Muslims Attack Hindus: ಮುರ್ಶಿದಾಬಾದ್ (ಬಂಗಾಲ): ಕಾರ್ತಿಕ ಪೂಜೆಯ ಅಲಂಕಾರದ ಮೂಲಕ ಅಲ್ಲಾನ ಅವಮಾನವಾಗಿದೆ ಎಂದು ಹೇಳಿ ಮತಾಂಧ ಮುಸಲ್ಮಾನರಿಂದ ಹಿಂದುಗಳ ಮೇಲೆ ದಾಳಿ !

ಮುರ್ಶಿದಾಬಾದ್ (ಬಂಗಾಲ ) – ಬೆಲಡಾಂಗ ಪ್ರದೇಶದಲ್ಲಿನ ಹರಿಮತಿ ಶಾಲೆಯ ಹತ್ತಿರ ಸರಬೋಜನಿನ ಕಾರ್ತಿಕ ಪೂಜಾ ಮಂಟಪದ ಪ್ರವೇಶ ದ್ವಾರದಲ್ಲಿ ಅಲ್ಲಾಗೆ ಅವಮಾನ ಮಾಡುವ ದೀಪದ ಅಲಂಕಾರ ಮಾಡಲಾಗಿದೆ ಎಂದು ಮತಾಂಧ ಮುಸಲ್ಮಾನರು ಹಿಂದುಗಳ ಮೇಲೆ ದಾಳಿ ನಡೆಸಿದರು. ಈ ದಾಳಿಯಲ್ಲಿ ಹಿಂದುಗಳ ಮನೆ ಮತ್ತು ಅಂಗಡಿಗಳನ್ನು ಸುಡಲಾಯಿತು. ಕಥಿತ ಅವಮಾನದ ಘಟನೆಯ ವೀಡಿಯೋ ಪ್ರಸಾರವಾದ ನಂತರ ಸ್ಥಳೀಯ ಮಸೀದಿಯಿಂದ ಮತ್ತು ಇಂಟರ್ನೆಟ್ ಮೂಲಕ ಕೂಡ ಬೃಹತ್ ಪ್ರಮಾಣದಲ್ಲಿ ಪ್ರಚೋದನೆ ವ್ಯಕ್ತವಾದ ಬಳಿಕ ಮತಾಂಧ ಮುಸಲ್ಮಾನರು ದಾಳಿ ಆರಂಭಿಸಿದರು.

೧. ಕಾರ್ತಿಕ ಪೂಜಾ ಸಮಿತಿಯ ಮಂಡಪ ಮತ್ತು ಪ್ರವೇಶದ್ವಾರದ ನಿರ್ಮಾಣದ ಕಾಂಟ್ರಾಕ್ಟ್ ‘ಮಾಜೇರಪಾರ ಎಲೆಕ್ಟ್ರಿಕಲ್ ಮಾರ್ಟ್’ ನ ಮಾಲಿಕ ಎಸ್.ಕೆ.ಬಶೀರ್ ಅವರಿಗೆ ನೀಡಿದ್ದು. ಅವರು ಯಾವ ದೀಪದ ಅಲಂಕಾರ ಮಾಡಿದ್ದರು, ಅದರ ಮೂಲಕ ಅಲ್ಲಾಗೆ ಅವಮಾನ ಆಗಿದೆ ಎಂದು ಆರೋಪಿಸಲಾಗಿತ್ತು. ಹಾಗೂ ಈ ಅಲಂಕಾರ ಮಾಡಿದ್ದ ಇಬ್ಬರು ಮುಸಲ್ಮಾನ ಕಾರ್ಮಿಕರು ನಾಪತ್ತೆಯಾಗಿದ್ದಾರೆ ಎಂದು ಕೂಡ ಆರೋಪಿಸಲಾಗಿದೆ, ಎಂದು ಸ್ಥಳೀಯರ ಹೇಳಿಕೆಯಾಗಿದೆ.

