ಗಾಜಿಯಾಬಾದ್ (ಉತ್ತರ ಪ್ರದೇಶ) ದ ಪ್ರಸಿದ್ಧ ಶ್ರೀ ಡಾಸನಾ ದೇವಿ ದೇವಸ್ಥಾನಕ್ಕೆ ನುಗ್ಗಿ ಸಾಧು ಮೇಲೆ ಮಾರಣಾಂತಿಕ ಹಲ್ಲೆ

ಸ್ಥಳೀಯ ಪ್ರಸಿದ್ಧ ಶ್ರೀ ಡಾಸನಾ ದೇವಿಯ ದೇವಸ್ಥಾನದಲ್ಲಿ ಬಿಹಾರದ ಸಾಧು, ಅದೇ ರೀತಿ ದೇವಸ್ಥಾನದ ಮಹಂತ ಯತಿ ನರಸಿಂಹಾನಂದ ಸರಸ್ವತಿ ಇವರ ಸಹಕಾರಿ ನರೇಶ್ ಆನಂದ ಸರಸ್ವತಿಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಗಿದೆ.

ಕರಾಚಿ (ಪಾಕಿಸ್ತಾನ)ಯಲ್ಲಿ ಶ್ರೀ ಗಣಪತಿ ದೇವಾಲಯದ ಧ್ವಂಸದ ವಿರುದ್ಧ ಹಿಂದೂಗಳ ಪ್ರತಿಭಟನೆ !

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಕೆಲವು ದಿನಗಳ ಹಿಂದೆ ಶ್ರೀ ಗಣಪತಿ ದೇವಸ್ಥಾನವನ್ನು ಧ್ವಂಸ ಮಾಡಿರುವುದನ್ನು ವಿರೋಧಿಸಿ ಪಾಕಿಸ್ತಾನದ ಕರಾಚಿಯಲ್ಲಿ ವಾಸಿಸುತ್ತಿದ್ದ ಅಲ್ಪಸಂಖ್ಯಾತ ಹಿಂದೂಗಳು ಪ್ರತಿಭಟನೆ ನಡೆಸಿದರು. ಈ ಸಮಯದಲ್ಲಿ, ಅವರು ‘ಜೈ ಶ್ರೀರಾಮ್’ ಮತ್ತು ‘ಹರ್ ಹರ್ ಮಹದೇವ್’ ಘೋಷಣೆಯನ್ನೂ ಕೂಗಿದರು.

ಹಿಂದೂ ಮಹಾಸಾಗರದಲ್ಲಿ ಉಷ್ಣತೆಯ ಹೆಚ್ಚಳದಿಂದ ಭಾರತದಲ್ಲಿ ಪ್ರವಾಹ ಪರಿಸ್ಥಿತಿ ಉದ್ಭವಿಸಬಹುದು ! – ವಿಶ್ವಸಂಸ್ಥೆಯ ವರದಿ

ವಿಶ್ವಸಂಸ್ಥೆಯ ‘ಇಂಟರಗವರ್ನಮೇಂಟಲ ಪನೇಲ ಆನ ಕ್ಲೈಮೇಟ ಚೇಂಜ’ನ (‘ಐ.ಪಿ.ಸಿ.ಸಿ.’ಯ) ೬ ನೇ ವರದಿ ‘ಕ್ಲೈಮೆಟ್ ಚೆಂಜ್ ೨೦೨೧ – ದಿ ಫಿಜಿಕಲ್ ಸೈನ್ಸ್ ಬೇಸಿಸ್’ ಪ್ರಕಟಿಸಲಾದಗಿದೆ. ಹಿಂದೂ ಮಹಾಸಾಗರದ ಉಷ್ಣತೆಯು ಹೆಚ್ಚಾಗುವುದರಿಂದ ಸಮುದ್ರದ ಮಟ್ಟ ಹೆಚ್ಚಾಗುತ್ತದೆ ಮತ್ತು ಕರಾವಳಿ ಪ್ರದೇಶಗಳಲ್ಲಿ ಆಗಾಗ ಪ್ರವಾಹ ಉಂಟಾಗುತ್ತದೆ ಎಂದು ಹೇಳಲಾಗಿದೆ.

