ಕೊಡಗಿನಲ್ಲಿರುವ ‘ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನ’ಕ್ಕೆ ‘ಫೀಲ್ಡ್ ಮಾರ್ಷಲ್ ಕಾರಿಯಪ್ಪ’ ಹೆಸರಿಡುವಂತೆ ಬೇಡಿಕೆ

ವಾಸ್ತವದಲ್ಲಿ ಇಂತಹ ಬೇಡಿಕೆಗಳನ್ನು ದೇಶಭಕ್ತರು ಮುಂದಿಡುವಂತೆ ಆಗಬಾರದು. ಸರಕಾರ ಸ್ವತಃ ಇಂತಹ ಕ್ರಮ ಕೈಗೊಳ್ಳುವ ಅಪೇಕ್ಷೆ ಇದೆ !

ಕೊಡಗು – ಸ್ಥಳಿಯರು ಕರ್ನಾಟಕದ ಮುಖ್ಯಮಂತ್ರಿ ಮತ್ತು ಪ್ರಧಾನಿ ಕಾರ್ಯಾಲಯಕ್ಕೆ ಪತ್ರ ಬರೆಯುವ ಮೂಲಕ ‘ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನ’ದ ಹೆಸರು ಬದಲಾಯಿಸಿ ‘ಫೀಲ್ಡ್ ಮಾರ್ಷಲ್ ಕಾರಿಯಪ್ಪ ರಾಷ್ಟ್ರೀಯ ಉದ್ಯಾನವನ’ ಎಂದು ಮರುನಾಮಕರಣ ಮಾಡುವಂತೆ ಒತ್ತಾಯಿಸಿದ್ದಾರೆ. ಫೀಲ್ಡ್ ಮಾರ್ಶಲ್ ಕೆ.ಎಮ್. ಕಾರಿಯಪ್ಪ ಇವರು ಕೊಡಗಿನವರಾಗಿದ್ದರು. ಇಲ್ಲಿಯ ದೇಶಪ್ರೇಮಿ ನವೀನ್ ಮಾದಪ್ಪ ಮತ್ತು ವಿನಯ ಕಾಯಪಂಡಾ ಇವರು ಪತ್ರ ಕಳುಹಿಸಿದ್ದು ಇದರಲ್ಲಿ ೬,೦೦೦ ಕ್ಕೂ ಹೆಚ್ಚು ಜನರು ಸಹಿ ಮಾಡಿದ್ದಾರೆ.

ಫೀಲ್ಡ್ ಮಾರ್ಷಲ್ ಕಾರಿಯಪ್ಪ ಭಾರತೀಯ ಸೇನೆಯ ಮೊದಲ ಭಾರತೀಯ ಕಮಾಂಡರ್-ಇನ್-ಚೀಫ್ ಆಗಿದ್ದರು. ಇವರು ೧೯೪೭ ರಲ್ಲಿ ಭಾರತ ಮತ್ತು ಪಾಕ್ ಯುದ್ಧದ ಸಮಯದಲ್ಲಿ ಪಶ್ಚಿಮ ಗಡಿಯಲ್ಲಿ ನೇತೃತ್ವ ವಹಿಸಿದ್ದರು.