೀಠದ ಶಂಕರಾಚಾರ್ಯ ಸದಾನಂದ ಸರಸ್ವತಿಯವರು ಹೇಳಿದರು.

ನವೆಂಬರ್ 16ರ ಸಾಯಂಕಾಲ ರಾಜಧಾನಿಯಲ್ಲಿ ಮೂರನೇ ‘ಸನಾತನ ಧರ್ಮ ಸಂಸತ್ತು’ ಆಯೋಜಿಸಲಾಗಿತ್ತು. ಈ ಸಂಸತ್ತಿನಲ್ಲಿ ಶಂಕರಾಚಾರ್ಯರು ಮಾತನಾಡುತ್ತಿದ್ದರು. ಈ ಧರ್ಮ ಸಂಸತ್ತಿನಲ್ಲಿ ದೇಶದ 50 ರಿಂದ 60 ಸಂತರು, ಸಾಧ್ವಿಗಳು ಮತ್ತು ಕಥಾವಾಚಕರು ಭಾಗವಹಿಸಿದ್ದರು. ಕಥಾವಾಚಕರಾದ ದೇವಕಿನಂದನ ಠಾಕೂರ ಅವರು ಈ ಧರ್ಮ ಸಂಸತ್ತನ್ನು ಆಯೋಜಿಸಿದ್ದರು. ದೇವಕಿನಂದನ ಅವರು ‘ವಕ್ಫ್ ಬೋರ್ಡ್’ ನಂತೆ ‘ಸನಾತನ ಬೋರ್ಡ್’ ಸ್ಥಾಪನೆಗೆ ಆಗ್ರಹಿಸಿದರು. ಮುಂದಿನ ವರ್ಷ ಪ್ರಯಾಗರಾಜ್ ನಲ್ಲಿ ನಡೆಯುವ ಕುಂಭ ಮೇಳದಲ್ಲಿ ನಾಲ್ಕನೇ ಧರ್ಮಸಂಸತ್ತು ಆಯೋಜಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.

ಶಂಕರಾಚಾರ್ಯರು ತಮ್ಮ ಮಾತನ್ನು ಮುಂದುವರಿಸಿ, ಒಂದು ವೇಳೆ ನಾವು (ಹಿಂದೂಗಳು) ನಮ್ಮ ಧರ್ಮದ ಬಗ್ಗೆ ತಿಳಿದುಕೊಳ್ಳದಿದ್ದರೆ, ನಾವು ಅವಮಾನಕ್ಕೆ ಒಳಗಾಗಬೇಕಾಗುತ್ತದೆ. ಇತರರು ನಮ್ಮ ಮೇಲೆ ಆಳ್ವಿಕೆ ನಡೆಸುತ್ತಾರೆ. ಸನಾತನ ಧರ್ಮವನ್ನು ಪಾಲನೆ ಮಾಡುವವನೇ ಮೂಲ ಭಾರತೀಯನಾಗಿದ್ದಾನೆ. ಪ್ರತಿಯೊಬ್ಬರಿಗೂ ಜೀವಿಸುವ ಹಕ್ಕಿದೆ. ಅದು ಬೇರೆ ವಿಷಯ; ಆದರೆ ನಮ್ಮ ಮೇಲೆ ದಾಳಿ ಮಾಡುವ ಹಕ್ಕು ಯಾರಿಗೂ ಇಲ್ಲ. ಸರಕಾರ ನುಸುಳುಕೋರರನ್ನು ತಡೆಯಬೇಕು. ಈ ನುಸುಳುಕೋರರು ಮತದಾರರಾಗಿ,ನಮ್ಮ ಜನಸಂಖ್ಯೆಯನ್ನು ಕಡಿಮೆ ಮಾಡಿ, ಸರ್ಕಾರದೊಳಗೆ ಪ್ರವೇಶಿಸಲು ಬಯಸುತ್ತಿದ್ದಾರೆ ಎಂದು ಹೇಳಿದರು.