ಮಹಂತ್ ಶ್ರೀ ಕಿಶೋರ ಪುರಿ ಮಹಾರಾಜರ ದೇಹತ್ಯಾಗದ ನಂತರ ಮೆಹಂದಿಪುರ ಬಾಲಾಜಿ ದೇವಸ್ಥಾನವನ್ನು ಸರಕಾರಿಕಣಗೊಳಿಸುವ ಸಿದ್ಧತೆಯಲ್ಲಿರುವ ರಾಜಸ್ಥಾನದ ಕಾಂಗ್ರೆಸ್ ಸರಕಾರ !

ಇಲ್ಲಿನ ಪ್ರಸಿದ್ಧ ಮೆಹಂದೀಪುರ ಬಾಲಾಜಿ ದೇವಸ್ಥಾನದ ಮಹಾಂತರಾದ ಶ್ರೀ ಕಿಶೋರ್ ಪುರಿ ಮಹಾರಾಜರು ದೇಹತ್ಯಾಗ ಮಾಡಿದ ನಂತರ, ಈ ದೇವಸ್ಥಾನದ ಸರಕಾರಿಕರಣ ಮಾಡುವ ತಯಾರಿ ಆರಂಭವಾಗಿದೆ ಎಂದು ಹೇಳಲಾಗುತ್ತಿದೆ.

ಕೊಡಗಿನಲ್ಲಿರುವ ‘ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನ’ಕ್ಕೆ ‘ಫೀಲ್ಡ್ ಮಾರ್ಷಲ್ ಕಾರಿಯಪ್ಪ’ ಹೆಸರಿಡುವಂತೆ ಬೇಡಿಕೆ

ಸ್ಥಳಿಯರು ಕರ್ನಾಟಕದ ಮುಖ್ಯಮಂತ್ರಿ ಮತ್ತು ಪ್ರಧಾನಿ ಕಾರ್ಯಾಲಯಕ್ಕೆ ಪತ್ರ ಬರೆಯುವ ಮೂಲಕ ‘ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನ’ದ ಹೆಸರು ಬದಲಾಯಿಸಿ ‘ಫೀಲ್ಡ್ ಮಾರ್ಷಲ್ ಕಾರಿಯಪ್ಪ ರಾಷ್ಟ್ರೀಯ ಉದ್ಯಾನವನ’ ಎಂದು ಮರುನಾಮಕರಣ ಮಾಡುವಂತೆ ಒತ್ತಾಯಿಸಿದ್ದಾರೆ.

ದೆಹಲಿಯಲ್ಲಿ ಬ್ರಿಟಿಷ್ ಕಾಲದ ಕಾನೂನುಗಳನ್ನು ರದ್ದುಗೊಳಿಸುವಂತೆ ‘ಭಾರತ್ ಜೊಡೋ ಆಂದೋಲನ’ವನ್ನು ಆಯೋಜಿಸಲಾಗಿತ್ತು !

ಇಲ್ಲಿಯ ಜಂತರ್ ಮಂತರ್ ಪ್ರದೇಶದಲ್ಲಿ ಆಗಸ್ಟ್ ೮ ರಂದು ದೇಶದಲ್ಲಿ ಬ್ರಿಟೀಷರ ಕಾಲದ ಕಾನೂನುಗಳನ್ನು ರದ್ದುಗೊಳಿಸಲು ಆಯೋಜಿಸಲಾಗಿದ್ದ ‘ಭಾರತ್ ಜೊಡೋ ಆಂದೋಲನ’ದಲ್ಲಿ ಒಂದು ನಿರ್ದಿಷ್ಟ ಧರ್ಮದ ವಿರುದ್ಧ ತಥಾಕಥಿತ ಪ್ರಚೋದನಕಾರಿ ಘೋಷಣೆ ನೀಡಿದ ಆರೋಪದಲ್ಲಿ ಪೊಲೀಸರು ಆರು ಜನರನ್ನು ಬಂಧಿಸಿದ್ದಾರೆ.

