ದೆಹಲಿಯಲ್ಲಿ ಬ್ರಿಟಿಷ್ ಕಾಲದ ಕಾನೂನುಗಳನ್ನು ರದ್ದುಗೊಳಿಸುವಂತೆ ‘ಭಾರತ್ ಜೊಡೋ ಆಂದೋಲನ’ವನ್ನು ಆಯೋಜಿಸಲಾಗಿತ್ತು !

ತಥಾಕಥಿತ ಧರ್ಮವಿರೋಧಿ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕ ನ್ಯಾಯವಾದಿ (ಶ್ರೀ.) ಅಶ್ವಿನಿ ಉಪಾಧ್ಯಾಯ ಸೇರಿದಂತೆ ೬ ಜನರ ಬಂಧನ

ನವ ದೆಹಲಿ – ಇಲ್ಲಿಯ ಜಂತರ್ ಮಂತರ್ ಪ್ರದೇಶದಲ್ಲಿ ಆಗಸ್ಟ್ ೮ ರಂದು ದೇಶದಲ್ಲಿ ಬ್ರಿಟೀಷರ ಕಾಲದ ಕಾನೂನುಗಳನ್ನು ರದ್ದುಗೊಳಿಸಲು ಆಯೋಜಿಸಲಾಗಿದ್ದ ‘ಭಾರತ್ ಜೊಡೋ ಆಂದೋಲನ’ದಲ್ಲಿ ಒಂದು ನಿರ್ದಿಷ್ಟ ಧರ್ಮದ ವಿರುದ್ಧ ತಥಾಕಥಿತ ಪ್ರಚೋದನಕಾರಿ ಘೋಷಣೆ ನೀಡಿದ ಆರೋಪದಲ್ಲಿ ಪೊಲೀಸರು ಆರು ಜನರನ್ನು ಬಂಧಿಸಿದ್ದಾರೆ. ಇದರಲ್ಲಿ ಈ ಆಂದೋಲನದ ಆಯೋಜಕರಲ್ಲಿ ಒಬ್ಬರಾದ ಬಿಜೆಪಿ ನಾಯಕ ಮತ್ತು ಸರ್ವೋಚ್ಚ ನ್ಯಾಯಾಲಯದಲ್ಲಿನ ನ್ಯಾಯವಾದಿ (ಶ್ರೀ.) ಅಶ್ವಿನಿ ಉಪಾಧ್ಯಾಯ ಸೇರಿದ್ದಾರೆ. ಇವರಲ್ಲದೆ ವಿನೋದ ಶರ್ಮಾ, ದೀಪಕ್ ಸಿಂಗ್, ದೀಪಕ್, ವಿನೀತ್ ಕ್ರಾಂತಿ ಮತ್ತು ಪ್ರೀತ ಸಿಂಗ್ ಅವರನ್ನು ಬಂಧಿಸಲಾಗಿದೆ. ಪ್ರೀತ ಸಿಂಗ್ ಇವರು ‘ಸೇವ್ ಇಂಡಿಯಾ ಫೌಂಡೇಶನ್’ನ ಸಂಚಾಲಕರಾಗಿದ್ದಾರೆ. ದೆಹಲಿ ಪೊಲೀಸರು ಬೆಳಗ್ಗೆಯಿಂದ ವಿಚಾರಣೆ ನಡೆಸಿದ ನಂತರ ಆಗಸ್ಟ್ ೧೦ ರಂದು ಎಲ್ಲರನ್ನೂ ಬಂಧಿಸಿದರು. ಅದೇ ರೀತಿ ಪೊಲೀಸರು ಹಿಂದೂ ರಕ್ಷಾ ದಳದ ಶ್ರೀ. ಪಿಂಕಿ ಚೌಧರಿಯವರನ್ನು ಹುಡುಕುತ್ತಿದ್ದಾರೆ. ಇವರೆಲ್ಲರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ ೧೫೩ ಎ ಮತ್ತು ೧೮೮ ರ ಅಡಿಯಲ್ಲಿ ಅಪರಾಧವನ್ನು ದಾಖಲಿಸಲಾಗಿದೆ. ಆಂದೋಲನದ ಸಮಯದಲ್ಲಿ ಉಪಸ್ಥಿತರು ನಿರ್ದಿಷ್ಟ ಧರ್ಮದ ವಿರುದ್ಧ ಘೋಷಣೆಗಳನ್ನು ಕೂಗುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾದ ನಂತರ ಪೊಲೀಸರು ಅಪರಾಧ ದಾಖಲಿಸಿದ್ದಾರೆ.
ಈ ಕುರಿತು ಆಂದೋಲನದ ಪ್ರಸಾರಮಾಧ್ಯಮ ಉಸ್ತುವಾರಿ ಕ್ಷಿಪ್ರಾ ಶ್ರೀವಾಸ್ತವ ಇವರು, ಆಂದೋಲನದ ನೇತೃತ್ವವನ್ನು ನ್ಯಾಯವಾದಿ (ಶ್ರೀ.) ಅಶ್ವಿನಿ ಉಪಾಧ್ಯಾಯ ವಹಿಸಿದ್ದರು; ಆದರೆ ಅವರಿಗೆ ಧರ್ಮವಿರೋಧಿ ಘೋಷಣೆಗಳನ್ನು ನೀಡುವವರೊಂದಿಗೆ ಯಾವುದೇ ಸಂಬಂಧ ಇರುವುದನ್ನು ನಿರಾಕರಿಸಿದ್ದಾರೆ.

