ಇರಾನಿನಲ್ಲಿ ನಾಗರಿಕರು ನೀರಿಗಾಗಿ ನಡೆಸಿದ ಆಂದೋಲನದಲ್ಲಿ ೩ ಜನರು ಮೃತಪಟ್ಟಿದಾರೆ

ನೀರಿಗೋಸ್ಕರ ಮೂರನೇಯ ಮಹಾಯುದ್ಧ ನಡೆಯಲಿದೆ’, ಎಂದು ಹೇಳಲಾಗುತ್ತದೆ. ಆ ದೃಷ್ಟಿಯಿಂದ ಈ ಘಟನೆಯು ಬಹಳ ಮಹತ್ವದ್ದಾಗಿದೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !

ತೆಹರಾನ್ (ಇರಾನ್) – ಇರಾನಿನ ಅಲೀಗೂರದರ್ಜ ಎಂಬ ಸ್ಥಳದಲ್ಲಿ ನೀರಿನ ಕೊರತೆಯಿಂದ ನಾಗರಿಕರು ರಸ್ತೆಗಿಳಿದು ಆಂದೋಲನ ನಡೆಸಿದ್ದರಿಂದ ಅವರ ಮೇಲೆ ಸುರಕ್ಷಾದಳದವರು ಕಾರ್ಯಾಚರಣೆ ನಡೆಸಿದರು. ಆಗ ೩ ಜನರು ಮೃತಪಟ್ಟರು. ಈ ಸಂಖ್ಯೆಯು ಇನ್ನು ಹೆಚ್ಚು ಇರಬಹುದು ಎಂಬ ಸುದ್ದಿಯನ್ನು ಕೆಲವು ವಾರ್ತಾಸಂಸ್ಥೆಗಳು ಹೇಳಿದೆ. ಇರಾನ್ ಸರಕಾರವು ಈ ವಿಷಯದಲ್ಲಿ ವಿಸ್ತಾರವಾದ ಮಾಹಿತಿಯನ್ನು ನೀಡಿಲ್ಲ.

ಅಧಿಕಾರಿಗಳೊಬ್ಬರು, ಈ ಸಾವಿಗೆ ಸರುಕ್ಷಾದಳದವರು ಹೊಣೆಯಲ್ಲ ಹಾಗೂ ಶಾಂತಿಯುತವಾಗಿ ನಡೆಯುತ್ತಿದ್ದ ಆಂದೋಲನದಲ್ಲಿ ಒಬ್ಬನು ಗುಂಡುಹಾರಾಟ ನಡೆಸಿದನು. ಅದರಲ್ಲಿ ಮೂವರು ಮೃತಪಟ್ಟರು ಎಂದು ಹೇಳಿದ್ದಾರೆ.