ರಷ್ಯಾ ಮತ್ತು ತಾಲಿಬಾನ್ ಸರಕಾರದ ನಡುವೆ ಮಿಲಿಟರಿ ಸಹಕಾರದ ಒಪ್ಪಂದ!

ಒಂದೆಡೆ ಅಫ್ಘಾನಿಸ್ತಾನದ ಹೆಗಲ ಮೇಲೆ ಬಂದೂಕನ್ನಿಟ್ಟು ಭಾರತ ಪಾಕಿಸ್ತಾನದ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದೆ ಎಂದು ಪಾಕ್ ಸದಾ ಕೂಗಾಡುತ್ತಾ ಬಂದಿದೆ. ಈಗ ಈ ರಕ್ಷಣಾ ಒಪ್ಪಂದದಿಂದ ಪಾಕಿಸ್ತಾನಕ್ಕೆ ತೀವ್ರ ಹೊಟ್ಟೆಯುರಿ ಉಂಟಾಗುವುದರಲ್ಲಿ ಆಶ್ಚರ್ಯವೇನಿಲ್ಲ!

ಮಹಾರಾಷ್ಟ್ರದ ತಾಲಿಬಾನಿ ಉಗ್ರನಿಗೆ ೭ ವರ್ಷಗಳ ಜೈಲು ಶಿಕ್ಷೆ

ಪ್ರತಿಯೊಬ್ಬ ಭಯೋತ್ಪಾದಕನಿಗೂ ಗಲ್ಲು ಶಿಕ್ಷೆಯನ್ನೇ ನೀಡುವ ಕಾನೂನು ತರುವುದು ಅತ್ಯಗತ್ಯವಾಗಿದೆ; ಇಲ್ಲದಿದ್ದರೆ ಇಂತಹ ಉಗ್ರರು ಶಿಕ್ಷೆ ಮುಗಿಸಿ ಹೊರಬಂದ ನಂತರ ಮತ್ತೆ ವಿಧ್ವಂಸಕ ಕೃತ್ಯಗಳನ್ನೇ ಮಾಡುತ್ತಾರೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ!

ಯುದ್ಧದಲ್ಲಿ ಮಧ್ಯಸ್ಥಿಕೆ ವಹಿಸುತ್ತಿರುವಾಗಲೇ ಇರಾನ್ ವಿಮಾನಗಳಿಗೆ ಪಾಕಿಸ್ತಾನ ಆಶ್ರಯ ನೀಡಿರುವುದು ಬಹಿರಂಗ!

ಪಾಕಿಸ್ತಾನ ವಿಶ್ವಾಸಘಾತಕಿ ಎಂಬುದು ಹೊಸ ವಿಷಯವೇನಲ್ಲ. ಈ ಹಿಂದೆಯೂ ಅಮೆರಿಕಕ್ಕೆ ಪಾಕಿಸ್ತಾನ ದ್ರೋಹ ಬಗೆದಿದ್ದರೂ, ಅಮೆರಿಕ ಅದನ್ನು ಬೆಂಬಲಿಸುತ್ತಾ ಭಾರತವನ್ನು ಪರೋಕ್ಷವಾಗಿ ವಿರೋಧಿಸುತ್ತಿದೆ. ಅಮೆರಿಕಕ್ಕೆ ಇದರ ಫಲ ಸಿಗದೇ ಇರಲಾರದು!

ಪಾಕಿಸ್ತಾನ ಸೈನ್ಯದ ದಾಳಿಯಲ್ಲಿ ೩ ನಾಗರಿಕರ ಸಾವು; ಅಫ್ಘಾನಿಸ್ತಾನದ ಆರೋಪವನ್ನು ತಳ್ಳಿಹಾಕಿದ ಪಾಕಿಸ್ತಾನ!

ಇತ್ತೀಚೆಗೆ ಅಫ್ಘಾನ್ ಗಡಿಯಿಂದ ಪಾಕಿಸ್ತಾನದ ದಿಕ್ಕಿಗೆ ನಡೆದ ಗುಂಡಿನ ದಾಳಿಯ ಘಟನೆಯನ್ನು ಮರೆಮಾಚಲು ಅಫ್ಘಾನಿಸ್ತಾನವು ಇಂತಹ ದಾವೆಗಳನ್ನು ಮಾಡುತ್ತಿದೆ ಎಂದು ಪಾಕಿಸ್ತಾನ ಹೇಳುತ್ತಿದೆ.

ಪಾಕಿಸ್ತಾನದಿಂದ ಅಫ್ಘಾನ್ ಮಗುವನ್ನು ಗುಂಡಿಕ್ಕಿ ಹತ್ಯೆ

ಇಂತಹ ಘಟನೆಗಳಿಂದ ಸಣ್ಣ ಮಕ್ಕಳನ್ನೂ ಬಿಡದ ಪಾಕಿಸ್ತಾನದ ರಾಕ್ಷಸ ಪ್ರವೃತ್ತಿ ಎದ್ದು ಕಾಣುತ್ತದೆ! ಇಂತಹ ವಿಷಯಗಳಲ್ಲಿ ಅಂತರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಈಗ ಏಕೆ ಸುಮ್ಮನಿದೆ?

ಭಾರತವನ್ನು ಸೋಲಿಸಲು ವಿಫಲವಾದ ಕಾರಣ ಅಫ್ಘಾನಿಸ್ತಾನದೊಂದಿಗೆ ಪಾಕಿಸ್ತಾನದ ಸಂಘರ್ಷ!

