ಕೈಯಲ್ಲಿ ಕೇಸರಿ ಧ್ವಜಗಳನ್ನು ಹಿಡಿದು ‘ಜೈ ಶ್ರೀರಾಮ್’ ಮತ್ತು ‘ಹರ್ ಹರ್ ಮಹಾದೇವ್’ ನ ಘೋಷಣೆ !
ಎಲ್ಲಿ ಇಸ್ಲಾಮಿಕ್ ದೇಶಗಳಲ್ಲಿ ಧರ್ಮಹಾನಿಯನ್ನು ತಡೆಯಲು ಒಗ್ಗಟ್ಟಾಗಿರುವ ಧರ್ಮಾಭಿಮಾನಿ ಹಿಂದೂಗಳು ಮತ್ತು ಎಲ್ಲಿ ಹಿಂದೂಬಹುಸಂಖ್ಯಾತವಿರುವ ಭಾರತದಲ್ಲಿ ವಿವಿಧ ಮಾಧ್ಯಮಗಳಿಂದ ಧರ್ಮಹಾನಿಯಾಗುತ್ತಿದ್ದರೂ ಅದನ್ನು ವಿರೋಧಿಸದ ಜನ್ಮಹಿಂದೂಗಳು !
ಕರಾಚಿ (ಪಾಕಿಸ್ತಾನ) – ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಕೆಲವು ದಿನಗಳ ಹಿಂದೆ ಶ್ರೀ ಗಣಪತಿ ದೇವಸ್ಥಾನವನ್ನು ಧ್ವಂಸ ಮಾಡಿರುವುದನ್ನು ವಿರೋಧಿಸಿ ಪಾಕಿಸ್ತಾನದ ಕರಾಚಿಯಲ್ಲಿ ವಾಸಿಸುತ್ತಿದ್ದ ಅಲ್ಪಸಂಖ್ಯಾತ ಹಿಂದೂಗಳು ಪ್ರತಿಭಟನೆ ನಡೆಸಿದರು. ಈ ಸಮಯದಲ್ಲಿ, ಅವರು ‘ಜೈ ಶ್ರೀರಾಮ್’ ಮತ್ತು ‘ಹರ್ ಹರ್ ಮಹದೇವ್’ ಘೋಷಣೆಯನ್ನೂ ಕೂಗಿದರು. ಕೇಸರಿ ಧ್ವಜಗಳ ಸಹಿತ ‘ನಮಗೆ ನ್ಯಾಯ ಬೇಕು’ ಎಂಬ ವಾಕ್ಯವಿರುವ ಫಲಕಗಳನ್ನು ಸಹ ಹಿಡಿದಿದ್ದರು. ನಗರದ ಪ್ರೆಸ್ ಕ್ಲಬ್ ಹೊರಗೆ ಹಿಂದೂಗಳು ಪ್ರತಿಭಟನೆ ನಡೆಸಿದರು. ಈ ಸಮಯದಲ್ಲಿ ಸಿಕ್ಖ್, ಪಾರ್ಸಿ, ಕ್ರೈಸ್ತ ಮತ್ತು ಇತರ ಸಮುದಾಯದ ಜನರು ಕೂಡ ಸಹಭಾಗಿಯಾಗಿದ್ದರು.
कराची में जमकर ‘जय श्री राम’ और ‘हर-हर महादेव’ के नारे लगाए गए #Pakistan @anilontwiitter https://t.co/2JdFVjseEu
— AajTak (@aajtak) August 9, 2021
ಇಸ್ಲಾಂ ಧರ್ಮವನ್ನು ಅವಮಾನಿಸುವವರನ್ನು ಗಲ್ಲು ಶಿಕ್ಷೆ ನೀಡಲಾಗುತ್ತದೆ, ಅದೇ ರೀತಿ ಹಿಂದೂ ಧರ್ಮವನ್ನು ಅವಮಾನಿಸುವವರನ್ನು ಗಲ್ಲಿಗೇರಿಸಬೇಕು ! – ಕರಾಚಿಯ ಪ್ರಸಿದ್ಧ ಪ್ರಾಚೀನ ಹನುಮಾನ ದೇವಾಲಯದ ಮುಖ್ಯ ಪುರೋಹಿತ ರಾಮನಾಥ ಮಿಶ್ರಾ ಮಹಾರಾಜ್
ಕರಾಚಿಯಲ್ಲಿ ಪ್ರಸಿದ್ಧವಿರುವ ಪ್ರಾಚೀನ ಹನುಮಾನ್ ದೇವಾಲಯದ ಮುಖ್ಯ ಪುರೋಹಿತರಾದ ರಾಮನಾಥ ಮಿಶ್ರಾ ಮಹಾರಾಜ ಇವರೂ ಆಂದೋಲನದಲ್ಲಿ ಪಾಲ್ಗೊಂಡಿದ್ದರು. ಈ ಸಮಯದಲ್ಲಿ ಅವರು ಮಾತನಾಡುತ್ತಾ, ಶ್ರೀ ಗಣಪತಿ ದೇವಸ್ಥಾನವನ್ನು ಗೂಂಡಾಗಳು ಧ್ವಂಸ ಮಾಡಿದ ಕೃತ್ಯವನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಯಾವ ರೀತಿ ಇಸ್ಲಾಂನಲ್ಲಿ ಧರ್ಮವನ್ನು ಅವಮಾನಿಸುವವರಿಗೆ ಗಲ್ಲು ಶಿಕ್ಷೆ ಅಥವಾ ಜೀವಾವಧಿ ಶಿಕ್ಷೆ ವಿಧಿಸಲಾಗುತ್ತದೆ, ಹಾಗೆಯೇ ನಮ್ಮ ಧರ್ಮವನ್ನು ಅವಮಾನಿಸಿದವರಿಗೆ ಶಿಕ್ಷೆಯಾಗಬೇಕು ಎಂದು ಹೇಳಿದರು.
