ಕೊಯಮುತ್ತೂರು(ತಮಿಳನಾಡು)ನಲ್ಲಿ ಹಿಂದೂ ದೇವಸ್ಥಾನಗಳನ್ನು ನೆಲಸಮ ಮಾಡಿದ ವಿರುದ್ಧ ಹಿಂದೂ ಮಕ್ಕಲ ಕಚ್ಛಿ ಸಂಘಟನೆಯಿಂದ ಆಂದೋಲನ

ಅಧ್ಯಕ್ಷ ಅರ್ಜುನ್ ಸಂಪತ್ ಇವರ ಬಂಧನ

ನಾಸ್ತಿಕ ದ್ರವಿಡ ಮುನ್ನೆತ್ರ ಕಳಘಮ್(ದ್ರಮುಕ) ಸರಕಾರದ ಕಾಲದಲ್ಲಿ ಹಿಂದೂಗಳ ದೇವಸ್ಥಾನಗಳ ಮೇಲೆ ಹೀಗೆ ಆಘಾತಗಳಾಗುವುದರಲ್ಲಿ ಹಾಗೂ ಹಿಂದೂ ಸಂಘಟನೆಯ ಮೇಲೆ ಹಾಗೂ ಕಾರ್ಯಕರ್ತರ ಮೇಲೆ ಕ್ರಮ ಕೈಗೊಳ್ಳಲಾಗುವುದರಲ್ಲಿ ಆಶ್ವರ್ಯವೇನು ! ಇಂತಹ ಘಟನೆಗಳನ್ನು ಶಾಶ್ವತವಾಗಿ ತಡೆಗಟ್ಟಲು ಹಿಂದೂ ರಾಷ್ಟ್ರವೇ ಬೇಕು !

ಕೊಯಮುತ್ತೂರು (ತಮಿಳನಾಡು) – ಇಲ್ಲಿನ ಮುಥನ್ನನಕುಲಮ್ ಸರೋವರದ ದಡದಲ್ಲಿರುವ ದೇವಸ್ಥಾನಗಳನ್ನು ಪುರಸಭೆಯು ಶೋಭೆಗಾಗಿ ನೆಲಸಮಗೊಳಿಸಿದೆ. ಇದರ ವಿರುದ್ಧ ಹಿಂದುತ್ವನಿಷ್ಠ ಸಂಘಟನೆಯಿಂದ ಆಂದೋಲನ ನಡೆಯುತ್ತಿದೆ. ಇತ್ತೀಚೆಗೆ ಹಿಂದು ಮಕ್ಕಲ ಕತ್ಛಿಯ (ಹಿಂದೂ ಜನತಾ ಪಕ್ಷ) ಅಧ್ಯಕ್ಷ ಅರ್ಜುನ್ ಸಂಪತ್ ಇವರನ್ನು ಪುರಸಭೆ ಮತ್ತು ತಮಿಳುನಾಡು ಸರಕಾರದ ವಿರುದ್ಧ ಆಂದೋಲನ ಮಾಡಿದ್ದಾರೆ ಎಂದು ಬಂಧಿಸಲಾಗಿದೆ. ಈ ಸರೋವರದ ದಡದಲ್ಲಿ ಅವರು ಮತ್ತು ಅವರ ಕಾರ್ಯಕರ್ತರು ಶಾಂತಯುತವಾಗಿ ಆಂದೋಲನ ಮಾಡುತ್ತಿರುವಾಗ ಅವರನ್ನು ಬಂಧಿಸಲಾಯಿತು. ಅವರ ಸಂಘಟನೆಯು ದೇವಸ್ಥಾನದ ಪುನರ್ನಿರ್ಮಾಣಕ್ಕಾಗಿ ಒತ್ತಾಯಿಸಿದೆ.