ಹಿಂದೂ ಮನೆಯ ಪ್ರತಿಯೊಬ್ಬರಲ್ಲಿ  ಶಸ್ತ್ರ ಮತ್ತು ಶಾಸ್ತ್ರಗಳಿರಬೇಕು. – ಪ್ರದೀಪ ಮಿಶ್ರಾ, ಕುಬೆರೇಶ್ವರ ಧಾಮ

ಪ್ರದೀಪ ಮಿಶ್ರಾ, ಕುಬೆರೇಶ್ವರ ಧಾಮ

ದೇವಕಿನಂದನ ಠಾಕೂರ ಅವರ ಮೂಲಕ ಸನಾತನ ಮಂಡಳಿಯನ್ನು ಸ್ಥಾಪಿಸುವ ಉದ್ದೇಶದಿಂದ ಈ ಸಭೆ ನಡೆಯಿತು. ನಿಮ್ಮ ಮನೆಯಲ್ಲಿ ವಾಸಿಸುವ ಎಲ್ಲಾ ಸದಸ್ಯರ ಬಳಿ ಶಸ್ತ್ರ ಮತ್ತು ಶಾಸ್ತ್ರ ಎರಡೂ ಇರಬೇಕು. ನಾನು ಎಲ್ಲರಿಗೂ ವಿನಂತಿಸುವುದೇನೆಂದರೆ, ನಮ್ಮ ದೇವರು ಶಸ್ತ್ರಗಳಿಲ್ಲದೆ ಇರುವುದಿಲ್ಲ, ಆದ್ದರಿಂದ ನೀವು ಶಸ್ತ್ರ ಮತ್ತು ಧರ್ಮಗ್ರಂಥವನ್ನು ಹಿಡಿದುಕೊಂಡು ತಿರುಗಾಡಬೇಕು ಎಂದು ಕುಬೆರೇಶ್ವರ ಧಾಮದ ಪ್ರದೀಪ ಮಿಶ್ರಾ ಕರೆ ನೀಡಿದರು.

ಸನಾತನಿ ಮತ್ತು ಹಿಂದೂಗಳಿಗೆ ಭಾರತವೊಂದೇ ಸುರಕ್ಷಿತ ಸ್ಥಳ! – ಮಹಂತ ರಾಜು ದಾಸ, ಹನುಮಾನ ಗಢಿ, ಅಯೋಧ್ಯಾ

ಮಹಂತ ರಾಜು ದಾಸ, ಹನುಮಾನ ಗಢಿ, ಅಯೋಧ್ಯಾ

ಎದ್ದೇಳಿ, ಒಂದು ವೇಳೆ ನೀವು (ಹಿಂದೂಗಳು) ಎಚ್ಚೆತ್ತುಕೊಳ್ಳದಿದ್ದರೆ, ಜಮ್ಮು ಮತ್ತು ಕಾಶ್ಮೀರದಿಂದ ನಿಮ್ಮನ್ನು ಯಾವ ರೀತಿ ಓಡಿಸಿದರೋ, ಅದೇ ರೀತಿ ಓಡಿಸುತ್ತಾರೆ. ಇಂದು ನಿಮ್ಮನ್ನು ಬಾಂಗ್ಲಾದೇಶದಲ್ಲಿಯೂ ಕೊಲ್ಲಲಾಗುತ್ತಿದೆ. ಆದರೆ ಭಾರತದಲ್ಲಿ ಇದೇ ರೀತಿ ನಡೆದರೆ ನೀವು ಭಾರತದಿಂದ ಎಲ್ಲಿಗೆ ಹೋಗುವಿರಿ? ನಿಮಗೆ ಇನ್ನೆಲ್ಲಿಯೂ ಸ್ಥಳವಿಲ್ಲ. ಸನಾತನಿ ಮತ್ತು ಹಿಂದೂಗಳಿಗೆ ಭಾರತವು ಏಕಮೇವ ಸುರಕ್ಷಿತ ತಾಣವಾಗಿದೆ. ಹಿಂದೂ ಜಾತ್ಯಾತೀತರಾದರೆ ಹೇಗೆ ನಡೆಯುತ್ತದೆ? ಎಂಬ ಪ್ರಶ್ನೆಯನ್ನು ಆಯೋಧ್ಯೆಯ ಹನುಮಾನ ಗಢಿಯ ಮಹಂತ ರಾಜೂ ದಾಸ ಅವರು ಕೇಳಿದರು.