ಭಾರತದಲ್ಲಿ ಮುಸಲ್ಮಾನರು ಸಂತೋಷದಿಂದ ಬದುಕುತ್ತಾರೆ ! – ಕರಾಚಿಯ ಮುಫ್ತಿ ಫೈಸಲ್
ಈ ಆಂದೋಲನದಲ್ಲಿ ಕರಾಚಿಯ ಮುಫ್ತಿ (ಶರಿಯತ ಕಾನೂನನ್ನು ಅರಿತಿರುವ ವಿದ್ವಾಂಸ) ಫೈಸಲ್ ಕೂಡ ಭಾಗವಹಿಸಿದ್ದರು. ಅವರು, ನಾನು ಮುಸಲ್ಮಾನನಾಗಿದ್ದೇನೆ; ಆದರೆ ‘ಸಮಾಜದಲ್ಲಿ ಯಾವುದೇ ದ್ವೇಷ ನಿರ್ಮಾಣವಾಗುವ ಪ್ರಸಂಗ ನಡೆಯಬಾರದು’, ಎಂದು ನನಗೆ ಅನಿಸುತ್ತದೆ. ಇಂದಿಗೂ ಭಾರತದಲ್ಲಿ ಮುಸಲ್ಮಾನರು ಅಲ್ಪಸಂಖ್ಯಾತರಾಗಿದ್ದಾರೆ. ನನ್ನ ಅನೇಕ ಸಂಬಂಧಿಕರು ಭಾರತದ ವಿವಿಧ ನಗರಗಳಲ್ಲಿ ವಾಸಿಸುತ್ತಿದ್ದಾರೆ ಮತ್ತು ಅಲ್ಲಿ ಎಲ್ಲರೂ ಸಂತೋಷವಾಗಿದ್ದಾರೆ. (ಭಾರತದಲ್ಲಿ ಕಪಟ ಜಾತ್ಯತೀತವಾದಿಗಳು ಮತ್ತು ಪ್ರಗತಿ(ಅಧೋಗತಿ)ಪರರಿಗೆ ಕಪಾಳಮೋಕ್ಷ ! ‘ಭಾರತದಲ್ಲಿ ಹಿಂದುತ್ವನಿಷ್ಠ ಸಂಘಟನೆಗಳು ಮುಸಲ್ಮಾನರನ್ನು ಹಿಂಸಿಸುತ್ತಾರೆ’, ಎಂದು ಡೋಂಗಿ ಜಾತ್ಯತೀತರು ಯಾವಾಗಲೂ ಕೂಗಾಡುತ್ತಿರುತ್ತಾರೆ. ಅವರು ಈಗ ಮುಫ್ತಿ ಫೈಸಲ್ ಇವರ ಹೇಳಿಕೆ ಬಗ್ಗೆ ಬಾಯಿ ಬಿಡಬೇಕು ಮತ್ತು ಪಾಕಿಸ್ತಾನದಲ್ಲಿನ ಹಿಂದೂಗಳ ರಕ್ಷಣೆಗಾಗಿ ಧ್ವನಿ ಎತ್ತಬೇಕು, ಆಗ ಮಾತ್ರ ಇವರು ನಿಜವಾದ ಜಾತ್ಯತೀತವಾದಿಗಳೆಂದು, ಸಾಬೀತಾಗುತ್ತದೆ ! – ಸಂಪಾದಕರು)