* ಭಾರತವು ಅಫ್ಘಾನಿಸ್ತಾನ ಸರಕಾರಕ್ಕೆ ಸೈನ್ಯದ ನೆರವು ನೀಡಿ ಈ ಭಯೋತ್ಪಾದಕರನ್ನು ಸರ್ವನಾಶ ಮಾಡಲು ಪ್ರಯತ್ನಿಸಬೇಕು, ಎಂದು ರಾಷ್ಟ್ರಪ್ರೇಮಿಗಳಿಗೆ ಅನಿಸುತ್ತದೆ ! * ಪಾಕಿಸ್ತಾನದಲ್ಲಿ ಇರುವಾಗಲೇ ಈ ಭಯೋತ್ಪಾದಕರ ಮೇಲೆ ಭಾರತವು ಕಾರ್ಯಾಚರಣೆ ಮಾಡಿ ಬಿಟ್ಟಿದ್ದರೆ ಇಷ್ಟರೊಳಗೆ ಬುಡಸಹಿತ ನಾಶವಾಗುತ್ತಿತ್ತು ! |
ಕಾಬುಲ್ (ಅಫ್ಘಾನಿಸ್ತಾನ) – ಪಾಕಿಸ್ತಾನದಲ್ಲಿನ ಜಿಹಾದಿ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತಿಯಬಾ ಹಾಗೂ ಜೈಶ್-ಎ-ಮೊಹಮ್ಮದ್ ಇವು ತಮ್ಮ ನೆಲೆಯನ್ನು ಪಾಕಿಸ್ತಾನದಿಂದ ಅಫ್ಘಾನಿಸ್ತಾನಕ್ಕೆ ಸ್ಥಳಾಂತರಿಸಿವೆ, ಎಂದು ಅಫ್ಘಾನಿಸ್ತಾನ ಸರಕಾರವು ಭಾರತಕ್ಕೆ ಮಾಹಿತಿ ನೀಡಿ ಎಚ್ಚರಿಕೆಯಿಂದ ಇರಲು ತಿಳಿಸಿದೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳು ಶೇ. 85 ರಷ್ಟು ಭಾಗದ ಮೇಲೆ ನಿಯಂತ್ರಣ ಸಾಧಿಸಿದ್ದರಿಂದ ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಗಳು ಅಲ್ಲಿ ಆಶ್ರಯ ಪಡೆಯುತ್ತಿವೆ, ಎಂಬುದು ಇದರಿಂದ ಗಮನಕ್ಕೆ ಬರುತ್ತದೆ.
1. ಅಫ್ಘಾನಿಸ್ತಾನದ ಹೇಳಿಕೆಗನುಸಾರ, ಪಾಕಿಸ್ತಾನವು ತನ್ನ ದೇಶದಲ್ಲಿರುವ ಎಲ್ಲ ಅಂತರರಾಷ್ಟ್ರೀಯ ಭಯೋತ್ಪಾದಕ ಸಂಘಟನೆಗಳನ್ನು ಹಾಗೂ ಗುಂಪುಗಳನ್ನು ತಮ್ಮ ಭೂಮಿಯಿಂದ ಹೊರದಬ್ಬಲು ಬಯಸಿದೆ. ಅವರೆಲ್ಲರನ್ನು ಅಫ್ಘಾನಿಸ್ತಾನಕ್ಕೆ ಕಳುಹಿಸಲು ಬಯಸುತ್ತಿದೆ. ಇದರಿಂದ ಅದು ‘ಫೈನಾನ್ಶಿಯಲ್ ಆಕ್ಷನ್ ಟಾಸ್ಕ ಫೋರ್ಸ್’ನ (ಎಫ್.ಎ.ಟಿ.ಎಫ್. ನ) ಬ್ಲಾಕ್ ಲಿಸ್ಟ್ (ಎಫ್.ಎ.ಟಿ.ಎಫ್. ನ ನಿಷ್ಕರ್ಷಕ್ಕನುಸಾರ ಭಯೋತ್ಪಾದನೆಗೆ ಆರ್ಥಿಕ ಸಹಾಯ ಮಾಡುವ ದೇಶಗಳನ್ನು ಕಪ್ಪು ಸೂಚಿಯಲ್ಲಿ ಸೇರಿಸಲಾಗುತ್ತದೆ.) ನಿಂದ ಹೊರ ಬರಬಹುದು, ಎಂದು ಅದಕ್ಕೆ ಅನಿಸುತ್ತದೆ; ಎಂದಾಗಿದೆ. (ಪಾಕಿಸ್ತಾನವು ಎಷ್ಟೇ ಪ್ರಯತ್ನಿಸಿದರೂ, ಭಾರತವು ಅದನ್ನು ಬಹಿರಂಗ ಪಡಿಸಬೇಕು ಮತ್ತು ಪಾಕಿಸ್ತಾನವನ್ನು ಕಪ್ಪು ಸೂಚಿಯಲ್ಲಿ ಸೇರಿಸಲು ಪ್ರಯತ್ನಿಸಬೇಕು ! – ಸಂಪಾದಕರು)
2. ಕೆಲವು ವಾರಗಳ ಹಿಂದೆಯೇ ಅಫ್ಘಾನಿಸ್ತಾನದ ರಾಷ್ಟ್ರಪತಿ ಅಶರಫ್ ಗನಿ ಇವರು, ಪಾಕಿಸ್ತಾನದಲ್ಲಿನ 10 ಸಾವಿರ ಜಿಹಾದಿ ಭಯೋತ್ಪಾದಕರು ಅಫ್ಘಾನಿಸ್ತಾನದೊಳಗೆ ಪ್ರವೇಶಿಸಿದ್ದಾರೆ. ಅದೇ ರೀತಿ ತಾಲಿಬಾನಿನ ಲಷ್ಕರ್-ಎ-ತಿಯಬಾ, ಅಲ್ ಖೈದಾ ಹಾಗೂ ಜೈಶ್-ಎ-ಮೊಹಮ್ಮದ್ ಇವರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದಾರೆ ಎಂದು ಬಹಿರಂಗವಾಗಿ ಹೇಳಿದ್ದರು.
3. ಗನಿಯವರು ತಮ್ಮ ಮಾತನ್ನು ಮುಂದುವರೆಸುತ್ತಾ, ತಾಲಿಬಾನ್ ಅಫ್ಘಾನಿಸ್ತಾನವನ್ನು ಭಯೋತ್ಪಾದಕರ ಸ್ವರ್ಗ ಮಾಡಲು ಬಯಸಿದೆ; ಆದರೆ ನಾವು ಹಾಗೆ ಮಾಡಲು ಬಿಡುವುದಿಲ್ಲ; ಎಂದಿದ್ದಾರೆ.
4. ಅಫ್ಘಾನಿಸ್ತಾನದಲ್ಲಿ ಮೃತಪಟ್ಟ ಭಯೋತ್ಪಾದರಕ ಬಳಿ ಪಾಕಿಸ್ತಾನದ ಗುರುತಿನ ಚೀಟಿ ಲಭ್ಯವಾಗಿದೆ. ಅದೇ ರೀತಿ ತಾಲಿಬಾನಿ ಭಯೋತ್ಪಾದಕರಿಗೆ ಪಾಕಿಸ್ತಾನದ ಆಸ್ಪತ್ರೆಗಳಲ್ಲಿ ಚಿಕಿತ್ಸೆಯೂ ನಡೆಯುತ್ತಿದೆ.