5 ಅಥವಾ ಹೆಚ್ಚಿನ ಮಕ್ಕಳನ್ನು ಹೊಂದಿರುವ ಕ್ರೈಸ್ತ ದಂಪತಿಗಳಿಗೆ ಆರ್ಥಿಕ ನೆರವು ಘೋಷಿಸಿದ ಕೇರಳದ ಸಾಯರೋ ಮಲಬಾರ್ ಚರ್ಚ್ !

ಐದು ಅಥವಾ ಅದಕ್ಕಿಂತಲೂ ಹೆಚ್ಚಿನ ಮಕ್ಕಳನ್ನು ಹೊಂದಿರುವ ಕ್ರೈಸ್ತ ದಂಪತಿಗಳಿಗೆ ಸಿಗಲಿದೆ ತಿಂಗಳಿಗೆ 1,500 ರೂಪಾಯಿ ಕ್ರೈಸ್ತ ಮಹಿಳೆಯ ನಾಲ್ಕನೆಯ ಅಥವಾ ಅದರ ನಂತರದ ಹೆರಿಗೆಯ ಎಲ್ಲಾ ಖರ್ಚುಗಳನ್ನು ಚರ್ಚ್ ಭರಿಸುವುದು !

ದೇಶಕ್ಕೆ ಇಂದು ‘ಜನಸಂಖ್ಯಾ ನಿಯಂತ್ರಣ ಕಾಯ್ದೆ’ಯ ಅವಶ್ಯಕತೆಯಿರುವಾಗ ಚರ್ಚ್ ನೀಡುವ ಈ ಸೌಲಭ್ಯವು ರಾಷ್ಟ್ರಾಘಾತವಾಗಿದೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !

* ಜನಸಂಖ್ಯಾ ನಿಯಂತ್ರಣ ಕಾಯ್ದೆಯ ಬಗ್ಗೆ ಯೋಗಿ ಆದಿತ್ಯನಾಥರು ಅಥವಾ ಇನ್ನಿತರ ಹಿಂದುತ್ವನಿಷ್ಠ ನಾಯಕರು ಹೇಳಿಕೆ ನೀಡಿದ್ದರೆ ಆಕಾಶ ಪಾತಾಳ ಒಂದು ಮಾಡುವ ಜಾತ್ಯತೀತವಾದಿಗಳು ಈಗ ಮೌನವಾಗಿದ್ದಾರೆ; ಇದರಿಂದ ಇಂತಹವರ ದ್ವಿಮುಖ ಮಾನಸಿಕತೆ ಗಮನಕ್ಕೆ ಬರುತ್ತದೆ !

* ಇಂದು ಭಾರತದ 8 ರಾಜ್ಯಗಳಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗಿದ್ದಾರೆ. ಆದ್ದರಿಂದ, ಈ ರಾಜ್ಯಗಳಲ್ಲಿ ಹಿಂದೂಗಳು ಹೆಚ್ಚು ಮಕ್ಕಳಿಗೆ ಜನ್ಮ ನೀಡಬೇಕು ಎಂದು ಘೋಷಿಸಿದರೆ, ಅದರಲ್ಲಿ ಏನು ತಪ್ಪಿದೆ ?

ಸಾಯರೋ ಮಲಬಾರ್ ಚರ್ಚ್

ತಿರುವನಂತಪುರಮ್ : ಇಲ್ಲಿನ ಸಾಯರೋ ಮಲಬಾರ್ ಚರ್ಚ್ 5 ಅಥವಾ ಹೆಚ್ಚಿನ ಮಕ್ಕಳನ್ನು ಹೊಂದಿರುವ ಕ್ರೈಸ್ತ ದಂಪತಿಗಳಿಗೆ ಆರ್ಥಿಕ ನೆರವು ಘೋಷಿಸಿದೆ. ಈ ನಿಟ್ಟಿನಲ್ಲಿ ಚರ್ಚ್‍ನ ಬಿತ್ತಿಪತ್ರವು ಬೆಳಕಿಗೆ ಬಂದಿದ್ದು, ಅದರಲ್ಲಿ ನಾಲ್ಕನೇ ಮಗುವಿನಿಂದ ನಂತರ ಜನಿಸುವ ಎಲ್ಲ ಮಕ್ಕಳಿಗೆ ಪ್ರತಿ ತಿಂಗಳು 1,500 ರೂಪಾಯಿ ವಿದ್ಯಾರ್ಥಿ ವೇತನ ನೀಡಲಾಗುವುದು ಎಂದು ತಿಳಿಸಲಾಗಿದೆ. ವಿದ್ಯಾರ್ಥಿ ವೇತನವನ್ನು ಚರ್ಚ್ ನಡೆಸುವ ‘ಸೇಂಟ್ ಜೋಸೆಫ್ಸ್ ಆಫ್ ಎಂಜಿನಿಯರಿಂಗ್ ಅಂಡ್ ಟೆಕ್ನಾಲಾಜಿ’ಯಿಂದ ನೀಡಲಾಗುತ್ತಿದ್ದು ಚರ್ಚ್ ನಡೆಸುವ ಆಸ್ಪತ್ರೆಯಿಂದ ಉಚಿತ ವೈದ್ಯಕೀಯ ಚಿಕಿತ್ಸೆಯನ್ನು ನೀಡಲಾಗುವುದು, ಎಂಬ ಮಾಹಿತಿಯು ಈ ಪತ್ರಕದಿಂದ ಬೆಳಕಿಗೆ ಬಂದಿದೆ. ಇದರಿಂದ ಕ್ರೈಸ್ತ ಮಹಿಳೆಯು ನಾಲ್ಕನೇ ಬಾರಿಗೆ ಅಥವಾ ಅದಕ್ಕಿಂತ ಮುಂದಿನ ಸಲ ಗರ್ಭಿಣಿಯಾದರೆ, ಪ್ರತಿ ಬಾರಿ ಆಕೆಯ ಹೆರಿಗೆಯ ಎಲ್ಲಾ ವೆಚ್ಚಗಳನ್ನು ಚರ್ಚ್ ಭರಿಸುತ್ತದೆ. ಈ ಯೋಜನೆಯ ಮೊದಲ ಹಂತವನ್ನು ಕೇರಳದ ಮೀನಾಚಿಲ್ ಮತ್ತು ಕೊಟ್ಟಾಯಮ್ ಪ್ರದೇಶಗಳಲ್ಲಿ ಜಾರಿಗೊಳಿಸಲಾಗುತ್ತಿರುವುದು ಬೆಳಕಿಗೆ ಬಂದಿದೆ.

ಸಾಯರೋ ಮಲಬಾರ ಚರ್ಚ್‍ನ ಬಿಶಪ್ ಜೊಸೇಫ್ ಕುಟ್ಟಿಯಾಂಕಲ್ ಇವರು ಈ ಯೋಜನೆಯನ್ನು ಪ್ರಕಟಿಸಿದ್ದು, ಕ್ರೈಸ್ತ ಸಮುದಾಯದ ಜನಸಂಖ್ಯೆಯು ಕ್ಷೀಣಿಸುತ್ತಿರುವುದರಿಂದ ಈ ರೀತಿಯ ಸೌಲಭ್ಯವನ್ನು ಘೋಷಿಸಲಾಗಿದೆ ಎಂದು ಸ್ಪಷ್ಟ ಪಡಿಸಿದರು.