ತಮಿಳುನಾಡು ಸರಕಾರವು ಅನಧಿಕೃತ ಮಸೀದಿಯ ಮೇಲೆ ಕ್ರಮ ಜರುಗಿಸದೇ ಇದ್ದರೆ ಆಂದೋಲನ ಮಾಡಲಾಗುವುದು ! – ಭಾರತ ಹಿಂದೂ ಮುನ್ನಾನಿ

ಇಂತಹ ಬೇಡಿಕೆಯನ್ನು ಏಕೆ ಮಾಡಬೇಕಾಗುತ್ತದೆ ? ಸರಕಾರ ತಾವಾಗಿಯೇ ಅನಧಿಕೃತ ಕಟ್ಟಡ ನಿರ್ಮಾಣಗಳ ಮೇಲೆ ಏಕೆ ಕ್ರಮ ಜರುಗಿಸುವುದಿಲ್ಲ ?

ಚೆನ್ನೈ – ತಮಿಳುನಾಡು ಸರಕಾರ ರಾಜ್ಯದಲ್ಲಿರುವ ಅನೇಕ ಹಿಂದೂ ಮಂದಿರಗಳನ್ನು ಅನಧಿಕೃತವಾಗಿ ಕಟ್ಟಿರುವ ಕಾರಣವನ್ನು ನೀಡಿ ಅದನ್ನು ನೆಲಸಮಗೊಳಿಸುತ್ತಿದ್ದಾರೆ. ಯಾವುದೇ ಅನುಮತಿಯನ್ನು ಪಡೆಯದೇ ಚೆನ್ನೈನ ಪೆರಂಬೂರ ಬ್ರೆಕ್ಸ್ ರಸ್ತೆಗೆ ತಗುಲಿದಂತಿರುವ ಅರಬಿ ವಿಶ್ವವಿದ್ಯಾಲಯದ ಹೆಸರಿನಲ್ಲಿ ಒಂದು ಕಟ್ಟಡವನ್ನು ಕಟ್ಟಲಾಗಿದ್ದು, ಅದು ನಿಧಾನವಾಗಿ ಮಸೀದಿಯಲ್ಲಿ ಪರಿವರ್ತನೆಗೊಳ್ಳುತ್ತಿದೆ. ಈ ಕಟ್ಟಡದ ಹೊರಗೆ ೧೪ ಅಡಿ ಎತ್ತರದ ಖಂಬದ ಮೇಲೆ ಧ್ವನಿವರ್ಧಕ ಹಚ್ಚಲಾಗಿದೆ. ಅಲ್ಲಿಯ ನಾಮಫಲಕವನ್ನು ಬದಲಾಯಿಸಲಾಗಿದೆ. ಇದು ಪ್ರಮುಖವಾಗಿ ಹಿಂದೂ ಜನವಸತಿಯ ಪರಿಸರವಾಗಿದೆ. ಯಾವುದೇ ಪರಿಸ್ಥಿತಿಯಲ್ಲಿ ಈ ಸ್ಥಳದಲ್ಲಿ ಮಸೀದಿಯ ನಿರ್ಮಾಣವನ್ನು ಸ್ವೀಕರಿಸಲಾಗುವುದಿಲ್ಲ. ಆರ್.ಟಿ.ಐ.ಯ ಅಡಿಯಲ್ಲಿ ಪಡೆದ ಮಾಹಿತಿಯನುಸಾರ ಆ ಸ್ಥಳದಲ್ಲಿ ಮಸೀದಿ ನಿರ್ಮಾಣಕ್ಕೆ ಅನುಮತಿ ನೀಡಿಲ್ಲ.
ಈ ಘಟನೆಯ ಕುರಿತು ಚೆನ್ನೈ ಜಿಲ್ಲಾಧಿಕಾರಿ, ಪೊಲಿಸ ಆಯುಕ್ತರು ಮತ್ತು ಮಹಾನಗರಪಾಲಿಕೆಯ ಅಧಿಕಾರಿಗಳಲ್ಲಿ ದೂರು ದಾಖಲಿಸಲಾಗಿದೆ. ಈ ಬಗ್ಗೆ ಸರಕಾರ ತಕ್ಷಣವೇ ಕ್ರಮ ಜರುಗಿಸದೇ ಇದ್ದರೆ, ಅನಧಿಕೃತ ಮಸೀದಿಯ ಎದುರಿಗೆ ಭವ್ಯ ನಿಷೇಧಮೋರ್ಚಾ ತೆಗೆಯಲಾಗುವುದು ಎಂದು ‘ಭಾರತ ಹಿಂದೂ ಮುನ್ನಾನಿ’ ಇವರು ಎಚ್ಚರಿಕೆ ನೀಡಿದ್ದಾರೆ.