ಭಾರತದಲ್ಲಿ ವಿವಾಹದ ಅಂತರ್ಗತ ಬಲಾತ್ಕಾರಕ್ಕೆ ಶಿಕ್ಷೆ ಇಲ್ಲ ! – ಕೇರಳ ಉಚ್ಚ ನ್ಯಾಯಾಲಯ

ಭಾರತದಲ್ಲಿ ವಿವಾಹದ ಅಂತರ್ಗತ ಬಲಾತ್ಕಾರಕ್ಕೆ ಶಿಕ್ಷೆ ಇಲ್ಲದಿದ್ದರೂ ಆ ಸಂದರ್ಭದಲ್ಲಿ ವಿವಾಹ ವಿಚ್ಛೇದನೆಗಾಗಿ ಖಚಿತವಾಗಿಯೂ ಅವಕಾಶ ನೀಡಬಹುದಾಗಿದೆ, ಎಂದು ಕೇರಳ ಉಚ್ಚ ನ್ಯಾಯಾಲಯವು ಹೇಳಿದೆ. ಇದೇ ವೇಳೆಗೆ ವಿವಾಹ ಕಾನೂನಿನಲ್ಲಿ ಸುಧಾರಣೆ ಮಾಡುವ ಆವಶ್ಯಕತೆ ಇದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಜಮಶೇದಪುರದಲ್ಲಿ ಗಿಡ ನೆಡುವ ಕಾರ್ಯಕ್ರಮದಲ್ಲಿ ಸನಾತನ ಸಂಸ್ಥೆಯ ಸಹಭಾಗ !

ಇಲ್ಲಿನ ಬಿರಸಾನಗರದ ಭಾಗದಲ್ಲಿರುವ ಶ್ರೀ ಹನುಮಾನ ದೇವಾಲಯದ ವತಿಯಿಂದ ದೇವಾಲಯದ ಪರಿಸರದಲ್ಲಿ ಇತ್ತೀಚೆಗಷ್ಟೇ ಗಿಡ ನೆಡುವ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಇದರಲ್ಲಿ ಸನಾತನ ಸಂಸ್ಥೆಯ ಶ್ರೀ. ಸುದಾಮಾ ಶರ್ಮಾ ಹಾಗೂ ಶ್ರೀ. ಬಿ. ಭೀ. ಕೃಷ್ಣಾ ರವರು ಗಿಡ ನೆಟ್ಟರು.

ದೆಹಲಿಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಾಂಬ್‌ ಬೆದರಿಕೆ !

ಹೊಸ ದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸ್ಫೋಟಿಸುವುದಾಗಿ ಬೆದರಿಕೆ ಒಡ್ಡುವ ಈ-ಮೇಲ್ ಅಲ್-ಕೈದಾದ ಓರ್ವ ಭಯೋತ್ಪಾದಕನಿಂದ ಬಂದಿರುವುದಾಗಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಫಘಾನ ಸೈನ್ಯದ ಕಾರ್ಯಾಚರಣೆಯಲ್ಲಿ ೩೮೫ ತಾಲಿಬಾನಿಗಳ ಮಾರಣಹೋಮ !

ಅಗಸ್ಟ ೬ ರಂದು ನಡೆಸಿದ ಕಾರ್ಯಾಚರಣೆಯಲ್ಲಿ ಅಫಘಾನ ಸೈನ್ಯ ಪಡೆಗಳು ೩೮೫ ತಾಲಿಬಾನಿ ಭಯೋತ್ಪಾದಕರನ್ನು ಹೊಡೆದುರುಳಿಸಿ, ೨೧೦ ಇತರರನ್ನು ಗಾಯಗೊಳಿಸಿವೆ. ಸತ್ತ ಭಯೋತ್ಪಾದಕರಲ್ಲಿ ೩೦ ಪಾಕಿಸ್ತಾನಿಯರೂ ಸೇರಿದ್ದಾರೆ.