ಸೂರತ (ಗುಜರಾತ) ಇಲ್ಲಿಯ ಮಹಾನಗರಪಾಲಿಕೆಯ ಸಾರ್ವಜನಿಕ ಶೌಚಾಲಯದ ಗೋಡೆಯ ಮೇಲೆ ಶ್ರೀ ಗಣೇಶನ ಚಿತ್ರ ಬಿಡಿಸಿರುವುದನ್ನು ಹಿಂದೂ ಸಂಘಟನೆಯು ಅಳಿಸಿತು !

ಸೂರತ ಮಹಾನಗರಪಾಲಿಕೆಯ ಈ ರೀತಿ ಚಿತ್ರ ಬಿಡಿಸುವುದು ಧೈರ್ಯ ಹೇಗೆ ಮಾಡುತ್ತದೆ ?

ಸೂರತ (ಗುಜರಾತ) – ಇಲ್ಲಿಯ ‘ಕಪೋದರಾ ಕ್ರಾಸಿಂಗ್’ ಹತ್ತಿರ ಇರುವ ಒಂದು ಸಾರ್ವಜನಿಕ ಶೌಚಾಲಯದ ಗೋಡೆಯ ಮೇಲೆ ಶ್ರೀ ಗಣೇಶನ ಚಿತ್ರ ಬಿಡಿಸಲಾಗಿತ್ತು. ಅದಕ್ಕೆ ಹಿಂದುತ್ವನಿಷ್ಠ ಸಂಘಟನೆಯು ವಿರೋಧ ವ್ಯಕ್ತಪಡಿಸಿದನಂತರ ಅದರ ಮೇಲೆ ಬಿಳಿಯ ಬಣ್ಣ ಹಚ್ಚಿ ಅದನ್ನು ಅಳಿಸಲಾಯಿತು. ಈ ಶೌಚಾಲಯ ಸೂರತ ಮಹಾನಗರಪಾಲಿಕೆಯ ವ್ಯಾಪ್ತಿಯಲ್ಲಿ ಬರುತ್ತದೆ. ಈ ಪ್ರಕರಣದಲ್ಲಿ ಹಿಂದೂ ಸಂಘಟನೆಗಳು ಪಾಲಿಕೆಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದೆ. ವಿಶ್ವಹಿಂದೂ ಪರಿಷತ್ತಿನ ನಗರದ ಪ್ರಧಾನ ಕಾರ್ಯದರ್ಶಿ ಕಮಲೇಶ್ ಕಯಾಡಾ ಇವರು, ಯಾವುದೇ ಕಟ್ಟಡದ ಮೇಲೆ ಯಾವುದೇ ದೇವತೆಯ ಚಿತ್ರ ಬಿಡಿಸುವುದು ಎಂದರೆ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವುದು ಇದು ಸುರತ ಮಹಾನಗರಪಾಲಿಕೆಗೆ ಗೊತ್ತಿರಬೇಕು. ಯಾರಿಗೆ ಗುತ್ತಿಗೆಯನ್ನು ನೀಡುವಾಗ ಪಾಲಿಕೆಯು ಜಾಗರೂಕರಾಗಿರಬೇಕು ಎಂದು ಹೇಳಿದರು. (ಮಹಾನಗರಪಾಲಿಕೆಯು ಈ ಗುತ್ತಿಗೆಯನ್ನು ಯಾರಿಗೆ ಮತ್ತು ಯಾವಾಗ ನೀಡಿತ್ತು ?, ಇದರ ಮಾಹಿತಿ ಜನರಿಗೆ ತಿಳಿಯಬೇಕು ! – ಸಂಪಾದಕರು)

(ಸೌಜನ್ಯ : city today live)