ಉತ್ತರಪ್ರದೇಶದಲ್ಲಿ ಸಂಘದ ಸ್ವಯಂಸೇವಕರ ಮಗನ ಶವ ಮರಕ್ಕೆ ನೇತು ಹಾಕಿರುವ ಸ್ಥಿತಿಯಲ್ಲಿ ಪತ್ತೆ

ಇಲ್ಲಿ ಸ್ವಯಂಸೇವಕರೊಬ್ಬರ ಮಗನ ಶವವು ಮರಕ್ಕೆ ನೇತು ಹಾಕಿರುವ ಸ್ಥಿತಿಯಲ್ಲಿ ಸಿಕ್ಕಿದೆ. ಅಕ್ಷಯ (ವಯಸ್ಸು ೨೨ ವರ್ಷ) ಎಂದು ಅವನ ಹೆಸರಾಗಿದೆ. ಗ್ರಾಮಸ್ಥರು ಈ ಘಟನೆಗೆ ಪೊಲೀಸರೇ ಹೊಣೆ ಎಂದು ನಿರ್ಧರಿಸಿ ‘ಪೊಲೀಸರ ಭಯದಿಂದ ಅಕ್ಷಯನು ಈ ರೀತಿಯ ಕೃತ್ಯ ಮಾಡಿದ್ದಾನೆ, ಎಂದು ಆರೋಪಿಸಿದ್ದಾರೆ.

ಬಸವರಾಜ ಬೊಮ್ಮಾಯಿ ಕರ್ನಾಟಕದ ನೂತನ ಮುಖ್ಯಮಂತ್ರಿ !

ಬಸವರಾಜ ಬೊಮ್ಮಯಿ ಅವರು ಜುಲೈ ೨೮ ರಂದು ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಅವರು ಕರ್ನಾಟಕದ ೨೩ ನೇ ಮುಖ್ಯಮಂತ್ರಿಯಾಗಿದ್ದಾರೆ. ರಾಜಭವನದ ಗ್ಲಾಸ್ ಹೌಸ್‌ನಲ್ಲಿ(ಗಾಜಿನ ಮನೆ) ನಡೆದ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ರಾಜ್ಯಪಾಲ ಥಾವರಚಂದ ಗೆಹ್ಲೋತ ಇವರು ಬಸವರಾಜ ಬೊಮ್ಮಾಯಿಯವರಿಗೆ ಹುದ್ದೆ ಮತ್ತು ಗೌಪ್ಯತೆಯ ಬಗ್ಗೆ ಪ್ರಮಾಣವಚನ ನೀಡಿದರು.

ಕಳೆದ ವರ್ಷಕ್ಕೆ ಹೋಲಿಸಿದರೆ ವರ್ಷ 2020ರಲ್ಲಿ ನಕ್ಸಲವಾದಿಗಳ ಆಕ್ರಮಣದಲ್ಲಿ ನಗಣ್ಯ ಕಡಿತ!

ದೇಶದಲ್ಲಿ ಕಳೆದ 6 ದಶಕಗಳಿಂದ ನಡೆಯುತ್ತಿರುವ ನಕ್ಸಲವಾದವು ಇಷ್ಟರಲ್ಲಿ ಕೊನೆಗೊಳ್ಳುವುದು ಅಪೇಕ್ಷಿತವಾಗಿರುವಾಗ ಪ್ರತೀವರ್ಷ ಅದರಲ್ಲಿ ನಗಣ್ಯ ಕಡಿತವೆಂದರೆ ಅದು ಸರ್ವಪಕ್ಷೀಯ ರಾಜಕಾರಣಿಗಳಿಗೆ ಲಜ್ಜಾಸ್ಪದವಾಗಿದೆ !

