ಈ ನಿರ್ಣಯ ದೇಶದ ಪ್ರತಿಯೊಂದು ದೇವಸ್ಥಾನಕ್ಕೆ ಜಾರಿ ಮಾಡಬೇಕೆಂದು ಭಕ್ತರ ಅನಿಸಿಕೆ !
ಚೆನ್ನೈ (ತಮಿಳುನಾಡು) – ದೇವಸ್ಥಾನಗಳ ಪಾವಿತ್ರ ಕಾಪಾಡಲು ಭಕ್ತರು ಸೂಕ್ತವಾದ ಉಡುಪನ್ನು ಧರಿಸಿಯೇ ದೇವಸ್ಥಾನಕ್ಕೆ ಪ್ರವೇಶಿಸಬೇಕು. ನ್ಯಾಯಾಲಯ ತನ್ನ ಅಭಿಪ್ರಾಯ ಸಮಾಜದ ಮೇಲೆ ಹೇರಲು ಸಾಧ್ಯವಿಲ್ಲ. ಪೂಜಾ ಸ್ಥಳಗಳಲ್ಲಿ ಪ್ರವೇಶಿಸುವಾಗ ಮತ್ತು ಅಲ್ಲಿಯ ಪರಂಪರೆಗೆ ಅನುಗುಣವಾಗಿ ಯಾವುದಾದರೊಂದು ಉಡುಪು ಅವಶ್ಯಕವಾಗಿದ್ದರೆ ಆಗ ಅದೇ ಉಡುಪನ್ನು ಧರಿಸಬೇಕು, ಎಂದು ಮದ್ರಾಸ್ ಉಚ್ಚ ನ್ಯಾಯಾಲಯ ನಿರ್ಣಯ ನೀಡಿದೆ. ‘ಯಾವ ದೇವಸ್ಥಾನಗಳಲ್ಲಿ ಉಡುಪಿನ ಬಂಧನವಿದೆ, ಅವರು ದೇವಸ್ಥಾನದ ಹೊರಗಡೆ ಸೂಚನಾ ಫಲಕಗಳ ಮೇಲೆ ಮಾಹಿತಿ ನೀಡಬೇಕೆಂದು’, ನ್ಯಾಯಾಲಯ ಹೇಳಿದೆ. ದೇವಸ್ಥಾನಗಳಲ್ಲಿ ಉಡುಪು (ಡ್ರೆಸ್ ಕೋಡ್) ಅನಿವಾರ್ಯ ಗೊಳಿಸಲು, ಆದೇಶಿಸುವಂತೆ ಒಂದು ಅರ್ಜಿಯನ್ನು ನ್ಯಾಯಾಲಯದಲ್ಲಿ ಸಲ್ಲಿಸಲಾಗಿತ್ತು. ಪುರುಷರಿಗೆ ಪಂಚೆ-ಕೂರ್ತಾ, ಮಹಿಳೆಯರಿಗಾಗಿ ಸೀರೆ ಅಥವಾ ಸಲ್ವಾರ್ ಕಮೀಜ್ ಮತ್ತು ಹಣೆಯ ಮೇಲೆ ಸನಾತನ ಧರ್ಮದ ಚಿಹ್ನೆ ಅನಿವಾರ್ಯ ಪಡಿಸಲು ಒತ್ತಾಯಿಸಲಾಗಿತ್ತು. ಈ ವಿಷಯವಾಗಿ ನ್ಯಾಯಾಲಯವು ನಿರ್ಣಯ ನೀಡಿದೆ.
Devotees Expected To Enter Temples In Proper Dress Code; Temples Having Dress Code May Fix Visible Sign Boards : Madras High Court @Sebin_James_ https://t.co/908gXiWdmV
— Live Law (@LiveLawIndia) March 5, 2022