ಮಹಂತ್ ಶ್ರೀ ಕಿಶೋರ ಪುರಿ ಮಹಾರಾಜರ ದೇಹತ್ಯಾಗದ ನಂತರ ಮೆಹಂದಿಪುರ ಬಾಲಾಜಿ ದೇವಸ್ಥಾನವನ್ನು ಸರಕಾರಿಕಣಗೊಳಿಸುವ ಸಿದ್ಧತೆಯಲ್ಲಿರುವ ರಾಜಸ್ಥಾನದ ಕಾಂಗ್ರೆಸ್ ಸರಕಾರ !

ಆಡಳಿತ ನಿರ್ವಹಿಸಲು ಯಾರೂ ಜವಾಬ್ದಾರರಿಲ್ಲದ್ದರಿಂದ ಸರಕಾರವು ದೇವಸ್ಥಾನವನ್ನು ಸರಕಾರಿಕರಣಗೊಳಿಸಲಿದೆ !

  • ದೇವಸ್ಥಾನವನ್ನು ನಿರ್ವಹಿಸಲು, ಭಕ್ತರೇ ಸ್ವತಃ ಮುಂದಾಗಿ ‘ದೇವಸ್ಥಾನಗಳು ಭಕ್ತರ ನಿಯಂತ್ರಣದಲ್ಲಿರಬೇಕೇ ಹೊರತು ಸರಕಾರದ ನಿಯಂತ್ರಣದಲ್ಲಿ ಅಲ್ಲ’, ಎಂದು ಕಾಂಗ್ರೆಸ್ ಸರಕಾರಕ್ಕೆ ತೋರಿಸಿಕೊಡಬೇಕು. ಅದಕ್ಕಾಗಿ ಧಾರ್ಮಿಕ ಸಂಸ್ಥೆಗಳೂ ನೇತೃತ್ವವನ್ನು ವಹಿಸಬೇಕು!
  • ಹಿಂದೂದ್ವೇಷಿ ಕಾಂಗ್ರೆಸ್ ಸರಕಾರದಿಂದ ಇನ್ನೇನು ನಿರೀಕ್ಷಿಸಬಹುದು ?

ಜೈಪುರ (ರಾಜಸ್ಥಾನ) – ಇಲ್ಲಿನ ಪ್ರಸಿದ್ಧ ಮೆಹಂದೀಪುರ ಬಾಲಾಜಿ ದೇವಸ್ಥಾನದ ಮಹಾಂತರಾದ ಶ್ರೀ ಕಿಶೋರ್ ಪುರಿ ಮಹಾರಾಜರು ದೇಹತ್ಯಾಗ ಮಾಡಿದ ನಂತರ, ಈ ದೇವಸ್ಥಾನದ ಸರಕಾರಿಕರಣ ಮಾಡುವ ತಯಾರಿ ಆರಂಭವಾಗಿದೆ ಎಂದು ಹೇಳಲಾಗುತ್ತಿದೆ. ಮಹಂತ ಶ್ರೀ ಕಿಶೋರ್ ಪುರಿ ಮಹಾರಾಜರ ನಂತರ ದೇವಸ್ಥಾನವನ್ನು ನೋಡಿಕೊಳ್ಳಲು ಯಾರೂ ಇಲ್ಲ, ಆದ್ದರಿಂದ ಸರಕಾರವು ಈ ದೇವಸ್ಥಾನವನ್ನು ಸರಕಾರೀಕರಣಗೊಳಿಸಲು ಯೋಚಿಸುತ್ತಿದೆ. ಮಹಂತ ಶ್ರೀ ಕಿಶೋರ್ ಪುರಿ ಮಹಾರಾಜ ಅನಾರೋಗ್ಯದಿಂದ ಬಳಲುತ್ತಿದ್ದಾಗ ದೇವಸ್ಥಾನದ ನಿರ್ವಹಣೆಗೆ ಸಂಬಂಧಿಸಿದಂತೆ ಸರಕಾರಕ್ಕೆ ದೂರು ನೀಡಿದ್ದರಿಂದ ಸರಕಾರವು ಈ ಬಗ್ಗೆ ವಿಚಾರ ಮಾಡುತ್ತಿದೆ. (ಕಾಂಗ್ರೆಸ್ ಕೇಂದ್ರದಲ್ಲಿ ಆಡಳಿತದಲ್ಲಿರುವಾಗ ಅದೇ ರೀತಿ ಇತರ ರಾಜ್ಯಗಳಲ್ಲಿಯೂ ಕಾಂಗ್ರೆಸ್‌ನ ಅವ್ಯವಸ್ಥೆ ಹಾಗೂ ಭ್ರಷ್ಟ ವ್ಯವಹಾರಗಳ ಬಗ್ಗೆ ಜನರಿಂದ ದೂರುಗಳು ಬಂದಿದ್ದವು. ಯಾವ ನಿಯಮವನ್ನು ದೇವಸ್ಥಾನವನ್ನು ಸ್ವಾಧೀನಗೊಳಿಸಲು ಕಾಂಗ್ರೆಸ್ ಸರಕಾರ ಪ್ರಯತ್ನಿಸುತ್ತಿದೆ ಅದೇ ನಿಯಮ ಕಾಂಗ್ರೆಸ್‌ಗೆ ಸಹ ಅನ್ವಯಿಸಿದರೆ ಕಾಂಗ್ರೆಸ್‌ನವರಿಗೆ ನಡೆಯಬಹುದೇ ? -ಸಂಪಾದಕರು) ಜನರ ಹಿತಕ್ಕಾಗಿ ಸರಕಾರ ಜಮ್ಮುವಿನಲ್ಲಿ ಶ್ರೀ ವೈಷ್ಣೋದೇವಿ ದೇವಸ್ಥಾನದ ಮಂಡಳಿಯಂತೆಯೇ ಈ ದೇವಸ್ಥಾನದ ಆಡಳಿತವನ್ನು ಸರಕಾರ ತೆಗೆದುಕೊಳ್ಳಬಹುದು, ಎಂದು ಹೇಳಲಾಗುತ್ತಿದೆ.