ಗಾಜಿಯಾಬಾದ್ (ಉತ್ತರ ಪ್ರದೇಶ) ದ ಪ್ರಸಿದ್ಧ ಶ್ರೀ ಡಾಸನಾ ದೇವಿ ದೇವಸ್ಥಾನಕ್ಕೆ ನುಗ್ಗಿ ಸಾಧು ಮೇಲೆ ಮಾರಣಾಂತಿಕ ಹಲ್ಲೆ

  • ದೇವಸ್ಥಾನಕ್ಕೆ ಮೊದಲಿನಿಂದಲೂ ಪೊಲೀಸ್ ಭದ್ರತೆ ಇರುವಾಗ ಇಂತಹ ದಾಳಿ ಹೇಗೆ ನಡೆಯುತ್ತದೆ ?
  • ಉತ್ತರ ಪ್ರದೇಶದಲ್ಲಿ ಕಳೆದ ಕೆಲವು ತಿಂಗಳುಗಳಲ್ಲಿ ಅನೇಕ ಸಾಧುಗಳ ಹತ್ಯೆ ಮಾಡಲಾಗಿದೆ. ಇದರಿಂದ ಪೊಲೀಸರ ನಿಷ್ಕ್ರಿಯತೆ ಎದ್ದು ಕಾಣುತ್ತದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈ ಬಗ್ಗೆ ಗಮನ ಹರಿಸಬೇಕು ಮತ್ತು ಸಾಧುಗಳನ್ನು ರಕ್ಷಿಸಲು ಪ್ರಯತ್ನಿಸಬೇಕು ಎಂದು ಹಿಂದೂಗಳಿಗೆ ಅನಿಸುತ್ತದೆ !

ಗಾಜಿಯಾಬಾದ್ (ಉತ್ತರ ಪ್ರದೇಶ) – ಸ್ಥಳೀಯ ಪ್ರಸಿದ್ಧ ಶ್ರೀ ಡಾಸನಾ ದೇವಿಯ ದೇವಸ್ಥಾನದಲ್ಲಿ ಬಿಹಾರದ ಸಾಧು, ಅದೇ ರೀತಿ ದೇವಸ್ಥಾನದ ಮಹಂತ ಯತಿ ನರಸಿಂಹಾನಂದ ಸರಸ್ವತಿ ಇವರ ಸಹಕಾರಿ ನರೇಶ್ ಆನಂದ ಸರಸ್ವತಿಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಗಿದೆ. ಇದರಲ್ಲಿ ಅವರು ತೀವ್ರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ದಾಳಿಯ ಹಿಂದಿನ ಉದ್ದೇಶ ಇನ್ನೂ ಸ್ಪಷ್ಟವಾಗಿಲ್ಲ. ಈ ಹಿಂದೆ, ಮಹಂತ್ ಯತಿ ನರಸಿಂಹಾನಂದ ಸರಸ್ವತಿಯ ಮೇಲೆ ದಾಳಿ ಮಾಡಲು ಇಬ್ಬರು ದೇವಸ್ಥಾನಕ್ಕೆ ಬಂದಿರುವ ಘಟನೆ ನಡೆದಿತ್ತು. ಈ ದೇವಸ್ಥಾನಕ್ಕೆ ಮೊದಲಿನಿಂದಲೂ ಪೊಲೀಸ್ ಭದ್ರತೆ ಇದೆ. (ಹೀಗಿದ್ದಲ್ಲಿ, ಪೊಲೀಸರು ನಿದ್ರೆ ಮಾಡುತ್ತಿದ್ದರೇ ? – ಸಂಪಾದಕ)

೧. ದೇವಾಲಯದ ರಕ್ಷಣಾ ಗೋಡೆಯನ್ನು ದಾಟಿ ದೇವಸ್ಥಾನದಲ್ಲಿ ನುಗ್ಗಿದ ಅಪರಿಚಿತ ದುಷ್ಕರ್ಮಿ ಚಾಕೂವಿನಿಂದ ನರೇಶ ಆನಂದ ಸರಸ್ವತಿಯ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಹೇಳಲಾಗುತ್ತಿದೆ. ಈ ಘಟನೆ ಮುಂಜಾನೆ ೩.೪೫ ರ ಸುಮಾರಿಗೆ ನಡೆದಿದೆ. ನರೇಶ ಆನಂದ ಸರಸ್ವತಿಯವರು ಒಂದು ಕಾರ್ಯಕ್ರಮಕ್ಕಾಗಿ ಬಿಹಾರದ ಸಮಸ್ತಿಪುರದಿಂದ ಶ್ರೀ ಡಾಸನಾ ದೇವಿ ದೇವಸ್ಥಾನಕ್ಕೆ ಬಂದಿದ್ದರು. ಅವರು ದೇವಾಲಯದ ಹೊರಾಂಗಣದಲ್ಲಿ ಮಲಗಿದ್ದರು. ಆಗ ಈ ದಾಳಿ ನಡೆದಿದೆ.

೨. ಈ ಘಟನೆ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ದಾಳಿ ನಡೆಸಲು ಬಂದಿದ್ದ ವ್ಯಕ್ತಿ ಹೊರಗಿನಿಂದ ಬಂದಿದ್ದಾನೆಯೇ ಅಥವಾ ಸುತ್ತಮುತ್ತಲಿನ ಪರಿಸರದಿಂದ ಬಂದಿದ್ದಾನೆಯೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.