ಭಿಕ್ಷುಕರನ್ನು ಭಿಕ್ಷೆ ಬೇಡುವುದರಿಂದ ಯಾರೂ ತಡೆಯಲಾರರು ! – ಸರ್ವೋಚ್ಚ ನ್ಯಾಯಾಲಯ

* ಸ್ವಾತಂತ್ರ್ಯದ ನಂತರ ಭಾರತಕ್ಕೆ ಭಿಕ್ಷುಕರ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಾಗಲಿಲ್ಲ, ಇದು ನಾಚಿಕೆಗೇಡಿನ ಸಂಗತಿಯಾಗಿದೆ !

* ನ್ಯಾಯಾಲಯಗಳಲ್ಲಿ ಕೋಟಿಗಟ್ಟಲೆ ಪ್ರಕರಣಗಳು ಬಾಕಿ ಇರುವಾಗ, ಇಂತಹ ಸಾಮಾಜಿಕ ಸಮಸ್ಯೆಗಳನ್ನು ಸಹ ನ್ಯಾಯಾಲಯಗಳೇ ಆಲಿಸಬೇಕಾದ ಸಮಯ ಬಂದಿದೆ. ಈ ಬಗ್ಗೆ ಸರಕಾರಿ ಸಂಸ್ಥೆಗಳು ಗಂಭೀರವಾಗಿ ಯೋಚಿಸುವ ಅಗತ್ಯವಿದೆ !

ನವ ದೆಹಲಿ : ಭಾರತದಲ್ಲಿ ಹರಡಿರುವ ಕೊರೊನಾದ ಅಪಾಯವನ್ನು ತಡೆಗಟ್ಟಲು ಮತ್ತು ಪುನರ್ವಸತಿ ಮಾಡಿ ಭಿಕ್ಷುಕರನ್ನು ರಸ್ತೆಗಳಲ್ಲಿ ಹಾಗೂ ಮಾರುಕಟ್ಟೆಗಳಲ್ಲಿ ಭಿಕ್ಷೆ ಬೇಡದಂತೆ ತಡೆಯಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯ ಬಗ್ಗೆ ಸರ್ವೋಚ್ಚ ನ್ಯಾಯಾಲಯವು ವಿಚಾರ ಮಾಡಲು ನಿರಾಕರಿಸಿದೆ. ಭಿಕ್ಷುಕರನ್ನು ಭಿಕ್ಷೆ ಬೇಡುವುದರಿಂದ ಯಾರೂ ತಡೆಯಲು ಸಾಧ್ಯವಿಲ್ಲ ಎಂದು ನ್ಯಾಯಾಲಯವು ಸ್ಪಷ್ಟಪಡಿಸಿದೆ.

ಈ ಕುರಿತು ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಲು ನ್ಯಾಯಮೂರ್ತಿ ಧನಂಜಯ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಎಂ.ಆರ್. ಶಾಹ್ ಇವರ ನ್ಯಾಯಪೀಠವು ನಿರಾಕರಿಸಿತು. ನ್ಯಾಯಮೂರ್ತಿ ಚಂದ್ರಚೂಡ್ ಅವರು, ರಸ್ತೆಗಳಲ್ಲಿ ಭಿಕ್ಷೆ ಬೇಡುವುದಕ್ಕೆ ಬಡತನವು ಒಂದು ಒಂದು ಕಾರಣವಾಗಿರುತ್ತದೆ. ಇದು ಸಾಮಾಜಿಕ ಮತ್ತು ಆರ್ಥಿಕ ಸಮಸ್ಯೆಯಾಗಿದೆ. ನಾವು ಅವರ ಮಕ್ಕಳಿಗೆ ಶಿಕ್ಷಣ ನೀಡಲು ವ್ಯವಸ್ಥೆ ಮಾಡಬಹುದು. ಭಿಕ್ಷುಕರ ಪುನರ್ವಸತಿ ಮತ್ತು ಲಸಿಕೀಕರಣದ ಬಗ್ಗೆ ಗಮನ ನೀಡುವಂತೆ ಅರ್ಜಿದಾರರ ಬೇಡಿಕೆ ಕುರಿತು ಸರ್ವೋಚ್ಚ ನ್ಯಾಯಾಲಯವು ಕೇಂದ್ರ ಮತ್ತು ದೆಹಲಿ ಸರಕಾರಕ್ಕೆ ನೋಟಿಸ್ ನೀಡಿದೆ.