ಪಾಕಿಸ್ತಾನದ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಅವರು ತಮ್ಮ ವರ್ಚಸ್ಸನ್ನು ಸುಧಾರಿಸಿಕೊಳ್ಳಲು ಅಫ್ಘಾನಿಸ್ತಾನದೊಂದಿಗಿನ ಉದ್ವಿಗ್ನತೆಯನ್ನು ಹೆಚ್ಚಿಸಿದ್ದಾರೆ ಎಂದು ‘ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್’ (ಟಿಟಿಪಿ) ತನ್ನ ‘ಮುಜಲ್ಲಾ ತಾಲಿಬಾನ್’ ನಿಯತಕಾಲಿಕೆಯಲ್ಲಿ ಆರೋಪಿಸಿದೆ.

ಪಾಕಿಸ್ತಾನ-ಅಫ್ಘಾನಿಸ್ತಾನಗಳ ನಡುವೆ ಗಡಿಯ ಬಳಿ ಮತ್ತೆ ಹಿಂಸಾಚಾರ : 2 ನಾಗರಿಕರ ಸಾವು

ಅಫ್ಘಾನ್ ಗಡಿ ಪಡೆಗಳು ಪ್ರತ್ಯುತ್ತರ ನೀಡಿ ಪಾಕಿಸ್ತಾನದ 3 ಸೇನಾ ನೆಲೆಗಳನ್ನು ಧ್ವಂಸಗೊಳಿಸಿವೆ. ಅದರಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ಅಫ್ಘಾನ್ ಸೈನ್ಯವು ಪ್ರತಿಪಾದಿಸಿದೆ; ಆದರೆ ಈ ಪ್ರತಿಪಾದನೆಗಳಿಗೆ ಸ್ವತಂತ್ರವಾಗಿ ದೃಢೀಕರಣ ಸಿಕ್ಕಿಲ್ಲ. ಪಾಕಿಸ್ತಾನವು ಮಾತ್ರ ಗುಂಡಿನ ದಾಳಿಯನ್ನು ಅಫ್ಘಾನ್ ಪಡೆಗಳೇ ಆರಂಭಿಸಿವೆ ಎಂದು ಆರೋಪಿಸಿದೆ.

“ಭಯೋತ್ಪಾದಕ ಗುಂಪುಗಳನ್ನು ಗುರಿಯಾಗಿಸುವ ಹಕ್ಕು ನಮಗಿದೆ!” – ಪಾಕಿಸ್ತಾನ

ಪಾಕಿಸ್ತಾನವು ಮಾರ್ಚ್ 14 ಮತ್ತು 15 ರಂದು ಅಫ್ಘಾನಿಸ್ತಾನದ ಮೇಲೆ ದಾಳಿ ನಡೆಸಿದೆ. ಈ ದಾಳಿಯನ್ನು ಭಾರತ ಟೀಕಿಸಿದ ನಂತರ, ಪಾಕಿಸ್ತಾನ ಸರಕಾರವು “ಈ ವಿಷಯದಲ್ಲಿ ಭಾರತದ ನಿಲುವು ಅನಗತ್ಯ ಮತ್ತು ನಿರರ್ಥಕ” ಎಂದು ಹೇಳಿದೆ.

ಪಾಕಿಸ್ತಾನದಿಂದ ಅಫ್ಘಾನಿಸ್ತಾನದ ಮೇಲೆ ಮತ್ತೆ ವೈಮಾನಿಕ ದಾಳಿ: ನಾಲ್ವರ ಸಾವು

ಪಾಕಿಸ್ತಾನವು ‘ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್’ (TTP) ಸಂಘಟನೆಗೆ ಸೇರಿದ ಭಯೋತ್ಪಾದಕರನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಿರುವುದಾಗಿ ಪ್ರತಿಪಾದಿಸಿದೆ. ಪಾಕಿಸ್ತಾನಿ ಸೇನೆಯು ಈ ಸಂಘಟನೆಯ ನೆಲೆಯನ್ನು ನಿಖರವಾಗಿ ಗುರಿಯಾಗಿಸಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.

ಅಫ್ಘಾನಿಸ್ತಾನದಿಂದ ಪಾಕಿಸ್ತಾನಿ ಸೈನ್ಯದ ನೆಲೆಗಳ ಮೇಲೆ ಡ್ರೋನ್ ದಾಳಿ: ೩೨ ಸೈನಿಕರ ಸಾವು

​ಅಫ್ಘಾನಿಸ್ತಾನದ ಸೈನ್ಯವು ಪಾಕಿಸ್ತಾನದ ​ರಾವಲ್ಪಿಂಡಿಯ ನೂರ್ ಖಾನ್ ವಾಯುಪಡೆಯ ನೆಲೆ, ​ಬಲೂಚಿಸ್ತಾನದ ಕ್ವೆಟ್ಟಾದಲ್ಲಿರುವ ಪಾಕ್ ಸೈನ್ಯದ ೧೨ ನೇ ಡಿವಿಷನ್‌ನ ಮುಖ್ಯ ಕಾರ್ಯಾಲಯ ಮತ್ತು ಖೈಬರ್ ಪಖ್ತುನ್ಖ್ವಾದಲ್ಲಿರುವ ಖ್ವಾಜಾಯಿ ಕ್ಯಾಂಪ್ ಈ ಸೇನಾ ನೆಲೆಗಳ ಮೇಲೆ ದಾಳಿ ಮಾಡಿದೆ.