ಬೆಂಗಳೂರು (ಕರ್ನಾಟಕ) – ತಮ್ಮ ಮಗ ಯಾವಾಗಲೂ ಮೊಬೈಲ್ ಬಳಸುತ್ತಾನೆ, ಶಾಲೆಗೆ ಹೋಗುವುದಿಲ್ಲ, ಓದುವ ಕಡೆ ಗಮನ ಕೊಡುವುದಿಲ್ಲ, ಕೆಟ್ಟ ಹುಡುಗರ ಸಹವಾಸ ಬಿಡುವುದಿಲ್ಲ,ಎಂಬ ಕಾರಣಕ್ಕೆ ಕುಪಿತಗೊಂಡ ತಂದೆಯೊಬ್ಬನು ತನ್ನ 14 ವರ್ಷದ ಮಗನನ್ನು ಕ್ರಿಕೆಟ್ ಬ್ಯಾಟ್‌ನಿಂದ ಹೊಡೆದು ಸಾಯಿಸಿದ್ದಾನೆ.
ಹಾಳಾಗಿರುವ ಮೊಬೈಲ್ ಫೋನ್ ರಿಪೇರಿ ಮಾಡುವ ಬಗ್ಗೆ ತಂದೆ-ಮಗನ ನಡುವೆ ನವೆಂಬರ್ 15ರಂದು ಜಗಳವಾಗಿತ್ತು. ಆನಂತರ ಕುಪಿತಗೊಂಡ ತಂದೆ ರವಿಕುಮಾರ್ ಸ್ವಂತ ಮಗನಿಗೆ ಕ್ರಿಕೆಟ್ ಬ್ಯಾಟ್ ನಿಂದ ಹೊಡೆದಿದ್ದಾನೆ. ಅಲ್ಲದೇ ಹುಡುಗನನ್ನು ಹಲವಾರು ಬಾರಿ ಗೋಡೆಗೆ ಚಚ್ಚಿದ್ದಾನೆ. ಈ ಹೊಡೆತದ ಪರಿಣಾಮ 14 ವರ್ಷದ ತೇಜಸ್ ಅಸುನೀಗಿದ್ದಾನೆ. ‘ನೀನು ಬದುಕಿದ್ದರೂ ಅಥವಾ ಸತ್ತರೂ ನನಗೆ ಈಗ ಏನೂ ವ್ಯತ್ಯಾಸವಿಲ್ಲ’, ಎಂದು ಹುಡುಗನಿಗೆ ಹೊಡೆಯುವಾಗ ರವಿಕುಮಾರ್ ಹೇಳುತ್ತಿದ್ದನು ಎಂಬ ಮಾಹಿತಿ ಬೆಳಕಿಗೆ ಬಂದಿದೆ. ಪೋಲೀಸರು ರವಿಕುಮಾರ್ ನನ್ನು ಬಂಧಿಸಿದ್ದಾರೆ.