ವೀಡಿಯೊದ ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕು ! – ನ್ಯಾಯವಾದಿ (ಶ್ರೀ.) ಅಶ್ವಿನಿ ಉಪಾಧ್ಯಾಯ

ನ್ಯಾಯವಾದಿ (ಶ್ರೀ.) ಅಶ್ವಿನಿ ಉಪಾಧ್ಯಾಯ

ಬಂಧನದ ಮೊದಲು, ನ್ಯಾಯವಾದಿ (ಶ್ರೀ.) ಅಶ್ವಿನಿ ಉಪಾಧ್ಯಾಯ ಅವರು ಮಾತನಾಡುತ್ತಾ, ವಿಡಿಯೋದ ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕು. ಇದರಲ್ಲಿ ಸತ್ಯಾಂಶವಿದ್ದರೆ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಬೇಕು. ವೀಡಿಯೊ ನಕಲಿಯಾಗಿದ್ದರೆ, ಅದನ್ನು ನಿರ್ಮಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ನಾನು ಈ ವಿಡಿಯೋವನ್ನು ಹಲವು ಬಾರಿ ನೋಡಿದ್ದೇನೆ; ಆದರೆ ಆ ಘೋಷಣೆಯನ್ನು ಕೂಗುತ್ತಿರುವವರು ಪತ್ತೆಯಾಗುತ್ತಿಲ್ಲ. ಪೊಲೀಸರು ಈ ಬಗ್ಗೆ ತನಿಖೆ ನಡೆಸಿ ಅದರ ವಿರುದ್ಧ ಕ್ರಮ ಕೈಗೊಳ್ಳಬೇಕು. ವಿಚಾರಣೆ ನಡೆಸಿದರೆ, ನಾವು ಕೂಡ ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತೇವೆ. ನನ್ನ ಆರೋಗ್ಯ ಸರಿಯಿಲ್ಲದಿದ್ದರೂ, ಪೊಲೀಸರು ಹೇಳಿದ ನಂತರ ನಾನು ವಿಚಾರಣೆಗೆ ತಲುಪಿದ್ದೇನೆ. ನಮ್ಮ ಏಕೈಕ ತಪ್ಪು ಎಂದರೆ ನಾವು ‘ಭಾರತ ಛೋಡೋ ದಿನ’ ಆಚರಿಸಲು ಮತ್ತು ಬ್ರಿಟಿಷ್ ಕಾನೂನನ್ನು ಆಕ್ಷೇಪಿಸಲು ಹೋಗಿದ್ದೆವು ಎಂದು ಹೇಳಿದರು.