ಶ್ರೀನಗರದಲ್ಲಿ ಗ್ರಾನೈಡ್ ಮೂಲಕ ನಡೆದ ದಾಳಿಯಲ್ಲಿ ಓರ್ವ ಸಾವು ಮತ್ತು ೩೪ ಜನರಿಗೆ ಗಾಯ

ಶ್ರೀನಗರ (ಜಮ್ಮು-ಕಾಶ್ಮೀರ) – ಇಲ್ಲಿಯ ಹರಿ ಸಿಂಹ ಹಾಯ್ ಸ್ಟ್ರೀಟ್ ಪ್ರದೇಶದಲ್ಲಿ ಮಾರ್ಚ್ ೬ ರಂದು ಸಂಜೆ ಜಿಹಾದಿ ಉಗ್ರರಿಂದ ಸುರಕ್ಷಾ ದಳದ ಮೇಲೆ ಗ್ರಾನೈಡ್ ಮೂಲಕ ನಡೆಸಿದ ದಾಳಿಯಲ್ಲಿ ಓರ್ವನು ಸಾವನ್ನಪ್ಪಿದ್ದರೇ ೩೪ ಜನರು ಗಾಯಗೊಂಡಿದ್ದಾರೆ. ಮಹಮ್ಮದ್ ಅಸ್ಲಂ ಮುಖದುಮೀ ಎಂದು ಮೃತ ಪಟ್ಟವನ ಹೆಸರು ಆಗಿದ್ದು ಅವನು ನಗರದ ನೌಹಟ್ಟ ಪ್ರದೇಶದ ನಿವಾಸಿಯಾಗಿದ್ದಾನೆ. ಈ ಆಕ್ರಮಣದ ಹಿಂದೆ ನಿಖರವಾದ ಯಾವ ಉಗ್ರ ಸಂಘಟನೆಯ ಕೈವಾಡವಿದೆ ಎಂದು ಈವರೆಗೆ ತಿಳಿದು ಬಂದಿಲ್ಲ.