ಕೊರೊನಾದ ಲಸಿಕೆ ತೆಗೆದುಕೊಂಡಿದ್ದ ಜನರೂ ಸಹ ‘ಡೆಲ್ಟಾ’ ರೋಗಾಣುವಿಗೆ ತುತ್ತಾಗುತ್ತಿದ್ದಾರೆ

ಕೊರೊನಾದ ‘ಡೆಲ್ಟಾ’ ರೋಗಾಣುವಿನ ವಿಧವು ಮಾರಕವಾಗಿದ್ದು, ಇದು ವಿಶ್ವದಾದ್ಯಂತ ಆತಂಕದ ವಿಷಯವಾಗಿದೆ. ಭಾರತದಲ್ಲಿಯೂ, ಕೊರೊನಾದ ಎರಡನೇ ಅಲೆಯ ಸೋಂಕು ವೇಗವಾಗಿ ಹರಡಲು ಡೆಲ್ಟಾವೇ ಕಾರಣವಾಗಿದೆ ಎಂದು ಹೇಳಲಾಗುತ್ತದೆ.

ಅಫ್ಘಾನಿಸ್ತಾನದ ತಾಲಿಬಾನ್ ನಿಯಂತ್ರಿತ ಪ್ರದೇಶಕ್ಕೆ ಸ್ಥಳಾಂತರವಾಗುತ್ತಿರುವ ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಗಳು!

ಪಾಕಿಸ್ತಾನದಲ್ಲಿನ ಜಿಹಾದಿ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತಿಯಬಾ ಹಾಗೂ ಜೈಶ್-ಎ-ಮೊಹಮ್ಮದ್ ಇವು ತಮ್ಮ ನೆಲೆಯನ್ನು ಪಾಕಿಸ್ತಾನದಿಂದ ಅಫ್ಘಾನಿಸ್ತಾನಕ್ಕೆ ಸ್ಥಳಾಂತರಿಸಿವೆ, ಎಂದು ಅಫ್ಘಾನಿಸ್ತಾನ ಸರಕಾರವು ಭಾರತಕ್ಕೆ ಮಾಹಿತಿ ನೀಡಿ ಎಚ್ಚರಿಕೆಯಿಂದ ಇರಲು ತಿಳಿಸಿದೆ.

ಮಿಜೋರಾಮ್ ಪೊಲೀಸರ ಗುಂಡು ಹಾರಾಟದಲ್ಲಿ ಅಸ್ಸಾಂನ 6 ಪೊಲೀಸರ ಸಾವು, 50 ಕ್ಕೂ ಹೆಚ್ಚು ಗಾಯಾಳುಗಳು !

ಕಳೆದ ಕೆಲವು ವರ್ಷಗಳಿಂದ ಇದು ಗಡಿ ವಿವಾದವಾಗಿ ಉಳಿಯದೇ ‘ಹಿಂದು-ಮುಸಲ್ಮಾನರ ನಡುವಿನ ವಿವಾದ’ವಾಗಿ ಪರಿಣಮಿಸಿದೆ. ಅಸ್ಸಾಂನ ಗಡಿ ಪ್ರದೇಶದಲ್ಲಿರುವ ಜನರು ಮುಖ್ಯವಾಗಿ ಮುಸಲ್ಮಾನರು ಬಾಂಗ್ಲಾದೇಶೀ ನುಸುಳುಕೋರರಾಗಿದ್ದಾರೆ ಎಂದು ಮಿಜೊರಾಮ ಜನರ ಆರೋಪವಿದೆ.