೨. ಈ ಪ್ರಕರಣದ ಬಗ್ಗೆ ಭಾಜಪದ ಮಾಧ್ಯಮ ವಿಭಾಗದ ಪ್ರಮುಖರಾದ ಅಮಿತ ಮಾಲವಿಯ ಅವರು, ‘ ಎಕ್ಸ್ ‘ ನಲ್ಲಿ ಪೋಸ್ಟ್ ಮಾಡುತ್ತಾ, ಕಾರ್ತಿಕ ಪೂಜೆಯ ದಿನ ಮುಸಲ್ಮಾನರು ಮುರ್ಶಿದಾಬಾದದ ಬೆಲಡಾಂಗ ಹಿಂದುಗಳ ಮನೆಯ ಮೇಲೆ ದಾಳಿ ನಡೆಸಿದರು. ಮಮತಾ ಬ್ಯಾನರ್ಜಿ ಅವರ ಪೊಲೀಸರು ಕೇವಲ ಮೂಕ ಪ್ರೇಕ್ಷಕರಾಗಿದ್ದರು. ಬಂಗಾಲ ಹಿಂದುಗಳಿಗಾಗಿ ‘ಸ್ಮಶಾನವಾಗಿ’ ಮಾರ್ಪಟ್ಟಿದೆ. ಹಿಂದುಗಳ ಪ್ರತಿಯೊಂದು ಹಬ್ಬ ಮತ್ತು ಪೂಜೆಯಲ್ಲಿ ದಾಳಿಗಳು ನಡೆಯುತ್ತಿವೆ ಎಂದು ಬರೆದರು.

೩. ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗಿರುವ ವಿಡಿಯೋವೊಂದರಲ್ಲಿ ಮುಸಲ್ಮಾನ ಯುವಕನೊಬ್ಬ ಇತರ ಮುಸಲ್ಮಾನರಿಗೆ ಹಿಂದುಗಳನ್ನು ಹತ್ಯೆಗೈಯ್ಯಲು ಪ್ರಚೋದನೆ ನೀಡುತ್ತಿರುವುದು ಕಾಣುತ್ತಿದೆ.

೪. ಮುರ್ಶಿದಾಬಾದದ ಪೊಲೀಸ್ ಅಧಿಕ್ಷಕರ ಕಚೇರಿಯ ಪ್ರಕಾರ, ಬೆಲಡಾಂಗದಲ್ಲಿ ಪರಿಸ್ಥಿತಿ ಹಿಡಿತದಲ್ಲಿದೆ, ಆದರೂ ಕೂಡ ಅಲ್ಲಿ ಬಿಗುವಿನ ವಾತಾವರಣವಿದೆ. ಹಿಂದುಗಳ ಮೇಲೆ ಇನ್ನಷ್ಟು ದಾಳಿಗಳು ನಡೆಯುವ ಭೀತಿಯಿದೆ. ಧಾರ್ಮಿಕ ಸೌಹಾರ್ದತೆ ಹದಗೆಡೆಸುವಲ್ಲಿ ತೊಡಗಿರುವವರನ್ನು ಸುಮ್ಮನೆ ಬಿಡಲಾಗದು. ಪ್ರತಿಬಂಧಾತ್ಮಕ ಉಪಾಯವೆಂದು ಇಂಟರ್ನೆಟ್ ಸೇವೆ ನಿಲ್ಲಿಸಲಾಗಿದ್ದು ಶಾಂತಿ ಕಾಪಾಡುವುದಕ್ಕಾಗಿ ಪೊಲೀಸರು ಎರಡು ಗುಂಪಿನ ಜೊತೆಗೆ ಚರ್ಚಿಸುತ್ತಿದ್ದಾರೆ.

ಸಂಪಾದಕೀಯ ನಿಲುವು

ಬಂಗಾಲದಲ್ಲಿನ ಹಿಂದುಗಳ ರಕ್ಷಣೆಗಾಗಿ ಅಲ್ಲಿಯ ಕಾನೂನು-ಸುವ್ಯವಸ್ಥೆ ಕಾಪಾಡುವುದಕ್ಕಾಗಿ ಕೇಂದ್ರ ಸರಕಾರವು ಅಲ್ಲಿ ತಕ್ಷಣವೇ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸುವುದು ಆವಶ್ಯಕವಾಗಿದೆ.