ಮಾರ್ಚ್ ೨೦೨೨ ರಲ್ಲಿ ನೈಸರ್ಗಿಕ ಮತ್ತು ರಾಜಕೀಯ ಭೂಕಂಪ ಸಂಭವಿಸುವ ಸಾಧ್ಯತೆ !

‘ಜ್ಯೋತಿಷ್ಯ ಜ್ಞಾನ’ ಈ ತ್ರೈಮಾಸಿಕದಲ್ಲಿ ಜ್ಯೋತಿಷ್ಯಿ ಸಿದ್ಧೇಶ್ವರ ಮಾರಟಕರವರ ಭವಿಷ್ಯವಾಣಿ

೫ ರಾಜ್ಯಗಳ ಚುನಾವಣೆಯಲ್ಲಿ ಅಧಿಕಾರದಲ್ಲಿ ಬದಲಾವಣೆಯ ಸಾಧ್ಯತೆ

ಜ್ಯೋತಿಷ್ಯಿ ಸಿದ್ಧೇಶ್ವರ ಮಾರಟಕರ

ಮುಂಬಯಿ : ಗ್ರಹ ಮತ್ತು ನಕ್ಷತ್ರಗಳ ಸ್ಥಿತಿಗಳಿಂದಾಗಿ ಮಾರ್ಚ್ ೨೦೨೨ರ ತಿಂಗಳಲ್ಲಿ ದೇಶದಲ್ಲಿ ನೈಸರ್ಗಿಕ ಮತ್ತು ರಾಜಕೀಯ ಭೂಕಂಪ ಸಂಭವಿಸುವ ಸಾಧ್ಯತೆಯನ್ನು ‘ಜ್ಯೋತಿಷ್ಯ ಜ್ಞಾನ’ ಈ ತ್ರೈಮಾಸಿಕದಲ್ಲಿ ಜ್ಯೋತಿಷಿ ಸಿದ್ಧೆಶ್ವರ ಮಾರಟಕರ ಇವರು ಭವಿಷ್ಯ ನುಡಿದಿದ್ದಾರೆ. ಗಡಿಯಲ್ಲಿ ಯುದ್ಧಜನ್ಯ ಸ್ಥಿತಿ ನಿರ್ಮಾಣವಾಗಬಹುದು, ಹಾಗೆಯೆ ಉಷ್ಣತೆಯಲ್ಲಿ ವೃದ್ಧಿಯಾಗಬಹುದು, ಎಂದು ಇದರಲ್ಲಿ ಹೇಳಲಾಗಿದೆ.

ಮಾರಟಕರವರು ಭವಿಷ್ಯವಾಣಿಯಲ್ಲಿ ಹೇಳಿದ್ದೆನಂದರೇ,

೧. ಐದು ರಾಜ್ಯಗಳ ಚುನಾವಣೆಯ ಫಲಿತಾಂಶಗಳಲ್ಲಿ ವಿರೋಧ ಪಕ್ಷಗಳಿಗೆ ದೊಡ್ಡ ಯಶಸ್ಸು ಸಿಗುವುದು. ಆಡಳಿತ ಪಕ್ಷಕ್ಕೆ ಹೊಡೆತ ಬಿಳಲಿದೆ. ಕೆಲವು ಕಡೆ ಆಡಳಿತ ಬದಲಾಗಬಹುದು. ಈ ಸಮಯದಲ್ಲಿ ಹಿಂಸಾಚಾರ ಮತ್ತು ಅಗ್ನಿ ಅವಘಡವಾಗಬಹುದು.

೨. ಪ್ರಮುಖ ರಾಜಕೀಯ ಪಕ್ಷಗಳ ವಿಭಜನೆಯಾಗುವ ಸಾಧ್ಯತೆ ಇದೆ.

೩. ದೇಶದ ಕೆಲವು ಭಾಗಗಳಲ್ಲಿ ಭಯೋತ್ಪಾದಕರು ಮತ್ತು ನಕ್ಸಲೀಯರು ಸ್ಫೋಟಗಳನ್ನು ನಡೆಸಲು ಪ್ರಯತ್ನಿಸುತ್ತಾರೆ.

೪. ಪಾಕಿಸ್ತಾನ ಮತ್ತು ಚೀನಾದಂತಹ ನೆರೆಯ ರಾಷ್ಟ್ರಗಳಿಂದ ಸ್ಫೋಟ ಮಾಡಿಸುವ ಪ್ರಯತ್ನ ಮಾಡುವರು.

೫. ರೇಲ್ವೆ ಮತ್ತು ವಿಮಾನಗಳ ಅಫಘಾತ, ಹಾಗೆಯೆ ಬೆಂಕಿಯ ಘಟನೆಗಳ ಸಾಧ್ಯತೆ.

೬. ಬಂದ, ಪ್ರತಿಭಟನೆಗಳಲ್ಲಿ ಹಿಂಸೆ ಮತ್ತು ಬೆಂಕಿ ಅನಾಹುತವಾಗುವ ಸಾಧ್ಯತೆ ಇದೆ.

೭. ಷೇರು ಮಾರುಕಟ್ಟೆಯಲ್ಲಿ ನಾಟಕೀಯ ಘಟನೆಗಳು ಆಗುವವು. ದೊಡ್ಡ ಭ್ರಷ್ಟಾಚಾರ ಬಯಲಾಗಲಿದೆ.