ಭಿಕ್ಷುಕರನ್ನು ಭಿಕ್ಷೆ ಬೇಡುವುದರಿಂದ ಯಾರೂ ತಡೆಯಲಾರರು ! – ಸರ್ವೋಚ್ಚ ನ್ಯಾಯಾಲಯ

ನ್ಯಾಯಾಲಯಗಳಲ್ಲಿ ಕೋಟಿಗಟ್ಟಲೆ ಪ್ರಕರಣಗಳು ಬಾಕಿ ಇರುವಾಗ, ಇಂತಹ ಸಾಮಾಜಿಕ ಸಮಸ್ಯೆಗಳನ್ನು ಸಹ ನ್ಯಾಯಾಲಯಗಳೇ ಆಲಿಸಬೇಕಾದ ಸಮಯ ಬಂದಿದೆ. ಈ ಬಗ್ಗೆ ಸರಕಾರಿ ಸಂಸ್ಥೆಗಳು ಗಂಭೀರವಾಗಿ ಯೋಚಿಸುವ ಅಗತ್ಯವಿದೆ !

5 ಅಥವಾ ಹೆಚ್ಚಿನ ಮಕ್ಕಳನ್ನು ಹೊಂದಿರುವ ಕ್ರೈಸ್ತ ದಂಪತಿಗಳಿಗೆ ಆರ್ಥಿಕ ನೆರವು ಘೋಷಿಸಿದ ಕೇರಳದ ಸಾಯರೋ ಮಲಬಾರ್ ಚರ್ಚ್ !

ಇಂದು ಭಾರತದ 8 ರಾಜ್ಯಗಳಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗಿದ್ದಾರೆ. ಆದ್ದರಿಂದ, ಈ ರಾಜ್ಯಗಳಲ್ಲಿ ಹಿಂದೂಗಳು ಹೆಚ್ಚು ಮಕ್ಕಳಿಗೆ ಜನ್ಮ ನೀಡಬೇಕು ಎಂದು ಘೋಷಿಸಿದರೆ, ಅದರಲ್ಲಿ ಏನು ತಪ್ಪಿದೆ ?

ಇರಾನಿನಲ್ಲಿ ನಾಗರಿಕರು ನೀರಿಗಾಗಿ ನಡೆಸಿದ ಆಂದೋಲನದಲ್ಲಿ ೩ ಜನರು ಮೃತಪಟ್ಟಿದಾರೆ

ಇರಾನಿನ ಅಲೀಗೂರದರ್ಜ ಎಂಬ ಸ್ಥಳದಲ್ಲಿ ನೀರಿನ ಕೊರತೆಯಿಂದ ನಾಗರಿಕರು ರಸ್ತೆಗಿಳಿದು ಆಂದೋಲನ ನಡೆಸಿದ್ದರಿಂದ ಅವರ ಮೇಲೆ ಸುರಕ್ಷಾದಳದವರು ಕಾರ್ಯಾಚರಣೆ ನಡೆಸಿದರು. ಆಗ ೩ ಜನರು ಮೃತಪಟ್ಟರು.

ಕೊಯಮುತ್ತೂರು(ತಮಿಳನಾಡು)ನಲ್ಲಿ ಹಿಂದೂ ದೇವಸ್ಥಾನಗಳನ್ನು ನೆಲಸಮ ಮಾಡಿದ ವಿರುದ್ಧ ಹಿಂದೂ ಮಕ್ಕಲ ಕಚ್ಛಿ ಸಂಘಟನೆಯಿಂದ ಆಂದೋಲನ

ನಾಸ್ತಿಕ ದ್ರವಿಡ ಮುನ್ನೆತ್ರ ಕಳಘಮ್(ದ್ರಮುಕ) ಸರಕಾರದ ಕಾಲದಲ್ಲಿ ಹಿಂದೂಗಳ ದೇವಸ್ಥಾನಗಳ ಮೇಲೆ ಹೀಗೆ ಆಘಾತಗಳಾಗುವುದರಲ್ಲಿ ಹಾಗೂ ಹಿಂದೂ ಸಂಘಟನೆಯ ಮೇಲೆ ಹಾಗೂ ಕಾರ್ಯಕರ್ತರ ಮೇಲೆ ಕ್ರಮ ಕೈಗೊಳ್ಳಲಾಗುವುದರಲ್ಲಿ ಆಶ್ವರ್ಯವೇನು !