ಹಿಂದೂ ಮಹಾಸಾಗರದಲ್ಲಿ ಉಷ್ಣತೆಯ ಹೆಚ್ಚಳದಿಂದ ಭಾರತದಲ್ಲಿ ಪ್ರವಾಹ ಪರಿಸ್ಥಿತಿ ಉದ್ಭವಿಸಬಹುದು ! – ವಿಶ್ವಸಂಸ್ಥೆಯ ವರದಿ

ವಿಜ್ಞಾನವು ಮಾಡಿದ ತಥಾಕಥಿತ ಪ್ರಗತಿಯಿಂದಾಗಿ ಭೂಮಿಯ ವಾತಾವರಣದಲ್ಲಿ ವಿನಾಶಕಾರಿ ಬದಲಾವಣೆಯಾಗುತ್ತಿದೆ, ಇದನ್ನು ವಿಜ್ಞಾನವಾದಿಗಳು ಯಾವಾಗ ಒಪ್ಪಿಕೊಳ್ಳುವರು ?

ನವಬ ದೆಹಲಿ : ವಿಶ್ವಸಂಸ್ಥೆಯ ‘ಇಂಟರಗವರ್ನಮೇಂಟಲ ಪನೇಲ ಆನ ಕ್ಲೈಮೇಟ ಚೇಂಜ’ನ (‘ಐ.ಪಿ.ಸಿ.ಸಿ.’ಯ) ೬ ನೇ ವರದಿ ‘ಕ್ಲೈಮೆಟ್ ಚೆಂಜ್ ೨೦೨೧ – ದಿ ಫಿಜಿಕಲ್ ಸೈನ್ಸ್ ಬೇಸಿಸ್’ ಪ್ರಕಟಿಸಲಾದಗಿದೆ. ಅದರಲ್ಲಿ ಭಾರತದ ಬಗ್ಗೆ ಎಚ್ಚರಕೆಯನ್ನು ನೀಡುತ್ತಾ ಹಿಂದೂ ಮಹಾಸಾಗರದ ಉಷ್ಣತೆಯು ಹೆಚ್ಚಾಗುವುದರಿಂದ ಸಮುದ್ರದ ಮಟ್ಟ ಹೆಚ್ಚಾಗುತ್ತದೆ ಮತ್ತು ಕರಾವಳಿ ಪ್ರದೇಶಗಳಲ್ಲಿ ಆಗಾಗ ಪ್ರವಾಹ ಉಂಟಾಗುತ್ತದೆ ಎಂದು ಹೇಳಲಾಗಿದೆ.

ಪೃಥ್ವಿಯ ತಾಪಮಾನ ಹೆಚ್ಚಾಗಿದ್ದರಿಂದ ಯಾವ ದುಷ್ಪರಿಣಾಮಗಳು ಕಂಡು ಬರುತ್ತದೆ, ಈ ಕುರಿತು ವರದಿಯನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಮುಂಬರುವ ದಶಕಗಳಲ್ಲಿ ಸಮುದ್ರ ಮಟ್ಟ ಏರಿಕೆ, ಪದೇ ಪದೇ ಪ್ರವಾಹ, ಬಿಸಿ ಅಲೆಗಳು, ಕೆಲವು ಪ್ರದೇಶಗಳಲ್ಲಿ ಧಾರಾಕಾರ ಮಳೆ ಮತ್ತು ಅದೇ ಸಮಯದಲ್ಲಿ ಹತ್ತಿರದ ಪ್ರದೇಶಗಳಲ್ಲಿ ತೀವ್ರ ಬರ ಪರಿಸ್ಥಿತಿಗಳಂತಹ ಘಟನೆಗಳು ಹೆಚ್ಚಾಗಬಹುದು ಎಂದು ಹೇಳಲಾಗಿದೆ.